ಬೆಂಗಳೂರಿನ ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ‘ಕ್ಯೂ’ ನಿಲ್ಲಬೇಕಾಗಿಲ್ಲ! ಬಂದಿದೆ ಹೊಸ ವಿಧಾನ

ಬೆಂಗಳೂರಿನಲ್ಲಿ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚೀಟಿ ಪಡೆದುಕೊಳ್ಳುವುದಕ್ಕಾಗಿ ಸಾಲಿನಲ್ಲಿ ನಿಂತುಕೊಳ್ಳಬೇಕಾಗಿತ್ತು. ಅದರ ಬದಲಿಗೆ ಆನ್‌ಲೈನ್‌ ಮೂಲಕವೇ ವೈದ್ಯರ ಭೇಟಿಗೆ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಇಂಥದೊಂದು ವ್ಯವಸ್ಥೆ ಜಾರಿಗೊಳಿಸುವುದಾಗಿ ಸ್ವತಃ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‌ಗೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್, ರೋಗಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ತಗ್ಗಿಸಲು ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್‌ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್‌ ಹೆಸರು ನೋಂದಣಿ ಹಾಗೂ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುವುದು. ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವೈದ್ಯರಿಗಾಗಿ ಬೆಂಗಳೂರಿಗರು ಕ್ಯೂ ನಿಲ್ಲಬೇಕಾಗಿಲ್ಲಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನ ಸಂಖ್ಯೆ ಕಡಿಮೆ ಮಾಡಬೇಕಿದೆ. ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್‌ ಸಂದೇಶ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಜನರ ಕ್ಯೂ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ವೈದ್ಯರ ಸಮಯ ನಿಗದಿ, ಯಾವ ವೈದ್ಯರು ಎಂಬ ಮಾಹಿತಿಗಳನ್ನು ಮೊಬೈಲ್‌ಗೆ ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ತಮಗೆ ನಿಗದಿಪಡಿಸಿರುವ ಸಮಯಕ್ಕೂ ಪೂರ್ವದಲ್ಲಿ ಯಾರೂ ಆಸ್ಪತ್ರೆಗೆ ಬಂದು ಕಾಯುವ ಅಗತ್ಯ ಇರುವುದಿಲ್ಲ. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಜನರು ಬರುವ ಮೊದಲೇ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದರ ಜೊತೆಗೆ ಡಿಜಿಟಲ್‌ ಪಾವತಿ ಮಾಡುವ ವ್ಯವಸ್ಥೆ ತರಲಾಗುವುದು.

ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 51 ಹಾಸಿಗೆಗಳ ಐಸಿಯು ಇದ್ದು, ಕೋವಿಡ್ ಬಳಿಕ ಇಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಸಿಬ್ಬಂದಿಯನ್ನು ನೀಡಲಾಗುವುದು. ನಾಲ್ಕು ಆರ್ಥೊಪೆಡಿಕ್ ತಜ್ಞರು ಈ ಆಸ್ಪತ್ರೆಯಲ್ಲಿದ್ದರೂ 40 ಪ್ರೊಸೀಜರ್ ಮಾತ್ರ ನಡೆಯುತ್ತಿದೆ. ಈ ಸಂಖ್ಯೆಯನ್ನು 100ಕ್ಕೆ ಏರಿಸಬೇಕು. ಅದೇ ರೀತಿ ಸಭೆ ನಡೆಸುವ ಮೂಲಕ ವಿವಿಧ ವಿಭಾಗಗಳ ನಡುವೆ ಸಮನ್ವಯತೆ ತರಬೇಕು ಎಂದು ಹೇಳಿದ್ದಾರೆ.

ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನಜಯನಗರ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಲೋಪವಿರುವ ಬಗ್ಗೆ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ. ಐದು ವರ್ಷದಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಯೊಬ್ಬರು, ಯಾವುದೇ ಹಣ ನೀಡದೆ ಚಿಕಿತ್ಸೆ ಪಡೆಯುತ್ತಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಚಾವಣಿ ಸೇರಿದಂತೆ ಕೆಲವೆಡೆ ದುರಸ್ತಿ ಕಾರ್ಯಗಳು ನಡೆಯಬೇಕಿದೆ. ಈ ಹಿನ್ನೆಲೆ ಸುಮಾರು 5 ಕೋಟಿ ರೂ.ನಷ್ಟು ಅನುದಾನ ಬೇಕಿದ್ದು, ಅದನ್ನು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಕಡ್ಡಾಯವಲ್ಲ!

ಬೆಂಗಳೂರು: ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗದ ಪ್ರಕಟಣೆ ಬಂದಿದೆ.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯವಲ್ಲ.

ಮತದಾರರು ಸ್ವಯಂಪ್ರೇರಿತರಾಗಿ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್‌ ಸಂಖ್ಯೆಯನ್ನು ಬಳಸಿ ಅಥವಾಇತರೆ ನಿಗದಿತ ದಾಖಲೆಗಳ ಮೂಲಕವೂ ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡಬಹುದಾಗಿದೆ ಎಂದು ಹೇಳಿದೆ.

ಭಾರತದ ಮೊದಲ ಹೈಡ್ರೋಜನ್ ಬಸ್ ಅನಾವರಣ

ಹೈಡ್ರೋಜನ್‌ ಬಸ್

ಡೀಸೆಲ್‌, ಪೆಟ್ರೋಲ್‌ ಬಳಕೆಯ ಬದಲಾಗಿ ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದಕ್ಕೆ ಸಾಗಿ ಹೈಡ್ರೋಜನ್‌ ವಾಹನಗಳ ಆವಿಷ್ಕಾರ ಆರಂಭವಾಗಿದೆ. ಅದೇ ನಿಟ್ಟಿನಲ್ಲಿ ಮಹಾರಾಷ್ಟ್ರದ ಪುಣೆಯ ಕೆಪಿಐಟಿ ಸಂಸ್ಥೆ ಕೇಂದ್ರೀಯ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಜತೆಗೂಡಿ ದೇಶದಲ್ಲಿಯೇ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ಮೊದಲ ಹೈಡ್ರೋಜನ್‌ ಬಸ್‌ ಅನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್‌ ಅನಾವರಣಗೊಳಿಸಿದ್ದಾರೆ.

ಏನಿದು ಹೈಡ್ರೋಜನ್‌ ಬಸ್?

ಹೈಡ್ರೋಜನ್‌ ಬಸ್ಸನ್ನು ಒಂದು ರೀತಿಯಲ್ಲಿ ಎಲೆಕ್ಟ್ರಿಕ್‌ ಬಸ್ಸು ಎಂದೇ ಹೇಳಬಹುದು. ಏಕೆಂದರೆ ಇದೂ ಕೂಡ ಬ್ಯಾಟರಿ ಆಧಾರಿತವಾಗಿರುತ್ತದೆ. ಈ ಬಸ್ಸಿಗೆ ಹೈಡ್ರೋಜನ್‌ ಹಾಕಿದರೆ ಅದು ಆಮ್ಲಜನಕದ ಕಣಗಳೊಂದಿಗೆ ಸೇರಿಕೊಂಡು ವಿದ್ಯುತ್‌ ತಯಾರಿಸುತ್ತದೆ. ಇದರಿಂದಾಗಿ ಬಸ್‌ನಲ್ಲಿರುವ ಬ್ಯಾಟರಿ ಚಾರ್ಜ್‌ ಆಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?

ಇಂಧನ ಕೋಶ (ಎಫ್ಸಿಇವಿ) ಮೂಲಕ ಈ ಬಸ್‌ ಕೆಲಸ ಮಾಡುತ್ತದೆ. ಹೈಡ್ರೋಜನ್‌ ಮತ್ತು ಗಾಳಿಯನ್ನು ಬಳಕೆ ಮಾಡಿ ವಿದ್ಯುತ್‌ ಉತ್ಪಾದಿಸುತ್ತದೆ. ಯಾವುದೇ ರೀತಿಯ ಹೊಗೆ ಹೊರಗೆ ಬರುವುದಿಲ್ಲ.

ಇಲ್ಲಿ ವಿದ್ಯುತ್‌ ತಯಾರಾದಂತೆಯೇ ನೀರಿನ ಆವಿ ಮತ್ತು ಶಾಖ ಗಾಳಿ ಉತ್ಪತ್ತಿಯಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎನ್ನುವುದು ತಜ್ಞರ ಮಾತು.

ಡೀಸೆಲ್‌ಗಿಂತ ಉತ್ತಮ:

ಹೈಡ್ರೋಜನ್‌ ಗಾಡಿ ಬಳಕೆ ಮಾಡುವುದರಿಂದ ನಿಮಗೆ ಡೀಸೆಲ್‌ಗಿಂತ ಅತಿ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದು.

ಬಂದಿದೆ ಹೈಡ್ರೋಜನ್‌ ಕಾರು:

ಹೈಡ್ರೋಜನ್‌ ಆಧಾರಿತ ಕಾರು ಈಗಾಗಲೇ ಅನಾವರಣಗೊಂಡಿದೆ. ಟೊಯೊಟಾ ಕಿರ್ಲೋಸ್ಕರ್‌ ಸಂಸ್ಥೆಯು ಐಸಿಎಟಿ ಒಂದಿಗೆ ಸೇರಿಕೊಂಡು ತಯಾರಿಸಿರುವ “ಟೊಯೊಟಾ ಮಿರಾಯ್‌’ ಹೈಡ್ರೋಜನ್‌ ಕಾರನ್ನು ಮಾರ್ಚ್‌ ತಿಂಗಳಲ್ಲೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅನಾವರಣಗೊಳಿಸಿದ್ದರು.

ಇನ್ನು ಮುಂದೆ ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಮನೆ-ಮನೆಗೆ ಬರುತ್ತಾರೆ ಪೋಸ್ಟಮ್ಯಾನ್‌ ಗಳು!

ಚಿತ್ರ

ಹುಟ್ಟಿದ ಮಕ್ಕಳು ಹಾಗೂ ಹುಟ್ಟಿನಿಂದ ಐದು ವರ್ಷಗಳ ಮಕ್ಕಳ ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಕಚೇರಿಗಳನ್ನು ಸುತ್ತಬೇಕಿತ್ತು. ಆದರೆ ಈ ಸಮಸ್ಯೆಗೆ ಭಾರತೀಯ ಅಂಚೆ ಇಲಾಖೆ ಸಾಥ್‌ ಕೊಡುತ್ತಿದೆ. ಅಂಚೆ ಕಚೇರಿಯ ಸಿಬ್ಬಂದಿ ಈ ಚಿಕ್ಕ ಮಕ್ಕಳ ಆಧಾರ್ ನೋಂದಣಿಯ ಕೆಲಸ ಮಾಡಲಿದ್ದಾರೆ.

ಆಧಾರ್ ಗುರುತಿನ ಚೀಟಿ ನೀಡುವ ಯುಐಡಿಎಐ (UIDAI)ಯು ಅಂಚೆ ಇಲಾಖೆಗೆ ಈ ಅಧಿಕಾರವನ್ನು ನೀಡಿದೆ. ಒಪ್ಪಂದದ ಪ್ರಕಾರ, ಪೋಸ್ಟ್‌ಮ್ಯಾನ್ ಸ್ವತಃ 0 ರಿಂದ 5 ವರ್ಷದೊಳಗಿನ ಚಿಕ್ಕ ಮಕ್ಕಳ ಆಧಾರ್ ಕಾರ್ಡ್ ನೋಂದಣಿಯನ್ನು ಮನೆಮನೆಗೆ ತೆರಳಿ ಮಾಡಿಕೊಡಲಿದ್ದರೆ. ಈ ಮೂಲಕ ಮಕ್ಕಳಿಗೆ ಆಧಾರ್‍‌ ನೋಂದಣಿ ಮಾಡಿಸುವ ಕೆಲಸದಲ್ಲಿ ಪೋಸ್ಟ್‌ಮ್ಯಾನ್‌ಗಳು ಸಾಕ್ಷಿಯಾಗಲಿದ್ದಾರೆ.

ಸಾಂದರ್ಭಿಕ ಚಿತ್ರ

ಯಾವುದೇ ತರದ ಶುಲ್ಕವನ್ನು ಪಾವತಿಸಬೇಕಾಗಿಲ್ಲ:
ಸಾಮಾನ್ಯ ವ್ಯಕ್ತಿಯ ಗುರುತು, ಆತನ ಆಧಾರ್ ಕಾರ್ಡ್. ನೀವು ಭಾರತದಲ್ಲಿ ವಾಸಿಸುತ್ತಿದ್ದರೆ ನೀವು ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಮಕ್ಕಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ,

ಇದುವರೆಗೆ ಮಕ್ಕಳ ಆಧಾರ್ ಕಾರ್ಡ್ ಪಡೆಯಲು ಕಚೇರಿಗೆ ಹೋಗಬೇಕಿತ್ತು. ಆದರೆ ಈಗ ಮನೆಯ ಚಿಕ್ಕ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಕಚೇರಿಗೆ ಹೋಗುವ ಅಗತ್ಯವಿಲ್ಲ. ಶೂನ್ಯದಿಂದ 5 ವರ್ಷದ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ಪೋಸ್ಟ್ ಮ್ಯಾನ್ ಮನೆ ಮನೆಗೆ ಬರುತ್ತಾರೆ. ಉತ್ತಮ ಭಾಗವೆಂದರೆ ಆಧಾರ್ ಕಾರ್ಡ್ ಮಾಡಲು ಪೋಷಕರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಸಾಂದರ್ಭಿಕ ಚಿತ್ರ

ಅಂಚೆ ಇಲಾಖೆಗೆ ಅಧಿಕಾರ ನೀಡಿದ ಯುಐಡಿಎಐ :
ನಿಮ್ಮ ಮನೆಗೆ ಮಾಹಿತಿ ಪಡೆದುಕೊಳ್ಳಲು ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್ ಬರುತ್ತಾರೆ. ಅವರೇ ನಿಮ್ಮ ಮಕ್ಕಳ ಆಧಾರ್ ಕಾರ್ಡ್ ನೋಂದಣಿಯನ್ನು ಮಾಡಿಕೊಂಡು ಹೋಗುತ್ತಾರೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಆಧಾರ್ ಕಾರ್ಡ್ ನೀಡುವ ಅಧಿಕಾರವನ್ನು ಯುಐಡಿಎಐ ಅಂಚೆ ಇಲಾಖೆಗೆ ಅಧಿಕಾರ ನೀಡಿದೆ. ಪೋಸ್ಟ್‌ಮ್ಯಾನ್ ಸ್ವತಃ 0 ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳ ಆಧಾರ್ ಕಾರ್ಡ್ ಅನ್ನು ಮನೆಮನೆಗೆ ತೆರಳಿ ನೋಂದಣಿ ಮಾಡುತ್ತಾರೆ.

ತಮ್ಮ ಹತ್ತಿರದ ಅಂಚೆ ಕಚೇರಿಗೆ ಕರೆ ಮಾಡಬೇಕು:
ಪೋಷಕರು ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ವಾಸ್ತವವಾಗಿ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಉದ್ದನೆಯ ಸಾಲುಗಳಿವೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಾರೆ. ಈಗ ಆಧಾರ್ ಕಾರ್ಡ್ ನೊಂದಣಿ ಇಲ್ಲದ ಮಕ್ಕಳ ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಕರೆ ಮಾಡಬೇಕಾಗುತ್ತದೆ. ಕರೆ ಮಾಡಿದ ನಂತರ ಸ್ವತಃ ಪೋಸ್ಟ್ ಮ್ಯಾನ್ ಮನೆಗೆ ಹೋಗಿ ಸರ್ವೆ ಮಾಡಿಸಿ ಆಧಾರ್ ಕಾರ್ಡ್ ನೋಂದಣಿ ಮಾಡಿಕೊಡುತ್ತಾರೆ.

ಅಂಚೆ ಕಚೇರಿ ಕೌಂಟರ್‌ಗಳಲ್ಲಿ ಆಧಾರ್ ಕಾರ್ಡ್ ಸೌಲಭ್ಯ ಸಿಗಲಿದೆ:
ನಗರ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ತೊಂದರೆ ಆಗುವುದಿಲ್ಲ, ನಗರ ಪ್ರದೇಶಗಳಲ್ಲಿ ತಹಶೀಲ್ದಾರ್ ಮತ್ತು ಪುರಸಭೆಗಳ ಅಂಚೆ ಕಚೇರಿ ಕೌಂಟರ್‌ಗಳಲ್ಲಿ ಆಧಾರ್ ಕಾರ್ಡ್ ಮಾಡುವ ಸೌಲಭ್ಯ ಲಭ್ಯವಿತ್ತು, ಆದರೆ ಈಗ ಈ ಸೌಲಭ್ಯವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ಯೋಜನೆ ಸಿದ್ಧಪಡಿಸಲಾಗಿದೆ. ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಸಂಜಯ್ ಕುಮಾರ್ ವರ್ಮಾ ಇದನ್ನು ಖಚಿತಪಡಿಸಿದ್ದಾರೆ. ಇದೀಗ ಗ್ರಾಮೀಣ ಶಾಖೆಗಳಲ್ಲೂ ಆಧಾರ್ ಕಾರ್ಡ್ ಮಾಡುವ ಸೌಲಭ್ಯ ನೀಡಲಾಗಿದೆ ಎಂದರು. ಇದಕ್ಕಾಗಿ ಈಗ ಗ್ರಾಮಸ್ಥರು ತಮ್ಮ ತಹಶೀಲ್ದಾರ್ ಅಥವಾ ಕೇಂದ್ರ ಕಚೇರಿಯ ಕಡೆಗೆ ಓಡಾಡಬೇಕಾಗಿಲ್ಲ.


WhatsApp
Follow by Email