ಮೂಡಲಗಿಯ ಮಹಾಲಕ್ಷೀ    ಕ್ಕೋ.ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಚನ್ನಪ್ಪ ಗೋಕಾಕ ಅವರ ನಿಧನಕ್ಕೆ  ಶ್ರದ್ಧಾಂಜಲಿ

ಮೂಡಲಗಿಯ ಮಹಾಲಕ್ಷೀ ಕ್ಕೋ.ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಚನ್ನಪ್ಪ ಗೋಕಾಕ ಅವರ ನಿಧನಕ್ಕೆ ಶ್ರದ್ಧಾಂಜಲಿ

ಮೂಡಲಗಿ: ಬುಧವಾರ ನಿಧನರಾದ ಇಲ್ಲಿಯ ಮಹಾಲಕ್ಷಿ ಕೋ.ಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಚನ್ನಪ್ಪ ಗೋಕಾಕ ಅವರಿಗೆ ಸೊಸೈಟಿಯ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಯವರು ಶುಕ್ರವಾರ ಒಂದು ನಿಮಿಷ ಮೌನವನ್ನು ಆಚರಿಸಿ ನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ದಿ. ಚನ್ನಪ್ಪ ಗೋಕಾಕ ಅವರ ವ್ಯಕ್ತಿತ್ವ ಕುರಿತು ಸೊಸೈಟಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ ಮತ್ತು ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಬಗನಾಳ ಅವರು ಮಾತನಾಡಿದರು.
ಸೊಸೈಟಿ ಅಧ್ಯಕ್ಷ ಶಿವಬಸು ಖಾನಟ್ಟಿ, ನಿರ್ದೇಶಕರಾದ ಮುತ್ತಪ್ಪ ಈರಪ್ಪನವರ, ಶಂಕರ ಮುರಗೋಡ, ಪರಪ್ಪ ಮುನ್ಯಾಳ, ಸಂತೋಷ ಪಾರ್ಶಿ, ಡಾ. ಪ್ರಕಾಶ ನಿಡಗುಂದಿ, ರಮೇಶ ಪಾಟೀಲ, ಅರ್ಜುನ ಗಾಣಿಗೇರ, ಹಣಮಂತ ದೇಸಾಯಿ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು
Share
WhatsApp
Follow by Email