ಬ್ರೇಕಿಂಗ್ ನ್ಯೂಸ್ ಸಹಾಯಧನಕ್ಕೆ ಚಾಲಕರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು 23/05/202023/05/20201 min read admin ಬೆಂಗಳೂರು: ಆಟೋ-ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ 5 ಸಾವಿರ ರೂ. ಸಹಾಯಧನ ಪಡೆಯಲು ಸೇವಾಸಿಂಧು ವೆಬ್ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಸಾರಿಗೆ ಇಲಾಖೆ ಸೂಚಿಸಿದೆ.ಸಹಾಯಧನಕ್ಕಾಗಿ ಸೇವಾಸಿಂಧು ವೆಬ್ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಈ ಹಿಂದೆಯೇ ತಿಳಿಸಿತ್ತು. ಆದರೆ, ವೆಬ್ಪೋರ್ಟಲ್ನಲ್ಲಿ ಅದಕ್ಕೆ ಪೂರಕ ಅವಕಾಶ ಕಲ್ಪಿಸಿರಲಿಲ್ಲ. ಇದೀಗ ವೆಬ್ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್ ಅಭಿವೃದ್ಧಿಪಡಿಸಲಾಗಿದೆ. ಫಲಾನುಭವಿಗಳು https://sevasindhu.karnataka.gov.in/ ವೆಬ್ಪೋರ್ಟಲ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅದಾದ ನಂತರ ಅರ್ಜಿ ಪರಿಶೀಲಿಸಿ, ಅರ್ಹ ಚಾಲಕರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುವುದು ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಕೆ ಸಂದರ್ಭ ಯಾವುದಾದ ಗೊಂದಲಗಳಿದ್ದರೆ, 080-22236698 ಕರೆ ಮಾಡುವಂತೆ ಸೂಚಿಸಲಾಗಿದೆ. Share