ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ: ಕನ್ನಡ ಟುಡೇ ವಿಶೇಷ ವರದಿ: ಮುದ್ದೇಬಿಹಾಳ : ಮಣ್ಣಿನ ಸಲಕರಣೆಯನ್ನು ಮಾಡಿ ಜನಸಾಮಾನ್ಯರಿಗೆ ಪ್ರೀತಿಗೆ ಪಾತ್ರರಾಗಿದ್ದು , ಮಣ್ಣಿನ ಸಹಾಯದಿಂದ ಬದುಕು ಕಟ್ಟಿಕೊಂಡ ಮೂಲ ಕುಲಕಸುಬುದಾರನಾದ ಕುಂಬಾರರ ಜನಾಂಗದ ಬದುಕು ಕೊರೊನಾ ವೈರಸ್ ಹೊಡೆತಕ್ಕೆ ಹೊಡೆದ ಗಡಿಗಿಯ ಹಾಗೆ ನುಚ್ಚು ನೂರಾಗಿದೆ. ಹೆಚ್ಚಿನ ಜನರು ಕುಲಕಸುಬುವಾದ, ಮಡಿಕೆ, ಹೊಲೆ, ಗಡಿಗಿಯನ್ನೆ ಮಾಡಿಕೊಂಡು ತಮ್ಮ ದಿನನಿತ್ಯದ ಬದುಕನ್ನು ಮುಂದೊಡಿಸುತ್ತಿದ್ದರು. ಆದರೆ ಲಾಕಡೌನ್ ಇವರ ಜೀವನಕ್ಕೆ ಕತ್ತರಿ ಹಾಕಿ ನೆಲಕಚ್ಚಿ ಬಿಳುವಂತೆ ಮಾಡಿದೆ. ಹೌದು ಜನಸಾಮಾನ್ಯರು ದಿನಬಳಕೆಗೆ ಉಪಯೋಗಿಸುವಂತಹ ಮೂಲಭೂತ ಸಲಕರಣೆಗಳನ್ನು ತಯಾರಿ ಮಾಡಿ ಅದರಿಂದ ಬಂದ ಆದಾಯವನ್ನು ತಮ್ಮ ಜೀವನಕ್ಕೆ ಆಸರೆಯಾಗಿ ಬಳಸಿಕೊಳ್ಳುತ್ತಿದ್ದರು, ಆದರೆ ಇಂದು ಅವರು ಮಾಡುವ ವಸ್ತುಗಳಿಗೆ ಸೂಕ್ತ ಬೇಡಿಕೆ ಇರದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದು , ಕುಂಬಾರರು ಬೇರೆ ವ್ಯವಹಾರ ಮಾಡುವಂತಹ ಅನಿವಾರ್ಯತೆ ಇದೆ.ಮತ್ತು ಬೇಸಿಗೆ ಆರಂಭದಲ್ಲಿ ಇವರು ಮಾಡುವಂತಹ ನೀರಿನ ಗಡಿಗೆಗಳಿಗೆ ಬಾರಿ ಬೇಡಿಕೆ ಇರುತ್ತಿತ್ತು, ಅದರೆ ಲಾಕ್ಡೌನ್ ನಿಂದ ಯಾವದೇ ಬೇಡಿಕೆ ಇರದ ಕಾರಣ ಇವರ ನಷ್ಟ ಅನುಭವಿಸುತ್ತಿದ್ದಾರೆ. ಆದುನಿಕ ಸಲಕರಣೆಯ ಮುಂದೆ ಹೊಡೆದ ಕುಂಬಾರನ ಬದುಕು. ದಿನದಿಂದ ದಿನಕ್ಕೆ ವಿಲಾಸಿ ಜೀವನದತ್ತ ಹೆಜ್ಜೆ ಹಾಕಿದ ಜನಸಾಮಾನ್ಯರು ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಉಪಯೋಗಿಸಲು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಮಣ್ಣಿನ ಪಾತ್ರೆಗಳನ್ನು ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದ ಕುಂಬಾರ ಜನಾಂಗದ ಬದುಕು ಸೂಚನೀಯವಾಗಿದೆ. ಸುಮಾರು ವರ್ಷಗಳ ಹಿಂದೆ ಕುಂಬಾರ ಜನಾಂಗದವರು ಪರಿಶ್ರಮದಿಂದ ಮಾಡಿದ ಮಡಿಕೆ , ಹೊಲೆ, ಗಡಿಗೆ, ಪಾತ್ರೆಗಳನ್ನು ಜನಸಾಮಾನ್ಯರು ಉಪಯೋಗಿಸುತ್ತಿದ್ದರು, ಕಾಲ ಕ್ರಮೇಣ ಜನರ ಜೀವನ ಶೈಲಿ ಬದಲಾದಂತೆ ಮಣ್ಣಿನಿಂದ ಮಾಡಿದ ಪಾತ್ರೆ ಮೂಲೆಗೆ ಸೇರಿದವು, ಮತ್ತು ಕೆಲವು ಸಂಧರ್ಭದಲ್ಲಿ ಮಾತ್ರ ಉಪಯೊಗಿಸುವದರಿಂದ ಕುಂಬಾರ ಜನಾಂಗದ ಬದುಕು ಒಡೆದ ಗಡಿಗೆಯಂತಾಗಿದ್ದು ಮಾತ್ರ ಸುಳ್ಳಲ್ಲಾ, ಸರಕಾರ ವಿಶೇಷ ಸೌಲಭ್ಯ ಘೋಷಿಸಲಿ . ಮೂಲ ಕುಲಸುಬುದಾರಾದ ಕುಂಬಾರ ಜನಾಂಗ, ತೀರಾ ಹಿಂದುಳಿದ ಜನಾಂಗವಾಗಿದೆ, ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಲಾಕಡೌನ್ ನಿಂದ ನಷ್ಟವಾಗಿದ್ದನ್ನು ಗುರುತಿಸಿ ಸರಕಾರ ವಿಶೇಷ ಸೌಲಭ್ಯಗಳನ್ನು ನೀಡಬೇಕು ಎಂದು ಜನಾಂಗದ ಯುವ ಮುಖಂಡ ಕೃಷ್ಣಾ ಕುಂಬಾರ ಆಗ್ರಹಿಸಿದ್ದಾರೆ. ಕುಂಬಾರರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವದರಿಂದ ಇ ಸಮುದಾಯಕ್ಕೆ ಶಿಕ್ಷಣದ ಕೊರತೆ ಮತ್ತು ಆರ್ಥಿಕತೆಯ ಕೊರತೆ ಇದ್ದು ಈ ಜನಾಂಗವನ್ನು ಉನ್ನತಿಕರಣಗೋಳಿಸಲು ಸರಕಾರ ಸಹಾಯ ಹಸ್ತ ಚಾಚಬೇಕಿದೆ. ಕುಂಬಾರ ಅಬಿವೃದ್ದಿ ನಿಗಮ ಸ್ಥಾಪನೆಯಾಗಲಿ. ಕೆಲವು ಜನಾಂಗದ ಅಬಿವೃದ್ದಿ ನಿಗಮದಂತೆ ಕುಂಬಾರ ಅಬಿವೃದ್ದಿ ನಿಗಮ ಸ್ಥಾಪನೆಯಾಗಲಿ ಎಂಬುವದು ಸರ್ವ ಜನಾಂಗದ ಒತ್ತಾಶಯವಾಗಿದೆ. ಈ ನಿಗಮದಿಂದ ಕುಂಬಾರರಿಗೆ ಕುಲಕಸುಬು ಮಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ರಾಜ್ಯದ ಎಲ್ಲಾ ಕುಂಬಾರರ ಬದುಕನ್ನು ಹಸನು ಮಾಡುವ ಅವಶ್ಯಕತೆ ಇದೆ. ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಈ ಜನಾಂಗಕ್ಕೆ ಸರಕಾರ ಆಸರೆಯಾಗಬೇಕಿದೆ. ಇ ಸಮುದಾಯದವರು ಮೂಲ ತಮ್ಮ ಕಸುಬನ್ನೇ ನಂಬಿಕೊoಡಿದ್ದರಿoದ ಇವರಿಗೆ ಕೊರೊನಾ ವೈರಸ್ ಹೊಡೆತಕ್ಕೆ ಸಂಕಷ್ಟದಲ್ಲಿದ್ದಾರೆ ಆದರಿಂದ ಸರಕಾರ ಇವರಿಗೆ ಅಬಿವೃದ್ದಿ ನಿಗಮ ಸ್ಥಾಪಿಸುವ ಅವಶ್ಯಕತೆ ಇದೆ. ಬಾಕ್ಸ್ ನ್ಯೂಸ್ : ನಮ್ಮ ಜನಾಂಗವು ಕೊರೊನಾ ವೈರಸ್ ಲಾಕ್ಡೌನ್ ನಿಂದ ತೀರಾ ಸಂಕಷ್ಟದಲ್ಲಿದೆ, ಸರಕಾರ ಇನ್ನು ಯಾವದೇ ರೀತಿಯಲ್ಲಿ ಪರಿಹಾರವನ್ನು ನಮ್ಮ ಜನಾಂಗಕ್ಕೆ ಘೋಷಿಸಿಲ್ಲಾ, ಮುಂದಿನ ದಿನಗಳಲ್ಲಿ ವಿಶೇಷ ಸೌಲಭ್ಯ ನೀಡಬೇಕು ಎಂದು ಬಸವರಾಜ ಕುಂಬಾರ ಜನಾಂಗದ ಯುವ ಮುಖಂಡ ಹೇಳಿದರು. ಬಾಕ್ಸ್ ನ್ಯೂಸ್ : ಒಂದು ಜನಾಂಗವು ಸುದಾರಣೆಯಾಗಬೇಕಾದರೇ ಸರಕಾರವು ಕೈ ಜೋಡಿಸಬೇಕು, ಕುಂಬಾರ ಜನಾಂಗವು ಲಾಕ್ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿದೆ, ಸರಕಾರ ಮನಗಂಡು ಪ್ಯಾಕೇಜ್ ಘೋಷಣೆ ಮಾಡಲಿ ಎಂದು ಯುವ ಮುಖಂಡ ಕೃಷ್ಣಾ ಕುಂಬಾರ ಆಗ್ರಹಿಸಿದ್ದಾರೆ.
ಗೋಕಾಕ : ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವೃತ್ತಿಪರ ಶಾಮಿಯಾನ, ಸೌಂಡ್ ಮತ್ತು ಡೆಕೋರೇಟರ್ಸ ಮಾಲೀಕರು ಮತ್ತು ಕಾರ್ಮಿಕರಿಗೆ ಅಗತ್ಯ ನೆರವು ನೀಡುವಂತೆ ಆಗ್ರಹಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಬಸವರಾಜ ಹತ್ತರಕಿ ಅವರು ಮನವಿ ಪತ್ರವನ್ನು ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಹತ್ತರಕಿ ಅವರು, ಲಾಕಡೌನ್‍ದಿಂದ ಮದುವೆ, ಸಭೆ-ಸಮಾರಂಭಗಳು ನಡೆಯುತ್ತಿಲ್ಲ. ಮಾಲೀಕರು ಮತ್ತು ಕಾರ್ಮಿಕರು ಕೈಯಲ್ಲಿ ಕೆಲಸವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಶಾಮಿಯಾನ ಖರೀದಿಸುವ ಸಂಬಂಧ ಸಹಕಾರಿ ಬ್ಯಾಂಕು ಹಾಗೂ ಇತರೇ ಮೂಲಗಳಿಂದ ಸಾಲ ಪಡೆಯಲಾಗಿದ್ದು, ಅದನ್ನು ಈಗಿನ ಸಂದರ್ಭದಲ್ಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಶಾಮಿಯಾನ ಮತ್ತೀತರ ಬಳಕೆ ಸಾಮಗ್ರಿಗಳನ್ನು ಒಂದೆಡೆ ಶೇಖರಿಸಿಡಲು ಮಾಲೀಕರು ಗೋಡಾವನ್‍ಗಳನ್ನು ಬಾಡಿಗೆಗೆ ಪಡೆದಿದ್ದು, ಅದನ್ನು ಸಹ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರ್ಥಿಕ ಮತ್ತು ಮಾನಸಿಕವಾಗಿ ನೊಂದಿದ್ದೇವೆ. ವರ್ಷದಲ್ಲಿ 6 ತಿಂಗಳವರೆಗೆ ಮಾತ್ರ ನಮ್ಮ ಕೆಲಸ ನಡೆಯುತ್ತಿದ್ದು 1200 ಕಾರ್ಮಿಕರು ಮತ್ತು 200 ಜನ ಮಾಲೀಕರಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು, ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದು ಸಂಘದವರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಬಸವರಾಜ ಅಂಬನ್ನವರ, ವಿಠ್ಠಲ ಸೂರ್ಯವಂಶಿ, ಆನಂದ ಹಟ್ಟಿಗೌಡರ, ಬಸವರಾಜ ಎಮ್ಮಿ, ಸದಸ್ಯರಾದ ಮುಜಮೀಲ ಕುರಬೇಟ, ಜಾವೀದ ಪಟೇಲ, ಅರ್ಜುನ ನಾರ್ಶಿ, ಗಿರಿಯಪ್ಪ ದುರದುಂಡಿ, ಗಿರೆಪ್ಪ ಶಿಂಗೋಟಿ, ಮಾರುತಿ ಚಿಪ್ಪಲಕಟ್ಟಿ, ಶಂಕರ ಬಿಳ್ಳೂರ, ಕರೆಪ್ಪ ನಂದಿ, ರಂಗಪ್ಪ ನಿಂಗನ್ನವರ, ಮಲ್ಲಿಕ ರಾಜಾಪೂರ, ಲಕ್ಕಪ್ಪ ಹಾದಿಮನಿ, ಮಹೆಬೂಬ ಸೈಯ್ಯದ, ರಾಜು ಫನಿಬಂದ, ಶಹಬಾಜ ಖಾಜಿ, ಹನಮಂತಪ್ಪ ದಳವಾಯಿ ಉಪಸ್ಥಿತರಿದ್ದರು.
ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ತಗೆದುಕೊಂಡ ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ, ಪೋಲೀಸರು, ಕಂದಾಯ, ಪೌರಕಾರ್ಮಿಕ ಇಲಾಖೆ ಗಳೊಂದಿಗೆ ಕರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳು, ಪತ್ರಕರ್ತರು ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದು ಅರಭಾಂವಿ ಕ್ಷೇತ್ರದ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ಲಾಕ್ ಡೌನ್ ಇರುವಾಗ ಅಧಿಕಾರಿ ವರ್ಗದವರು ಜನ ಸಾಮಾನ್ಯರ ಕೆಲಸಗಳನ್ನು ನಿರ್ವಹಿಸುವಲ್ಲಿ ಕಾರ್ಯ ನಿರತರಾಗಿದ್ದಾರೆ ಇಂತಹ ಸಮಯದಲ್ಲಿ ಕೆ ಎಮ್ ಎಪ್ ರಾಜ್ಯಧ್ಯಕ್ಷರು ಹಾಗೂಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕೊರೋನಾ ಹಿನ್ನೆಲೆ ಕೆಲಸ ಮಾಡುತ್ತಿರುವವರಿಗೆ ಲಾಕ್ ಡೌನಗ ಮುಗಿಯುವ ವರೆಗೂ ನಿರಂತರ ಊಟೋಪಚರಣೆಯ ವ್ಯವಸ್ಥೆ ಮಾಡಿದ್ದಾರೆ. ಊಟೋಪಚರಣೆಯ ಸಮಯದಲ್ಲಿ ಸಮಯದಲ್ಲಿ ಬಾಲಚಂದ್ರ ಜಾರಕಿಹೊಳಿ ಟಿಮ್ ಎನ ಎಸ್ ಎಪ್ ನ ದಾಸಪ್ಪಾ ನಾಯಕ್, ಚನ್ನಮಲಿಕಾರ್ಜುನ ಎಕ್ಸಂಬಿ, ಮರೇಪ್ಪ ಮರೆಪ್ಪಗೋಳ, ತಾಲೂಕಾ ದಂಡಾಧಿಕಾರಿ ಡಿ ಜೆ ಮಹಾತ, ಪಿಎಸ್ಐ ಮಲ್ಲಿಕಾರ್ಜುನ್ ಸಿಂಧೂರ್ ಮುಖ್ಯ ಅಧಿಕಾರಿ ದೀಪಕ್ ಹರ್ದಿ, ಹಿರಿಯ ಆರೋಗ್ಯ ನೀರಿಕ್ಷಕ ಚೀದಾನಂದ ಮುಗಳಕೋಡ, ಕಿರಿಯ ಆರೋಗ್ಯ ನೀರಿಕ್ಷಕ ಪ್ರೀತಮ್ ಬೋವಿ ಇವರ ನೇತ್ರತ್ವದಲ್ಲಿ ಎಲ್ಲ ಅಧಿಕಾರಿಗಳಿಗೆ ಹಾಗೂ ಪೌರ ಕಾರ್ಮಿಕರಿಗೆ, ಸಿಬಂದಿಗಳಿಗೆ ಊಟ ನಿಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆಯ ಹಾಲಿ ಸದಸ್ಯರು ಹಾಗೂ ಮಾಜಿ ಸದಸ್ಯರು ಉಸ್ಥಿತರಿದ್ದರು.
ಮುಗಳಖೋಡ: ಪ್ರಪಂಚವನ್ನೇ ಬೆಚ್ಚಿಳಿಸಿರುವ ಕಿಲ್ಲರ ಕೊರೊನಾ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವೆರೆಸಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇದ್ದು, ಈ ಕೊರೊನಾ ರೋಗಕ್ಕೆ ಹೆದರಿ ತಮ್ಮ ತಮ್ಮ ಮನೆಯಲ್ಲಿರುವಾಗ ಇಂದು ಈ ಕೊವಿಡ್-19 ಕೊರೊನಾ ರೋಗದ ವಿರುದ್ಧ ಎದೆತಟ್ಟಿ ನಿಂತು ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯನಿರ್ವಹಿಸುತ್ತಿರುವ ಪುರಸಭೆ ಅಧಿಕಾರಿ, ಸಿಬ್ಬಂದಿಗಳು, ಡಾಕ್ರ‍್ಸ್, ಪೋಲೀಸ್ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪತ್ರಕರ್ತರು, ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯವರ ಕಾರ್ಯ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಎಲ್ಲ ಸಿಬ್ಬಂದಿಯವರನ್ನು ನಾವೇಲ್ಲರೂ ಗೌರವಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ಹೇಳಿದರು. ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಡಾ.ಸಿ.ಬಿ.ಕುಲಿಗೋಡ ಅವರ ಸಾಯಿ ನಿವಾಸದಲ್ಲಿ ರಾಯಬಾಗದ ಅಭಾಜಿ ಪೌಂಡೇಶನ್ ವತಿಯಿಂದ ಕೊರೊನಾ ವಾರಿರ‍್ಸಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದ ನೇತೃತ್ವವಹಿಸಿ ಮಾತನಾಡಿ ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಕಲ್ಲಗಂಡಿ, ದಿನಸಿ ಆಹಾರ ಸಾಮಗ್ರಿ, ತರಕಾರಿಗಳನ್ನು ಹಂಚಿ ನಮ್ಮ ಕೈಲಾದ ಸಹಾಯವನ್ನು ಮಾಡಿದ್ದೇವೆ ಎಂದು ಹೇಳಿದರು. ಈ ಸಮಾರಂಭದಲ್ಲಿ ರಾಯಬಾಗ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಅವರ ಅಮೃತ ಹಸ್ತದಿಂದ ಕೊರೊನಾ ವಾರಿರ‍್ಸಗಳಾದ ಪುರಸಭೆ ಅಧಿಕಾರಿಗಳು ಸಿಬ್ಬಂದಿಯವರು, ಡಾಕ್ರ‍್ಸ್, ಪೋಲೀಸ್, ಅಂಗನವಾಡಿ ಕಾರ್ಯಕರ್ತರು, ಪತ್ರಕರ್ತರು, ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯವರನ್ನು ಶ್ಯಾಲು ಹೊದಿಸಿ ಸನ್ಮಾನಿಸಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ಟ ವಿತರಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಡಾ.ಸಂತೋಷ ಕುಲಿಗೋಡ, ವಸಂತ ಹೊಳ್ಕರ, ಪುರಸಭೆ ಮುಖ್ಯಾಧಿಕಾರಿ ಜಿ.ವಿ.ಡಂಬಳ, ಸಂಜಯ ಕುಲಿಗೋಡ, ಪುರಸಭೆ ಸದಸ್ಯ ಪಿ.ಪಿ.ಆದಪ್ಪಗೋಳ, ಸಂಗೀತಾ ಕುಲಿಗೋಡ, ಸವಿತಾ ಕುಲಿಗೋಡ, ರಾಮು ಪಾಟೀಲ, ವಿಠ್ಠಲ ಯಡವನ್ನವರ, ಕರೇಪ್ಪ ಮಂಟೂರ, ಮಯೂರ ಕುರಾಡೆ, ರಮೇಶ ಯಡವನ್ನವರ, ಗೋಪಾಲ ಯಡವನ್ನವರ, ರವಿ ಹುಲ್ಲೋಳ್ಳಿ, ಕಪೀಲ ಕರಿಭೀಮಗೋಳ, ಆರಕ್ಷಕ ಠಾಣೆಯ ಎ.ಎಸ್.ಐ ದುಂದಮನಿ, ಸಮುದಾಯ ಆರೋಗ್ಯ ಕೇಂದ್ರದ ವೈಧ್ಯರಾದ ರಾಜೇಶ್ವರಿ, ಆಶಾ ಕಾರ್ಯಕರ್ತೆ ಮುಖ್ಯಸ್ಥೆ ಸವೀತಾ ಪೋಳ, ಅಂಗನವಾಡಿ ಮುಖ್ಯಸ್ಥೆ ಜಯಶ್ರೀ ಖಾನಟ್ಟಿ, ಪಿ.ಬಿ.ಖೇತಗೌಡರ, ಹನುಮಾಸಾಬ ನಾಯಿಕ, ಮುಪ್ಪಯ್ಯ ಹಿರೇಮಠ, ಅಲ್ಲಯ್ಯ ಹಿರೇಮಠ, ರಾಮಕೃಷ್ಣ ಕಂಬಾರ, ಪಿ.ಎಂ.ಕುಲಿಗೋಡ, ಎಸ್.ಎ.ಯಡವನ್ನವರ, ಮುಂತಾದವರು ಪಾಲ್ಗೊಂಡಿದ್ದರು.
ಮೂಡಲಗಿ: ಕೊರೊನಾ ಸೋಂಕು ನಿಯಂತ್ರಣದ ಲಾಕ್‌ಡೌನ್ ಸಂದರ್ಭದಲ್ಲಿ ಪತ್ರಕರ್ತರು ಸುದ್ದಿ ಸಂವಹನದಲ್ಲಿ ಪರಿಶ್ರಮಪಟ್ಟಿದ್ದು, ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್‌ವನ್ನು ಸರ್ಕಾರವು ಘೋಷಿಸಬೇಕು ಎಂದು ಮೂಡಲಗಿ ತಾಲ್ಲೂಕಾ ಪತ್ರಕರ್ತರ ಬಳಗದವರು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಸ್ಥಳೀಯ ಎಲ್ಲ ಪತ್ರಕರ್ತರ ಸಂಘಟನೆಯವರು ತೆರಳಿ ತಹಶೀಲ್ದಾರ್ ಡಿ.ಜಿ. ಮಹಾತ್ ಅವರಿಗೆ ಮನವಿಯನ್ನು ಅರ್ಪಿಸಿ ವಿಶೇಷ ಪ್ಯಾಕೇಜ್‌ಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದರು. ಕೊರೊನಾ ಸೋಂಕು ನಿಯಂತ್ರಣದಲ್ಲಿ ಸರ್ಕಾರದ ಎಲ್ಲ ಕಾರ್ಯಯೋಜನೆಗಳಿಗೆ ಪತ್ರಕರ್ತರು ತಮ್ಮ ಜೀವದ ಹಂಗು ಬಿಟ್ಟು ಹಗಲಿರುಳು ಸುದ್ದಿ ಸಂವಹನಕ್ಕಾಗಿ ಶ್ರಮಿಸಿದ್ದಾರೆ. ಕೊರೊನಾ ಮತ್ತು ಕೋವಿಡ್ 19 ಸೋಂಕು ಹರಡದಂತೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವುದು, ಆರೋಗ್ಯ ನಿಯಮಗಳ ಅರಿವು ಮೂಡಿಸುವ ಮೂಲಕ ಪ್ರಾಮಾಣಿಕವಾದ ಸೇವೆಯನ್ನು ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರವು ಪತ್ರಕರ್ತರಿಗೆ ಯಾವದೆ ರೀತಿಯ ಪ್ಯಾಕೇಜ್ ಮತ್ತು ಸೌಲಭ್ಯವನ್ನು ಕಲ್ಪಿಸಿಕೊಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ನಮಗೆಲ್ಲ ನೋವು ತಂದಿದೆ. ಸಾಕಷ್ಟು ಜನ ಪತ್ರಕರ್ತರು ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಡವರಿದ್ದು, ತೊಂದರೆಯಲ್ಲಿರುವರು. ಲಾಕ್‌ಡೌನ್ ಸಂದರ್ಭದಲ್ಲಿ ಆಗಿರುವ ತೊಂದರೆಗೆ ಪ್ರತಿಯಾಗಿ ಸರ್ಕಾರವು ಇತ್ತಿಚೆಗೆ ವಿವಿಧ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸುವ ಮೂಲಕ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಆದರೆ ಪತ್ರಕರ್ತರನ್ನು ಮರೆತಿದ್ದು ಖೇದಕರ ಸಂಗತಿಯಾಗಿದೆ. ಆದ್ದರಿಂದ ಪತ್ರಕರ್ತರಿಗೂ ವಿಶೇಷ ಪ್ಯಾಕೇಜ್‌ವನ್ನು ಘೋಷಿಸಬೇಕು ಮತ್ತು ವಿಮೆ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮೂಡಲಗಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಉಂದ್ರಿ, ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಯ.ಯ. ಸುಲ್ತಾನಪುರ, ಕರ್ನಾಟಕ ಪತ್ರಕರ್ತರ ಸಂಘದ ಪ್ರತಿನಿಧಿ ಎಲ್.ಸಿ. ಗಾಡವಿ, ಬಾಲಶೇಖರ ಬಂದಿ, ವಿ.ಎಚ್. ಬಾಲರಡ್ಡಿ, ಕೃಷ್ಣಾ ಗಿರೆಣ್ಣವರ, ಎಸ್.ಎಂ. ಚಂದ್ರಶೇಖರ, ಅಲ್ತಾಫ ಹವಾಲ್ದಾರ್, ಸತೀಶ ಲಂಕೆಪ್ಪನ್ನವರ, ಮಹಾದೇವ ನಡವಿನಕೇರಿ, ಶಿವಾನಂದ ಹಿರೇಮಠ, ಮಲ್ಲು ಬೋಳನ್ನವರ, ಸುರೇಶ ಪಾಟೀಲ, ರಾಜಶೇಖರ ಮಗದುಮ, ಈಶ್ವರ ಢವಳೇಶ್ವರ, ಪ್ರವೀಣ ಮಾವರಕರ, ಸುರೇಶ ಎಮ್ಮಿ, ಭೀಮಶಿ ತಳವಾರ, ಸಚಿನ ಪತ್ತಾರ ಭಾಗವಹಿಸಿದ್ದರು.
ಚನ್ನಮ್ಮ ಕಿತ್ತೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನ್ನಪೂರ್ಣಾ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದ 5 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಅಬ್ದುಲ್ಲಾ ಇಮಾಮ್‌ಹುಸೇನ ಮುಜಾವರ. ಸಮೀರ ಮಹಮ್ಮದ ರಫೀಕ ಮುಜಾವರ, ಸರ್ಪರಾಜ್ ಲಿಯಾಖತ್ ಮುಜಾವರ, ಸುಹೇಲ್ ಕುತುಬುದ್ದೀನ್ ಇಮಾಮನವರ ಹಾಗೂ ದಸ್ತಗೀರ ಮಕ್ತುಂಸಾಬ್ ಇಮಾಮನವರ ಬಂಧಿತ ಆರೋಪಿಗಳು ಆರೋಪಿಗಳ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಕುರಿತಂತೆ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈಧ್ಯಾಧಿಕಾರಿ ಡಾ. ಎಸ್.ಸಿ. ಮಾಸ್ತಿಹೊಳಿ, ಪ್ರತಿನಿತ್ಯ ಸುಮಾರು ಒಂದು ತಿಂಗಳಿನಿoದಲೂ ತನ್ನ ಸಹಚರರೊಡನೆ ಆಗಮಿಸುತ್ತಿದ್ದ ಅಬ್ದುಲ್ ಮುಜಾವರ ಎಂಬಾತ ವೈದ್ಯರಿಗೆ ಸುಖಾಸುಮ್ಮನೆ ಪೀಡಿಸುತ್ತಿದ್ದ ಅಲ್ಲದೆ ಕೊರೊನಾ ಪರೀಕ್ಷೆ ಮಾಡುವ ಸಂದರ್ಭದಲ್ಲಿಯೂ ಅಡ್ಡಿಪಡಿಸುತ್ತಿದ್ದ, ಅಲ್ಲದೆ ವೈದ್ಯರ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದ ಈತ ಸುಖಾಸುಮ್ಮನೆ ನೀವು ಎಲ್ಲರನ್ನು ಯಾಕೆ ಪರೀಕ್ಷೆ ನಡೆಸುತ್ತಿದ್ದಿರಿ ಎಂದು ಪ್ರಶ್ನಿಸುವದಲ್ಲದೆ ಬೆದರಿಕೆ ಒಡ್ಡುತ್ತಿದ್ದ ಎಂದು ಹೇಳಿದ ಅವರು, ಮನೆ ಮನೆಗೆ ತೆರಳಿ ಕೊರೋನಾ ಪರೀಕ್ಷೆ ಮಾಡುವ ಸಂದರ್ಭದಲ್ಲಿಯೂ ಆಶಾ ಕಾರ್ಯಕರ್ತರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಬೆದರಿಕೆಯೊಡ್ಡಿದ್ದ ಎಂದು ಹೇಳಿದರು. ಆಸ್ಪತ್ರೆಯ ವೈದ್ಯೆ ಅನ್ನಪೂರ್ಣಾ ಅವರಿಗೆ ಈತ ನನಗೆ ನೀವು ತಿಂಗಳಾ ಹಫ್ತಾ ಕೊಡಬೇಕು ಎಂದು ಮಹಿಳಾ ವೈದ್ಯೆಗೆ ಬೇಡಿಕೆ ಇಟ್ಟು ಧಮಕಿ ಹಾಕಿದ್ದ. ಹಫ್ತಾ ಕೊಡದಿದ್ದರೆ ನಿನ್ನ ಉಳಿಸೊಲ್ಲ ಎಂದು ಫೋನ್‌ನಲ್ಲಿ ಹೆದರಿಸುತ್ತಿದ್ದ. ಈತ ಸೋಮವಾರ ಅನ್ನಪೂರ್ಣಾ ಅವರ ಕರ್ತವ್ಯದ ಸಮಯವನ್ನು ಅರಿತ ಈತ ಸೊಮವಾರ ರಾತ್ರಿ 1 ಗಂಟೆಗೆ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ಕು ಜನರ ತಂಡದೊoದಿಗೆ ಆಗಮಿಸಿದ ಈ ಯುವಕ ವೈದ್ಯೆಯನ್ನು ಕರೆದಿದ್ದಾನೆ. ವೈದ್ಯರು ಡಿಲೆವರಿ ಪೇಶಂಟ್ ಬಂದಿದೆ. ನಾನು ಅಲ್ಲಿರುವೆ. ಬೇರೆ ವೈದ್ಯರಿದ್ದಾರೆ ಅವರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ವೈದ್ಯೆ ಅನ್ನಪೂರ್ಣಾ ಅವರನ್ನು ಅವಾಚ್ಯ ಶಬ್ದಳಿಂದ ನಿಂದಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಆಸ್ಪತ್ರೆಯಲ್ಲಿನ ಆಶಾ ಕಾರ್ಯಕರ್ತೆಯರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಹೆದರಿದ ಆಶಾ ಕಾರ್ಯಕರ್ತೆಯರು ಪೊಲೀಸರಿಗೆ ಪೋನ್ ಮಾಡಿ ತಿಳಿಸಲಾಗಿ ಅಲ್ಲಿಂದ ಓಡಿಹೋದ ಯುವಕ ಮತ್ತೆ ಮಂಗಳವಾರ ಬೆಳಿಗ್ಗೆ ಪೋನ್ ಮೂಲಕ ಧಮಕಿ ಹಾಕಿದ್ದಾನೆ. ಇದರಿಂದ ರೋಸಿಹೋಗಿ ಕಿತ್ತೂರು ಪೊಲೀಸ ಠಾಣೆಯಲ್ಲಿ ಮಂಗಳವಾರ ಸಂಜೆ 5 ಯುವಕರ ಮೇಲೂ ವೈದ್ಯೆ ಅನ್ನಪೂರ್ಣಾ ಮೋಹನ ಅಂಗಡಿ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು. ಖಾಸಗಿ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ವೆಂಕಟೇಶ ಉಣಕಲ್ಲಕರ, ಉಪಾಧ್ಯಕ್ಷರಾದ ಡಾ. ಲಾಡಖಾನ್ ಹಾಗೂ ಕಾರ್ಯದರ್ಶಿ ಡಾ. ಬಸವರಾಜ ಪರವನ್ನವರ ಅವರು ಮಾತನಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಮಹಿಳಾ ವೈದ್ಯೆ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಗುಂಡಾಗಳ ಮೇಲೆ ಸರಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಜೈಲಿಗೆ ಅಟ್ಟಬೇಕು ಎಂದು ಒತ್ತಾಯಿಸಿದರು. ರಾಷ್ಟ್ರೀಯ ಮಹಿಳಾ ಒಕ್ಕೂಟದ ಮಹಿಳಾ ಸದಸ್ಯರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಇಲ್ಲವಾದರೆ ಉಗ್ರ ಹೋರಾಟಕ್ಕೆ ನಾಡಿನ ಎಲ್ಲ ಮಹಿಳೆಯರು ಸಿದ್ದರಾಗಿದ್ದೇವೆ ಎಂದು ಎಚ್ಚರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬoಧಿಸಿದoತೆ ಕಿತ್ತೂರು ಹಾಗೂ ಸುತ್ತಲಿನ ಖಾಸಗಿ ವ್ಯೆದ್ಯರ ಸಂಘದ ನೂರಾರು ಸದಸ್ಯ ವೈದ್ಯರು ಪ್ರಕರಣವನ್ನು ಖಂಡಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಆರೋಪಿಗಳನ್ನು ಬಂಧಿಸುವoತೆ ಮನವಿ ಸಲ್ಲಿಸಿದ್ದರು
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಜಗತ್ತಿನಲ್ಲಿಯೇ ಮೂರನೇ ದೊಡ್ಡದಾದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಿಂದ ರೈತರು, ಶ್ರಮಿಕರು, ಬಡವರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಅನುಕೂಲವಾಗಲಿದ್ದು, ಇದರಿಂದ ಮುಂದೆ ಕಷ್ಟಕ್ಕೆ ನೆರವಾಗುವಂತಹ ಪ್ಯಾಕೇಜ್ ಇದಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಬಗ್ಗೆ ಬುಧವಾರದಂದು ಸುದ್ಧಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು, ಕರೆ ನೀಡಿರುವ ಆತ್ಮ ನಿರ್ಭರ ಭಾರತ ಅಭಿಯಾನ ಸಮಸ್ತ ಭಾರತೀಯರ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು. ಕೊರೋನಾ ವೈರಸ್ ಸಂಕಷ್ಟದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿಗಳು 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಭಾರತವನ್ನು ಸದೃಢ ರಾಷ್ಟ್ರವನ್ನಾಗಿಸಲು ಹಾಗೂ ಸ್ವಾವಲಂಬತೆಯನ್ನು ಎತ್ತಿ ಹಿಡಿಯಲು ಇದು ಸಹಾಯಕವಾಗಿದೆ ಎಂದು ಹೇಳಿದರು. ಕೊರೋನಾ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿದ್ದು ನಾಶಮಾಡಲು ಹೊರಟಿದೆ. ಇಂತಹ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಒಗ್ಗಟ್ಟಿನ ಹೋರಾಟ ಅವಶ್ಯವಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಕೊರೋನಾ ಸಮರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎಲ್ಲರಿಗಿದೆ ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.