Skip to content
You are Here Home 2020 June 4 ಹೊಟೇಲ್ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಾ ದಂಡಾಧಿಕಾರಿ ಪ್ರವೀಣ ಜೈನ್ ಅವರಿಗೆ ಮನವಿ ಸಲ್ಲಿಸುತ್ತಿರುವುದು.
ಚನ್ನಮ್ಮನ ಕಿತ್ತೂರು : ಕೊರೊನಾ ಹಾವಳಿಗೆ ತುತ್ತಾಗಿ ದಿನದ ದುಡಿಕೆ ಇಲ್ಲದೆ ಪರಿತಪಿಸುತ್ತಿರುವ ಹೊಟೇಲ್ ಕಾರ್ಮಿಕರಿಗೆ ಕೂಡಲೇ ರಾಜ್ಯ ಸರ್ಕಾರ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿ ಕಿತ್ತೂರು ರಾಣಿ ಚನ್ನಮ್ಮ ಹೊಟೇಲ್ ಮಾಲಿಕರ ಸಂಘದಿAದ ಗುರುವಾರ ಇಲ್ಲಿಯ ಚನ್ನಮ್ಮನ ಕಿತ್ತೂರು ತಾಲೂಕಾ ದಂಡಾಧಿಕಾರಿ ಪ್ರವೀಣ ಜೈನ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ ಎರಡೂ ಮೂರು ತಿಂಗಳಿನಿAದ ಕೊರೊನಾ ಆರ್ಭಟಕ್ಕೆ ಇಡೀ ದೇಶವೆ ತಲ್ಲಣಗೊಂಡಿದೆ ಆದರೇ ರಾಜ್ಯ ಸರ್ಕಾರ ಸಾಮಾನ್ಯ ಜನರ ಹಾಗೂ ಕೂಲಿಕಾರ್ಮಿಕರ ಜೀವನ ಗಮನದಲ್ಲಿಟ್ಟುಕೊಂಡು ಪರಿಹಾರ ಧನ ನೀಡಿದೆ. ಆದರೇ ಈ ಪರಿಹಾರ ಧನದಲ್ಲಿ ಹೊಟೇಲ್ ಕಾರ್ಮಿಕರನ್ನು ಹಾಗೂ ಮಾಲೀಕರನ್ನು ಕಡೆಗಣಿಸಿದ್ದು ಸರಿಯಲ್ಲ, ಲಾಕಡೌನ ಆದಾಗಿನಿಂದಲೂ ಇಲ್ಲಿಯವರೆಗೂ ಮನೆಯ ಕರೆಂಟ್ ಬಿಲ್ಲ, ತುಂಬಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ ಇತ್ತ ಮಾಲೀಕರ ಬಳಿಯೂ ವ್ಯಾಪಾರ ವಹಿವಾಟುಗಳಿಲ್ಲದೆ ಕಾರ್ಮಿಕರ ಸಂಕಷ್ಠಕ್ಕೆ ಸಹಾಯ ಹಸ್ತ ಚಾಚಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ ಅವರು, ಕೂಡಲೇ ರಾಜ್ಯ ಸರ್ಕಾರ ಎಲ್ಲರಂತೆ ಹೊಟೇಲ ಕಾರ್ಮೀಕರನ್ನು ಗಣನೆಗೆ ತೆಗೆದುಕೊಂಡು ಜೀವನ ಸಾಗಿಸುವ ನಿಟ್ಟಿನಲ್ಲಿ ಪರಿಹಾರ ಧನ ನೀಡಬೇಕೆಂದು ಮನವಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೊಟೇಲ ಮಾಲೀಕರ ಸಂಘದ ಅಧ್ಯಕ್ಷ ವಿಜಯಕುಮಾರ ಶಿಂಧೆ, ಚಂದ್ರಶೇಖರ, ರಾಘವೇಂದ್ರ ನಾಯ್ಕ, ಪ್ರಭಾಕರ ಉಂಡಿ, ರಾಜು ಶೆಟ್ಟಿ, ನಿಸ್ಸಾರಹ್ಮದ ಬೇಟಗೇರಿ, ಪ್ರವೀಣ ಬೆಳಗಾಂವಕರ, ಇಬ್ರಾಹಿಂ ಸೌದಾಗರ, ಶಿವಾನಂದ ಬಸರಕೋಡ, ಗೋಪಾಲ ಸಾಮೂಗ, ವಾಸು ನಾಯ್ಕ ಸೇರಿದಂತೆ ಪಟ್ಟಣದ ಎಲ್ಲ ಹೊಟೇಲ ಮಾಲೀಕರು ಹಾಜರಿದ್ದರು.
Post navigation