ಬ್ರೇಕಿಂಗ್ ನ್ಯೂಸ್ ವೃದ್ಧಾಶ್ರಮ ಮತ್ತು ಮಾದಕ ವ್ಯಸನ ಮುಕ್ತ ಯೋಜನೆಯಡಿ ಅರ್ಜಿ ಆಹ್ವಾನ 09/05/202009/05/20201 min read admin ಬೆಳಗಾವಿ : ಕೇಂದ್ರ ಸರ್ಕಾರದ ಯೋಜನೆಗಳಾದ ವೃದ್ಧಾಶ್ರಮ ಮತ್ತು ಮಾದಕ ವ್ಯಸನ ಮುಕ್ತ ಕೇಂದ್ರ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.2020-21 ನೇ ಸಾಲಿಗೆ ಕೇಂದ್ರ ಸರ್ಕಾರದ ಯೋಜನೆಗಳಾದ ವೃದ್ಧಾಶ್ರಮ ಮತ್ತು ಮಾದಕ ವ್ಯಸನ ಮುಕ್ತ ಕೇಂದ್ರ (ಡ್ರಗ್ ಡಿ-ಅಡಿಕ್ಷನ್ ಸೆಂಟರ್) ಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ಅನುದಾನ ಕೋರಿ, ಸ್ವಯಂ-ಸೇವಾ ಸಂಸ್ಥೆಗಳಿoದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮೇ.30 ಅಂತಿಮ ದಿನವಾಗಿದೆ.ಲ್ಲೆಯಲ್ಲಿ ಸ್ವಯಂ-ಸoಸ್ಥೆಗಳ ಮೂಲಕ ಈಗಾಗಲೇ ವೃದ್ಧಾಶ್ರಮ ಮತ್ತು ಮಾದಕ ವ್ಯಸನ ಮುಕ್ತ ಕೇಂದ್ರ (ಡ್ರಗ್ ಡಿ-ಅಡಿಕ್ಷನ್ ಸೆಂಟರ್) ಗಳನ್ನು ನಡೆಸುತ್ತಿರುವ ಹಾಗೂ ಹೊಸದಾಗ ಪ್ರಾರಂಭಿಸಲು ಇಚ್ಛಿಸಿರುವ ಸಂಸ್ಥೆಯವರು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವೆಬ್‌ಸೈಟ್ (www.grants-msje.go.in,http://grantsmsje.gov.in/ngo-login) ಮುಖಾಂತರ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಬಯಸುವರು ಅಗತ್ಯ ದಾಖಲಾತಿಗಳೊಂದಿಗೆ ನಿಗದಿಗೊಳಿಸಿದ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಿ, ಹಾರ್ಡ ಪ್ರತಿಗಳನ್ನು ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಅಂತಿಮ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share