ಬ್ರೇಕಿಂಗ್ ನ್ಯೂಸ್ ಮೂಡಲಗಿ: ಕಾಶೀಮಲಿ ಸೋಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ 04/06/202004/06/20201 min read admin ಮೂಡಲಗಿ: ಕೊರೋನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಜೀವ ಪಣಕ್ಕಿಟ್ಟು ವಾರಿಯರ್ಸಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಸ್ಥಳೀಯ ಕಾಶೀಮಲಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವತಿಯಿಂದ ಮೂರು ಸಾವಿರ ಗೌರವ ಧನ ನೀಡಿ ಗೌರವಿಸಲಾಯಿತು.ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಾದ ಗಂಗವ್ವ ಢವಳೇಶ್ವರ,ಗೌರವ್ವ ಗಣಿ,ಸುಶಿಲಾ ನಂದಗಾAವಮಠ,ಲಕ್ಷಿö್ಮÃ ಢವಳೇಶ್ವರ ಅವರನ್ನು ಸೊಸಾಯಿಟಿ ವತಿಯಿಂದ ಗೌರವ ಧನÀ ಚೆಕ್ಕು ನೀಡಿ ಗೌರವಿಸಿದರು.ಸೊಸಾಯಿಟಿ ಅಧ್ಯಕ್ಷ ಅನ್ವರ ನದಾಫ ಉಪಾಧ್ಯಕ್ಷ ಅಪ್ಪಾಸಾಬ ನದಾಫ ನಿರ್ದೇಶಕರಾದ ಮೀರಾಸಾಬ ನದಾಫ,ಮಲೀಕಜಾನ ನದಾಫ,ನೂರಸಾಬ ನದಾಫ,ಇಸಾಕ ಅಹ್ಮದ ನದಾಫ,ದಸ್ತಗೀರಸಾಬ ನದಾಫ ಪ್ರಧಾನ ವ್ಯವಸ್ಥಾಪಕ ಆಯ್.ಎಮ್.ನದಾಫ ಮತ್ತು ಸಿಬ್ಬಂದಿ ವರ್ಗ ಇದ್ದರು Share