ಬ್ರೇಕಿಂಗ್ ನ್ಯೂಸ್ ಸಿಂಪಿಗಳಿಗೆ ಪರಿಹಾರ ಕಲ್ಪಿಸಲು ಮನವಿ 09/05/202009/05/20201 min read admin ಸವದತ್ತಿ : ಲಾಕ್ಡೌನದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಿಂಪಿಗ ಸಮುದಾಯಕ್ಕೂ ಆರ್ಥಿಕ ನೆರವು ನೀಡಬೇಕೆಂದು ಇಲ್ಲಿನ ಶಾಸಕರ ಕಚೇರಿಯಲ್ಲಿ ಶುಕ್ರವಾರ ಭಾವಸಾರ ಕ್ಷತ್ರೀಯ ಮತ್ತು ನಾಮದೇವ ಸಿಂಪಿ ಸಮಾಜಗಳಿಂದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮೂಲಕ ಸಿಎಮ್ ಗೆ ಮನವಿ ಸಲ್ಲಿಸಲಾಯಿತು.ಹೊಲಿಗೆ ವೃತ್ತಿ ಇವರ ಮೂಲ ಆಸರೆ. ವಾರ್ಷಿಕ 12 ಸಾವಿರ ವರಮಾನ ಗಳಿಸುವ ಪರಿಸ್ಥಿತಿ. ಕೆಲವರು ಹೊಲಿಗೆ ಅಂಗಡಿಯಲ್ಲಿ ಹಾಗೂ ಕೆಲವರು ದಿನಗೂಲಿಯಂತೆ ಕೆಲಸ ನಿರ್ವಹಿಸುತ್ತಾರೆ. ಟೇಲರಿಂಗನ್ನೇ ನಂಬಿಕೊAಡ ಇವರ ಬದುಕು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದೆ. ಇಂತಹ ಸಮಯದಲ್ಲಿ ಸರ್ಕಾರವು ಇವರಿಗೆ ಮಾಸಿಕವಾಗಿ ಐದು ಸಾವಿರ ನೀಡಬೇಕೆಂದು ಮನವಿ ಮಾಡಿದರು.ಈ ವೇಳೆ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಶಂಕರ ಇಜಂತಕರ, ಜ್ಞಾನೇಶ್ವರ ಅಮಠೆ, ಸತೀಶ ಸುತ್ರಾವೆ, ವೆಂಕಟೇಶ ಅಮಠೆ, ಗೋವಿಂದ ಅಮಠೆ, ಬಾಬು ಅಮಠೆ, ಸಂತೋಷ ತೊರಗಲ್ಲಮಠ ಮತ್ತಿತರರು ಇದ್ದರು Share