ಬ್ರೇಕಿಂಗ್ ನ್ಯೂಸ್ ಉಚಿತ ಹೋಮೀಯೋಪಥಿಕ ರೋಗ ನಿರೋಧಕ ಮಾತ್ರೆಗಳನ್ನು ಧುರೀಣರಾದ ಪ್ರತಾಪರಾವ ಪಾಟೀಲ ಅವರು ವಿತರಣೆ 16/05/20201 min read admin ರಾಯಬಾಗ : ಕೋವಿಡ್-19ದಲ್ಲಿ ನಿರಂತರ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತರಿಗೆ, ಪಂಚಾಯ್ತಿ ಸಿಬ್ಬಂದಿಗಳಿಗೆ ಹಾಗೂ ಪೋಲೀಸ್ ಸಿಬ್ಬಂದಿಗಳಿಗೆ ಅಭಾಜಿ ಫೌಂಡೇಶನ ಹಾಗೂ ಡಾ. ನೂತನ ಭೋರೆ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೋಮೀಯೋಪಥಿಕ ರೋಗ ನಿರೋಧಕ ಮಾತ್ರೆಗಳನ್ನು ಧುರೀಣರಾದ ಪ್ರತಾಪರಾವ ಪಾಟೀಲ ಅವರು ನೀಡಿದರು.ನಂತರ ಧುರೀಣ ಪ್ರತಾಪರಾವ ಪಾಟೀಲ ಅವರು ಮಾತನಾಡಿ ಕೊರೋನಾ ವೈರಸ್ ಈ ಮಾಹಾಮಾರಿ ರೋಗ ಹರಡದಂತೆ ಪ್ರತಿಯೊಬ್ಬರು ಮುಂಜಾಗೃತೆಯನ್ನು ವಹಸಿಕೊಳ್ಳಬೇಕು ಡಾ.ನೂತನ ಭೋರೆ ಅವರು ಕೋವಿಡ್-19ದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ, ಪಂಚಾಯ್ತಿ, ಹಾಗೂ ಪೋಲೀಸ್ ಸಿಬ್ಬಂದಿಗಳಿಗೆ ಹೋಮಿಯೋಪಥಿಕ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿರುವ ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು.ಡಾ.ನೂತನ ಭೋರೆ ಅವರು ಮಾತನಾಡಿ ಕೊರೋನಾ ವೈರಸ್ ರೋಗವು ಬಹಳ ಅಪಾಯವಾಗಿದೆ ಆದ್ದರಿಂದ ಪ್ರತಿಯೊಬ್ಬರ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಈ ಅರ್ಸನಿಕ್ ಅಲ್ಬ್-30 ಹೋಮೊಯೋಪಥಿಕ ಮಾತ್ರೆಗಳು ಬಹಳ ಒಳ್ಳೆಯ ಕೆಲಸ ಮಾಡುತ್ತವೆ ಆದ್ದರಿಂದ ತಾಲೂಕಿನ ರಾಯಬಾಗ, ಭಿರಡಿ, ಜಲಾಲಪೂರ, ಮೇಖಳಿ ಗ್ರಾಮಗಳಲ್ಲಿ ಸುಮಾರು 2 ಸಾವಿರ ಕುಟುಂಬಳಿಗೆ ಈ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದೆಂದು ಹೇಳಿದರು.ಈ ಸಂದರ್ಭದಲ್ಲಿ ಡಾ.ನೂತನ ಭೋರೆ, ನ್ಯಾಯವಾಧಿ ಎಂ.ಕೆ.ಖೊAಬಾರೆ, ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಗಣೇಶ ಕಾಂಬಳೆ, ಅಪ್ಪು ಗಡ್ಡೆ, ಹಣಮಂತ ಸಾನೆ, ಬಾಬಾಸಾಬ ಖವಟಕೊಪ್ಪ, ಚಂದ್ರಕಾAತ ನಾವ್ಹಿ, ಸಂತೋಷ ಮೇತ್ರಿ, ಶಿವಲಿಂಗ ಹಳಿಂಗಳೆ, ಕಲಂದರ ಅತ್ತಾರ, ಅಪ್ಪಾಜಿ ಪೂಜಾರಿ,ವಾಸು ಮನ್ನಿಕೇರಿ ಸೇರಿದಂತೆ ಅನೇಕರು ಹಾಜರಿದ್ದರು. Share