ಬುದ್ದಿನಿ  ಗ್ರಾಮಸ್ಥರಿಗೆ ಚಿನ್ನದ ಗಣಿ ಕಂಪನಿ ಮಾಲೀಕರಿಂದ ಮೋಸ

ಬುದ್ದಿನಿ ಗ್ರಾಮಸ್ಥರಿಗೆ ಚಿನ್ನದ ಗಣಿ ಕಂಪನಿ ಮಾಲೀಕರಿಂದ ಮೋಸ

ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಬುದ್ದಿನಿ ಗ್ರಾಮಸ್ಥರಿಗೆ ಚಿನ್ನದ ಗಣಿ ಕಂಪನಿ ಮಾಲೀಕರಿಂದ ಮೋಸ
ಬುದ್ದಿನಿ ಗ್ರಾಮದಲ್ಲಿ 1994, 95ನೇ ಸಾಲಿನಲ್ಲಿ ಬುದ್ಧಿನಿ ಗ್ರಾಮದಲ್ಲಿ ಚಿನ್ನದ ಗಣಿ ಪ್ರಾರಂಭವಾಗಿದ್ದು ಬುದ್ದಿನಿ ಗ್ರಾಮಸ್ಥರಿಗೆ ಉದ್ಯೋಗ ಕೊಡ್ತೀವಿ ಭೂಮಿ ಕಳೆದುಕೊಂಡವರಿಗೆ ಭೂಮಿ ಕೊಡಿಸುತ್ತೇವೆ ಮತ್ತು ನಿಮ್ಮ ಊರು ಮಾದರಿ ಗ್ರಾಮವನ್ನಾಗಿ ಮಾಡುತ್ತೇವೆ ಎಂದು ಊರಿನ ಗ್ರಾಮಸ್ಥರ ಜೊತೆ ಕಂಪನಿ ಆಡಳಿತಾಧಿಕಾರಿಗಳು ಒಪ್ಪಂದ ಮಾಡಿಕೊಂಡಿದ್ದಾರೆ.

ಅದೇ ರೀತಿ ಗ್ರಾಮಸ್ಥರಿಗೆ ಮೋಸ ಮಾಡಿ 1998 ಕಳೆದ ನಂತರ ಉದ್ಯೋಗ ಕೊಡುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದ ನಂತರ ಊರಿನ ರೈತರು ಕಂಪನಿ ಮುಂದೆ ಪುನ ಹೋರಾಟ ಹಮ್ಮಿಕೊಂಡಾಗ ಕಂಪನಿ ಪ್ರಧಾನ ವ್ಯವಸ್ಥಾಪಕರಾದ ಎಂ ಎಸ್ ಚನ್ನಪ್ಪಗೌಡ ಬುದ್ದಿನ್ನಿ ಗ್ರಾಮಸ್ಥರಿಗೆ 80 ಕುಟುಂಬಗಳಿಗೆ ಉದ್ಯೋಗ ಕೊಡುತ್ತೇವೆ ಎಂದು ಲಿಖಿತ ರೂಪದಲ್ಲಿ ಭರವಸೆ ನೀಡುತ್ತಾರೆ ಆಡಳಿತಾಧಿಕಾರಿಗಳು ಪುನ ಸುಳ್ಳು ಭರವಸೆ ಕೊಟ್ಟು ರೈತರ ಮುಖಾಂತರ ನಾವು ನಿಮಗೆ ತಪ್ಪದೇ ಕೆಲಸ ಕೊಡುತ್ತೇವೆ ನೀವು ಈಗ ಕಂಪನಿ ಪ್ರಾರಂಭ ಮಾಡಿ ಎಂದು ಸುಳ್ಳು ಭರವಸೆ ನೀಡಿ ರೈತರ ಮೂಲಕ ಕಂಪನಿ ಪ್ರಾರಂಭ ಮಾಡುತ್ತಾರೆ ನಂತರ ಕೆಲವು ತಿಂಗಳ ಕಲಿಯುತ್ತ ಬಂದರು ಕೆಲವು ರಾಜಕೀಯ ವ್ಯಕ್ತಿಗಳ ಕೈವಾಡದಿಂದ
2004/05 ನೇ ಸಾಲಿನಲ್ಲಿ 450 ಜನರಿಗೆ ಪರಸ್ಥಳದ ಅವರಿಗೆ ಉದ್ಯೋಗ ಕೊಟ್ಟಿರುತ್ತಾರೆ ಆದರೆ ಈ ವಿಷಯ ತಿಳಿದ ನಂತರ ಬುದ್ದಿನ್ನಿ ಗ್ರಾಮಸ್ಥರು ನಮಗೆ ಉದ್ಯೋಗ ಕೊಡಿ ನೀವು ಭರವಸೆಯನ್ನು ಕೊಟ್ಟಿದ್ದೀರಿ ಎಂದು ಕೇಳಲು ಹೋದರೆ ಗ್ರಾಮಸ್ಥರಿಗೆ ಧಮಕಿ ಹಾಕಿ ನಾವು ಕೆಲಸ ಕೊಡುವುದಿಲ್ಲ ನಿಮ್ಮಿಂದ ಏನು ಮಾಡೋಕಾಗುತ್ತೆ ಅದನ್ನು ಮಾಡಿಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕಂಪನಿಯಿಂದ ಹೊರಗಡೆ ತಿಳಿಸಿರುತ್ತಾರೆ.

ತದನಂತರ 2011/ ಮತ್ತು12 ಸಾಲಿನ ಮಾನ್ಯ ಜಿಲ್ಲಾಧಿಕಾರಿ ಸಾವಿತ್ರಿ ಮೇಡಮ್ ಅವರಿಗೆ ನಮಗೆ ಉದ್ಯೋಗ ಕಳೆದುಕೊಂಡಿದ್ದೇವೆ ಉದ್ಯೋಗವನ್ನು ಕೊಡಿಸಿ ಎಂದು ಮನವಿ ಮಾಡಿಕೊಂಡರು ಆದರೆ ಮಾನ್ಯ ಜಿಲ್ಲಾಧಿಕಾರಿಗಳು ಉಸಿ ಭರವಸೆಯನ್ನು ನೀಡಿರುತ್ತಾರೆ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ 2013 14 ನೇ ಸಾಲಿನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಸಿಎಂ ಮುಖ್ಯ ಕಾರ್ಯದರ್ಶಿ ನಮ್ಮ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ನವಾರದ ಕೆ ಶಿವನಗೌಡ ನಾಯಕ್ ಇವರಿಗೆ ಮನವಿ ಕೊಟ್ಟರು ಕೂಡ ಯಾವುದೇ ಪ್ರಯೋಜನವಾಗಿಲ್ಲ ನಮ್ಮ ಮನವಿಗೆ ಯಾವ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ನಮಗೆ ಉದ್ಯೋಗ ಕೊಡಿಸುವುದರಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ ನಮ್ಮ ಮನಸ್ಸಿಗೆ ತುಂಬಾ ನೋವು ಉಂಟಾಗಿ ನಾವು ಊರಿನ ಗ್ರಾಮಸ್ಥರಲ್ಲಿ ಸೇರಿಕೊಂಡು ದಿನಾಂಕ 17/08/2020 ರಂದು ಹೋರಾಟ ಹಮ್ಮಿಕೊಂಡರು ಇದುವರೆಗೆ ಯಾವ ರಾಜಕೀಯ ವ್ಯಕ್ತಿ ಆಗಲಿ ಅಧಿಕಾರಿಯಾಗಲಿ ನಮ್ಮ ಹೋರಾಟಕ್ಕೆ ನಿರ್ಲಕ್ಷಿಸುತ್ತಿದ್ದಾರೆ.

ನಮಗೆ ನ್ಯಾಯ ಸಿಗುವವರೆಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ ನಮಗೆ ಉದ್ಯೋಗ ಬೇಕು ಭೂಮಿ ಕಳೆದುಕೊಂಡಿರಬೇಕು ಒಂದು ವೇಳೆ ನಮಗೆ ಉದ್ಯೋಗವನ್ನು ಕೊಡದಿದ್ದರೆ ನಾವು ಸಾಯುವುದಕ್ಕೆ ಸಿಧ ಮಳೆ ಬರಲಿ ಚಳಿಯಾಗಲ್ಲಿ ಯಾವುದಕ್ಕೂ ಅಂಜುವುದಿಲ್ಲ ಎಷ್ಟು ವರ್ಷಗಳು ಕಳೆದರೂ ಕೂಡ ನಿರಂತರವಾಗಿ ಹೋರಾಟ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ನಮಗೆ ಏನಾದರೂ ತೊಂದರೆ ಆದರೆ ಕಂಪನಿ ವ್ಯವಸ್ಥಾಪಕರು ಮತ್ತು ರಾಜಕೀಯ ವ್ಯಕ್ತಿಗಳು ಅಧಿಕಾರಿಗಳಿಗೂ ಕಾರಣರಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಂಡಪ್ಪ ಹನುಮಂತ ಬಸವರಾಜ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು
Share
WhatsApp
Follow by Email