ಬ್ರೇಕಿಂಗ್ ನ್ಯೂಸ್ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಗೋಳಿಸಿದ್ದ ಆದೇಶವನ್ನು ಹಿಂಪಡೆಯಬೇಕೆoದು ಆಗ್ರಹಿಸಿ ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ 21/05/202021/05/20201 min read admin ರಾಯಬಾಗ : ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಗೋಳಿಸಿದ್ದ ಆದೇಶವನ್ನು ಹಿಂಪಡೆಯಬೇಕೆoದು ಆಗ್ರಹಿಸಿ ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ಮಾಡಿದರು.ನಿಡಗುಂದಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಬಿ.ಎಸ್.ಕಾಂಬಳೆ ಅವರು ಗ್ರಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಕೂಡಾ ಕೊವೀಡ್-19 ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲವೆಂದು ಆರೋಪಮಾಡಿ ಅವರನ್ನು ಅಮಾನತು ಮಾಡಿದ್ದು ಖಂಡನಿಯ ಕೂಡಲೇ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕೆAದು ಸದಸ್ಯರು ಆಗ್ರಹಿಸಿದರು. ಕೊವೀಡ್-19 ಸಮಯದಲ್ಲಿ ಗ್ರಾಮದಲ್ಲಿ ಸ್ವಚ್ಛತೆ, ಮತ್ತು ಕರೋನಾ ರೋಗವು ಹರಡದಂತೆ ಫಾಗಿಂಗ, ಡಿಡಿಟಿ ಪೌವಡರನ್ನು ಸಿಂಪಡಿಸಿ ಜನರ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸುತ್ತಿದ್ದಾರೆ ಇವರ ಬಗ್ಗೆ ಮೇಲಾಧಿಕಾರಿಗಳಿಗೆ ಇಲ್ಲಸಲ್ಲದೆ ಆರೋಪ ಮಾಡಿರುವ ಗ್ರಾಮ ಲೆಕ್ಕಾಧಿಕಾರಿಗಳು ಇವರನ್ನು ಅಮಾನತು ಮಾಡಿಸಲು ಯತ್ನಿಸಿದ್ದಾರೆ. ಕೂಡಲೇ ಪಿಡಿಓ ಬಿ.ಎಸ್.ಕಾಂಬಳೆ ಅವರ ಅಮಾನತು ಆದೇಶವನ್ನು ಹಿಂಪಡೆದು ಮತ್ತೆ ಅವರನ್ನು ಈ ಪಂಚಾಯ್ತಿಯ ಸೇವೆಯಲ್ಲಿ ಮುಂದುವರಿಸಬೇಕೆAದು ಸದಸ್ಯರು ಆಗ್ರಹಿಸಿದ್ದಾರೆ ಇಲ್ಲದಿದ್ದರೆ ಪಂಚಾಯ್ತಿಗೆ ಬೀಗ್ ಜಡಿದು ಪ್ರತಿಭಟನೆ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ತಾಲೂಕಾ ಪಂಚಾಯ್ತಿ ಅಧ್ಯಕ್ಷ ಲಕ್ಷö್ಮಣ ಗವಾನಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಲಕ್ಷö್ಮಣ ಹಿರೇಕೊಡಿ, ವಿಠ್ಠಲ ಗೊಂಡೆ, ರಾಮಪ್ಪ ಶಿರೋಳೆ, ಮಲ್ಲಪ್ಪ ಪುಣೇಕರ, ಮುರಗೆಪ್ಪ ವನಜೋಳೆ ಹಾಜರಿದ್ದರು.21 ರಾಯಬಾಗ 2ಪೋಟೋ: ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯ್ತಿ ಪಿಡಿಓ ಅಮಾನತು ಆದೇಶವನ್ನು ಹಿಂಪಡೆಯಬೇಕೆAದು ಆಗ್ರಹಿಸಿ ಸದಸ್ಯರು ಪಂಚಾಯ್ತಿ ಮುಂದೆ ಪ್ರತಿಭಟನೆ ಮಾಡಿದರು Share