ಬಾಲಿವುಡ್​ ಸಿನಿಮಾದಲ್ಲಿ ಕನ್ನಡದ ನಟ ಜೆ.ಕೆ

ಬಾಲಿವುಡ್​ ಸಿನಿಮಾದಲ್ಲಿ ಕನ್ನಡದ ನಟ ಜೆ.ಕೆ

ಸ್ಯಾಂಡಲ್​ವುಡ್​ನಲ್ಲಿ ಜೆಕೆ ಎಂದೇ ಖ್ಯಾತರಾಗಿರುವ ನಟ ಕಾರ್ತಿಕ್​ ಜಯರಾಮ್​ ಕಾಲಿವುಡ್​ನಲ್ಲಿ ಖಾತೆ ತೆರೆದ ನಂತರ ಮತ್ತೆ ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ರಾವಣನಾಗಿ ಹಾಗೂ ಓ ಪುಷ್ಪ ಐ ಹೇಟ್ ಟಿಯರ್ಸ್ ಸಿನಿಮಾದ ಮೂಲಕ ನಾಯಕನಾಗಿ ಹಿಂದಿ ಪ್ರೇಕ್ಷಕರಿಗೆ ಪರಿಚಯವಾಗಿರುವ ಜೆಕೆ ಈಗ ಮತ್ತೊಂದು ಸಿನಿಮಾದ ಮೂಲಕ ರಂಜಿಸಲು ಸಿದ್ಧರಾಗಿದ್ದಾರೆ.

ಜೆಕೆ ಈಗಾಗಲೇ ಕಿರುತೆರೆ ಹಾಗೂ ಬೆಳ್ಳಿತೆರೆ ಮೂಲಕ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.

ಕಿರುತೆರೆಯಲ್ಲಿ ರಾವಣನಾಗಿ ಬೆಳ್ಳಿತೆರೆಯಲ್ಲಿ ಓ ಪುಷ್ಪ ಐ ಹೇಟ್ ಟಿಯರ್ಸ್ ಸಿನಿಮಾದ  ಮೂಲಕ ನಾಯಕನಾಗಿ ರಂಜಿಸಿದ್ದಾರೆ. 

ಕನ್ನಡದ ಪ್ರತಿಭಾನ್ವಿತ ನಟ ಜೆಕೆ ಈಗ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ.

ಹೌದು ಬಾಲಿವುಡ್ ಸಿನಿಮಾದಲ್ಲಿ ಕ್ರಿಕೆಟಿಗನಾಗಿ ರಂಜಿಸಲಿದ್ದಾರೆ ಜೆಕೆ.

ತಾಪ್ಸಿ ಪನ್ನು ಅಭಿನಯದ ಶಹಬಾಸ್​ ಮಿಥು ಸಿನಿಮಾದಲ್ಲಿ ಜೆಕೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಭಾರತೀಯ ಕ್ರಿಕೆಟ್​ ಆಟಗಾರ್ತಿ ಮಿಥಾಲಿ ರಾಜ್​ ಅವರ ಜೀವನಾಧಾರಿತ ಸಿನಿಮಾದಲ್ಲಿ ಜೆಕೆ ಕ್ರಿಕೆಟಿಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅರಸಿ ಬಂದ ಪಾತ್ರಕ್ಕಾಗಿ ಕೇವಲ ಹತ್ತು ನಿಮಿಷದಲ್ಲಿ ರಿಹರ್ಸಲ್​ ಮಾಡಿ ಆಡಿಷನ್​ ಕೊಟ್ಟಿದ್ದರಂತೆ ಜೆಕೆ.

ಈ ಸಿನಿಮಾದಲ್ಲಿ ಜೆಕೆ ಹೊಸ ಲುಕ್​ನಲ್ಲಿ ಅಂದರೆ ಗಡ್ಡ ಇಲ್ಲದೆ ಕಾಣಿಸಿಕೊಳ್ಳಲಿದ್ದಾರಂತೆ.

ಲಾಕ್​ಡೌನ್​ನಿಂದಾಗಿ ಇನ್ನು ಜೆಕೆ ಅವರ ಪಾತ್ರದ ಚಿತ್ರೀಕರಣ ಆರಂಭವಾಗಿಲ್ಲ.

ಆದರೆ ಈಗಾಗಲೇ ಶಹಬಾಸ್​ ಮಿಥು ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಮೊದಲ ಶೆಡ್ಯೂಲ್​ ಶೂಟಿಂಗ್​ ಮುಗಿದಿದೆ.

ಕನ್ನಡ, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೆಕೆ ಸದಾ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

Share
WhatsApp
Follow by Email