ಬಸ್ಸ್ ಇರಲಾರದಕ್ಕೆ ನಮ್ಮೂರಿನಿಂದ ನಡಕ್ಕೊಂಡ್ ಬರಬೇಕ್ರೀ

ಬಸ್ಸ್ ಇರಲಾರದಕ್ಕೆ ನಮ್ಮೂರಿನಿಂದ ನಡಕ್ಕೊಂಡ್ ಬರಬೇಕ್ರೀ

ಸ್ಟೋರಿ ಮಕಬುಲ್ ಅ ಬನ್ನೇಟ್ಟಿ:
ಕನ್ನಡ ಟುಡೆ ವಿಶೇಷ:
ಮುದ್ದೇಬಿಹಾಳ : ಬರಬಾರದ ಜಡ್ಡ್ ಬಂದ್ ಮನಷ್ಯಾನ ಮೆತ್ತಗ ಮಾಡೋತ್ರೀ ನಾವು ಸುಡಗಾಡಕ್ಕ ಹೊಗಾಂಗ್ ಆಗಿವ್ರೀ, ಆದ್ರ ಇಂತ ಗತಿ ನಮಗ ಬಂದಿದ್ದಿಲ್ರಿ, ನಮ್ಮ ಹಿರಿಯರು ಹೇಳತ್ತಿದ್ರು ಅದ್ಯಾವದ ಜಡ್ಡ್ ಬಂದಿತ್ತoತ್ ಅದು ಆಗಿಂದ್ ನಮ್ಮ ಕಾಲದಾಗ ಇಂತ ಜಡ್ಡ್ ಬಂದೈತ್ರೀ, ಇದರ ಸಲುವಾಗಿ ನಾವು ಮುದ್ದೇಬಿಹಾಳಕ್ಕ ಬರಬೇಕಂದ್ರ, ಯಾರರ ಪುಣ್ಯಾತ್ಮರು ಕರಕ್ಕೊಂಡ ಬಂದ್ರ ಮೊಟರ್ ಗಾಡಿಯ್ಯಾಗ ಬರಬೇಕ್ರೀ, ಇಲ್ಲಾಂದ್ರ ನೆತ್ತಿ ಸುಡು ಬಿಸಿಲಾಗ ಅಂಗಾಲ ಉರಕೊತ, ಕೈಯಾಗ ಒಂದ ಕೊಲ ಹಿಡ್ಕೊಂಡು ಬರಬೇಕ್ರೀ ಸಾಹೇಬ್ರ.
ಎಂಟ್ ತಿಂಗಳಾತ್ರಿ ತಹಶೀಲ್ದಾರ ಆಪೀಸ್ ನಿಂದ, ಪೋಸ್ಟ್ ಆಪೀಸಿಗಿ ತೀರಗಾಕತ್ತಿವ್ರೀ, ಇನಾ ನಮ್ಮ ತಿಂಗಳ ರೊಕ್ಕ ಜಮಾ ಆಗಿಲ್ರೀ, ಮುಂಜಾನೇದ್ದು ಮುದ್ದೇಬಿಹಾಳಕ್ಕ ಬರೋದ್ ಚೆಂತಾನ ಇಲ್ಲಿ ಬಂದ್ ಗೋತ್ತಿರಲಾದಕ್ಕ ಕಂಡ ಕಂಡವರ ಕಾಲ ಹಿಡಕ್ಕೊಂಡು ಪಗಾರ ಮಾಡಿಸಿಕೊಡ್ರಿ ಅಂತ ಬೇಡಕೊಳ್ಳದಾಗೈತ್ರಿ ನಮ್ಮ ಬದುಕು.
ಉಳ್ಳವರು[ ಪ್ರತಿನಿದಿಗಳು] ನಿಮಗ ಸರಕಾರದ ಸೌಲಭ್ಯಗಳನ್ನು ನಿಮ್ಮ ಮನಿ ಬಾಗಿಲಿಗಿ ಕಳಸ್ತಿವಿ ಅಂತ ಓಟ ಹಾಕಿಸಿಕೊಂಡ್ರು ಆದ್ರ ನಾವು ಅದಿವ್ ಸತ್ತಿವ್ ಅಮತ ಕೇಳವ್ರೂ ಯಾರು ದಿಕ್ಕಿಲ್ರೀ,ಜೀವನಆ ಮಾಡೋದ ಬಾಳ ಕಷ್ಟ ಆಗೇತ್ರೀ ಯಪ್ಪಾ ಎಂದು ತಾಲೂಕಿನ ಜಕ್ಕೇರಾಳ ಗ್ರಾಮದಿಂದ ಬಂದ್ ಮರೆವ್ವ ಮಾದರ ಎನ್ನುವ ಇಳಿವಯಸ್ಸಿನ ಮುದುಕಿಯ ಮಾತಿದು .
ಹೌದು ತಾಲೂಕಿನಲ್ಲಿ ಇಂತ ಇಳಿವಯಸ್ಸಿನವರು ತಮ್ಮ ವೃದ್ದಾಪ ಯೋಜನೆಯನ್ನು ತಗೆದುಕೊಳ್ಳುವ ಸಲುವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ಸುಮಾರು ವೃದ್ದರಿಗೆ ಸರಿಯಾಗಿ ತಿಂಗಳಿಗೆ ಸರಕಾರದಿಂದ ಬರುವ ವೃದ್ದಾಪ ಯೋಜನೆಯ ಹಣವನ್ನು ಯಾವದೇ ಗ್ರಾಮದ ಪೋಸ್ಟ್ ಮ್ಯಾನ್ ಸರಿಯಾಗಿ ನೀಡುತ್ತಿಲ್ಲಾ, ಮತ್ತು ತಾಲೂಕಾ ಕಚೇರಿಯಲ್ಲಿ ಆಡಳಿತ ವೈಪಲ್ಯದಿಂದ ಅನೇಕ ಜನರಿಗೆ ತಿಂಗಳ ಬರುತ್ತಿರುವ ಅನುದಾನ ಅನೇಕ ಸಮಸ್ಯೆಗಳ ನೆಪದಲ್ಲಿ ಬರುತ್ತಿಲ್ಲಾ . ಸರಕಾರದ ಲೇಕ್ಕಾಚಾರದಲ್ಲಿ ತಿಂಗಳಿಗೆ ಎಲ್ಲರಿಗೂ ಹಣ ಮುಟ್ಟಿರುತ್ತದೆ, ಆದರೆ ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ತಿಂಗಳ ವೇತನ ಮುಟ್ಟುತ್ತಿಲ್ಲಾ ಇದಕ್ಕೇಲ್ಲಾ ಯಾರು ಹೊಣೆ.
ವೇತನವನ್ನು ಮಂಜೂರು ಮಾಡಲು ರೇಟ್ ಪೀಕ್ಸ್ .
ತಾಲೂಕಾಡಳಿತಕ್ಕೆ ಯಾವದೇ ಒಂದು ಕೆಲಸದ ವಿಷಯಕ್ಕೆ ಬಂದರೆ ಆ ಕೆಲಸ ಮುಗಿಸಿಕೊಂಡು ಹೊರ ಹೋಗಬೇಕಾದರೆ, ಆ ಕೆಲಸಕ್ಕಿಷ್ಟು ರೇಟ್ ಕೊಡಲೇಬೇಕು ಎನ್ನುವ ಸ್ವಯಂ ಘೋಷಿತ ನಿಯಮ ಇದೆ, ಯಾರೂ ಏನೇ ಹೇಳಿದರು, ಸಂಬAಧ ಪಟ್ಟವರಿಗೆ ಮಾಮೂಲು ಮುಟ್ಟುವ ತನಕ ಮುಂದಿನ ಅದಿಕಾರಿಗಳಿಗೆ ಯಾವದೇ ಪೈಲ್ ಹೊಗುವದಿಲ್ಲಾ ಎನ್ನುತ್ತಿದ್ದಾರೆ ಸಾರ್ವಜನಿಕರು. ಒಂದು ವೃದ್ದಾಪ ವೇತನವನ್ನು ಪಡೆದುಕೊಳ್ಳಬೇಕಾದರೆ ಸರಕಾರದ ನಿಯಮ ಮೀರಿ ಇಲ್ಲಿ ರೇಟ್ ಪೀಕ್ಸ ಮಾಡಿರುತ್ತಾರೆ. ಒಂದು ವೇಳೆ ಕಾನೂನಿನ ಪ್ರಕಾರ ಮಾತನಾಡಿದರೆ ಸರಿಯಾಗಿ ದಾಖಲಾತಿಯನ್ನು ನೀಡಿರುವದಿಲ್ಲಾ ಎಂದು ರದ್ದ ಮಾಡಿ ಬಿಡುತ್ತಾರೆ, ಅಥವಾ ಅಪ್ಲೀಕೇಷನ್ ಹಾಕಲು ಸರ್ವರ್ ಇಲ್ಲಾ, ನಾಲ್ಕು ದಿನಾ ಬಿಟ್ಟು ಬನ್ನಿ ಎನ್ನುವ ಸ್ವಯಂಘೋಸಿತ ನಿಯಮವನ್ನು ಹೇಳಿ ಬಿಡುತ್ತಾರೆ. ಅದೇ ಅವರು ಕೇಳಿದಷ್ಟು ಹಣವನ್ನು ಕೊಟ್ಟರೆ ನಿಮಿಷದಲ್ಲಿ ನಮ್ಮ ಕೆಲಸ ಮಾಡುತ್ತಾರೆ, ತಿಂಗಳದಲ್ಲಿಯೇ ವೃದ್ದಾಪ ವೇತನವನ್ನು ಮಂಜೂರು ಮಾಡುತ್ತಾರೆ ಎಂದು ಪ್ರಗತಿಪರ ಚಿಂತಕರ ಆರೋಪವಾಗಿದೆ.
ಜನಪ್ರತಿನಿದಿಗಳ ಮತ್ತು ಅಧಿಕಾರಿಗಳ ಉತ್ತರವೇನು ?
ಜನಪ್ರತಿನಿದಿಗಳು ಚುನಾವಣೆ ಸಮಯದಲ್ಲಿ ಅನೇಕ ಬೇಡಿಕೆಗಳನ್ನು ಬರವಸೆಗಳನ್ನು ನೀಡಿ ಮತಗಳನ್ನು ಪಡೆದಿರುತ್ತಾರೆ, ಆದರೆ ನಂತರ ಜನರ ಆಶೋತ್ತರಗಳಿಗೆ ಬೇಲೆ ಸಿಗದಂತಾಗುತ್ತದೆ. ಕೆಲವು ಜನ ಪ್ರತಿನಿದಿಗಳು ಹೆಸರಿಗೆ ಅಥವಾ ಪೋಟೋಗಳ ಪೋಜ್‌ಗೆ ತಮ್ಮ ಕೆಲಸವನ್ನು ಮಾಡಿ ಮುಗಿಸಿ ಮತಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ಮರೆತು ಬಿಡುತ್ತಾರೆ. ಇಂತಹ ಆಳುವ ದೊರೆಯ ಮದ್ಯ ಸೋಮಾರಿತನ ಮತ್ತು ಲಂಚಬಾಕ ಅಧಿಕಾರಿಗಳು ದರ್ಬಾರ್ ಹೇಳತೀರದು, ಸರಕಾರದ ಯಾವದೇ ಯೋಜನೆಗಳನ್ನು ಮಂಜೂರು ಮಾಡಿ ಎಂದು ಅವರ ಬಳಿ ಹೋದರೆ, ಕೆಲಸದ ಮೇಲೆ ಇಂತಿಷ್ಟು ಶೇಕಡಾ ಹಣ ಕೊಡಲೇಬೇಕು, ಇವರಿಗೆ ಯಾಕೇ ಎಂದು ಕೇಳಿದರೆ ನಾವು ಪ್ರತಿನಿದಿಗಳಿಗೆ ಕೊಡಬೇಕು ಎಂದು ಕಡಾ ಖಂಡಿತವಾಗಿ ಹೇಳುತ್ತಾರೆ. ಇಷ್ಟೇಲ್ಲಾ ಜನಪ್ರತಿನಿದಿಗಳ ಹೆಸರು ದುರ್ಭಳಕೆಯಾಗುತ್ತಿದ್ದರು ಯಾರು ತುಟಿಪಿಟಕ್ ಎನ್ನದೇ ಇರುವದನ್ನು ನೋಡಿದರೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ. ಏನೇ ಆಗಲಿ ವಯೋ ವೃದ್ದರ ವೃದ್ದಾಪ ಯೋಜನೆಯ ಅನುದಾನ ತೊಂದರೆಯಾಗದೆ ಅವರ ಕೈ ಮುಟ್ಟಲಿ ಎನ್ನುವದೇ ಪತ್ರಿಕೆಯ ಆಶಯ.
ಬಾಕ್ಸ್ ನ್ಯೂಸ್ : ತಾಲೂಕಿನಲ್ಲಿರುವ ಅನೇಕ ವಯೋವೃದ್ದರಿಗೆ ಸರಿಯಾಗಿ ವೃದ್ದಾಪ ಯೋಜನೆಗಳು ತಲುಪುತ್ತಿಲ್ಲಾ, ಪ್ರತಿನಿದಿಗಳು ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ವಯೋವೃದ್ದರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ದಲಿತ ಯುವ ಮುಖಂಡ ಮುತ್ತು ಪೂಜಾರಿ ಆಗ್ರಹಿಸಿದರು
Share
WhatsApp
Follow by Email