ಭಾರತದ  ಮೊದಲ ಹೈಡ್ರೋಜನ್ ಬಸ್ ಅನಾವರಣ

ಭಾರತದ ಮೊದಲ ಹೈಡ್ರೋಜನ್ ಬಸ್ ಅನಾವರಣ

ಹೈಡ್ರೋಜನ್‌ ಬಸ್

ಡೀಸೆಲ್‌, ಪೆಟ್ರೋಲ್‌ ಬಳಕೆಯ ಬದಲಾಗಿ ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದಕ್ಕೆ ಸಾಗಿ ಹೈಡ್ರೋಜನ್‌ ವಾಹನಗಳ ಆವಿಷ್ಕಾರ ಆರಂಭವಾಗಿದೆ. ಅದೇ ನಿಟ್ಟಿನಲ್ಲಿ ಮಹಾರಾಷ್ಟ್ರದ ಪುಣೆಯ ಕೆಪಿಐಟಿ ಸಂಸ್ಥೆ ಕೇಂದ್ರೀಯ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಜತೆಗೂಡಿ ದೇಶದಲ್ಲಿಯೇ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ಮೊದಲ ಹೈಡ್ರೋಜನ್‌ ಬಸ್‌ ಅನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌ ಅನಾವರಣಗೊಳಿಸಿದ್ದಾರೆ.

ಏನಿದು ಹೈಡ್ರೋಜನ್‌ ಬಸ್?

ಹೈಡ್ರೋಜನ್‌ ಬಸ್ಸನ್ನು ಒಂದು ರೀತಿಯಲ್ಲಿ ಎಲೆಕ್ಟ್ರಿಕ್‌ ಬಸ್ಸು ಎಂದೇ ಹೇಳಬಹುದು. ಏಕೆಂದರೆ ಇದೂ ಕೂಡ ಬ್ಯಾಟರಿ ಆಧಾರಿತವಾಗಿರುತ್ತದೆ. ಈ ಬಸ್ಸಿಗೆ ಹೈಡ್ರೋಜನ್‌ ಹಾಕಿದರೆ ಅದು ಆಮ್ಲಜನಕದ ಕಣಗಳೊಂದಿಗೆ ಸೇರಿಕೊಂಡು ವಿದ್ಯುತ್‌ ತಯಾರಿಸುತ್ತದೆ. ಇದರಿಂದಾಗಿ ಬಸ್‌ನಲ್ಲಿರುವ ಬ್ಯಾಟರಿ ಚಾರ್ಜ್‌ ಆಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?

ಇಂಧನ ಕೋಶ (ಎಫ್ಸಿಇವಿ) ಮೂಲಕ ಈ ಬಸ್‌ ಕೆಲಸ ಮಾಡುತ್ತದೆ. ಹೈಡ್ರೋಜನ್‌ ಮತ್ತು ಗಾಳಿಯನ್ನು ಬಳಕೆ ಮಾಡಿ ವಿದ್ಯುತ್‌ ಉತ್ಪಾದಿಸುತ್ತದೆ. ಯಾವುದೇ ರೀತಿಯ ಹೊಗೆ ಹೊರಗೆ ಬರುವುದಿಲ್ಲ.

ಇಲ್ಲಿ ವಿದ್ಯುತ್‌ ತಯಾರಾದಂತೆಯೇ ನೀರಿನ ಆವಿ ಮತ್ತು ಶಾಖ ಗಾಳಿ ಉತ್ಪತ್ತಿಯಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎನ್ನುವುದು ತಜ್ಞರ ಮಾತು.

ಡೀಸೆಲ್‌ಗಿಂತ ಉತ್ತಮ:

ಹೈಡ್ರೋಜನ್‌ ಗಾಡಿ ಬಳಕೆ ಮಾಡುವುದರಿಂದ ನಿಮಗೆ ಡೀಸೆಲ್‌ಗಿಂತ ಅತಿ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದು.

ಬಂದಿದೆ ಹೈಡ್ರೋಜನ್‌ ಕಾರು:

ಹೈಡ್ರೋಜನ್‌ ಆಧಾರಿತ ಕಾರು ಈಗಾಗಲೇ ಅನಾವರಣಗೊಂಡಿದೆ. ಟೊಯೊಟಾ ಕಿರ್ಲೋಸ್ಕರ್‌ ಸಂಸ್ಥೆಯು ಐಸಿಎಟಿ ಒಂದಿಗೆ ಸೇರಿಕೊಂಡು ತಯಾರಿಸಿರುವ “ಟೊಯೊಟಾ ಮಿರಾಯ್‌’ ಹೈಡ್ರೋಜನ್‌ ಕಾರನ್ನು ಮಾರ್ಚ್‌ ತಿಂಗಳಲ್ಲೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅನಾವರಣಗೊಳಿಸಿದ್ದರು.

Share
WhatsApp
Follow by Email