ಆ ಗುಂಪಿನ ಒತ್ತಡಕ್ಕೆ ಸುಳ್ಳು ಹೇಳಿಕೆ ಕೊಟ್ಟಿದ್ದೇನೆ;ಮುಸುಕುದಾರಿ ಸಾಕ್ಷಿದಾರ–SIT ಮುಂದೆ ಬಯಲು

ಆ ಗುಂಪಿನ ಒತ್ತಡಕ್ಕೆ ಸುಳ್ಳು ಹೇಳಿಕೆ ಕೊಟ್ಟಿದ್ದೇನೆ;ಮುಸುಕುದಾರಿ ಸಾಕ್ಷಿದಾರ–SIT ಮುಂದೆ ಬಯಲು

ಧರ್ಮಸ್ಥಳ; ನೇತ್ರಾವತಿ ನದಿ ದಡದಲ್ಲಿ ಮಹಿಳೆಯರು, ಯುವತಿಯರು ಸೇರಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಕಳೆದ 15 ದಿನಗಳಿಂದ ಶೋಧ ಕಾರ್ಯಕ್ಕೆ ಕಾರಣನಾಗಿದ್ದ ಸಾಕ್ಷಿದಾರನ ವಿಚಾರಣೆ ವೇಳೆ ನಿಗೂಢ ಮಾಹಿತಿಗಳು ಬಹಿರಂಗವಾಗಿವೆ.

ಆತ ತೋರಿಸಿದ 17 ಜಾಗಗಳ ಪೈಕಿ ಕೇವಲ 2 ಜಾಗಗಳಲ್ಲಿ ಮಾತ್ರ ಮಾನವ ಅಸ್ಥಿಪಂಜರ ಪತ್ತೆಯಾಗಿದ್ದರಿಂದ, ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸಾಕ್ಷಿ–ದೂರುದಾರನ ತೀವ್ರ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅನಾಮಿಕ ಸಾಕ್ಷಿದಾರನ ಹೇಳಿಕೆ

  • “2014ರ ನಂತರ ನಾನು ತಮಿಳುನಾಡಿನಲ್ಲಿ ಇದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ಕೇಳಿದರು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದೆ. ಆದರೆ ಆ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹೇರಿತು,” ಎಂದು ಸಾಕ್ಷಿದಾರನು ಹೇಳಿದ್ದಾನೆ.
  • “2023ರ ಡಿಸೆಂಬರ್‌ನಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದು, ಕೋರ್ಟ್ ಮುಂದೆ ಹೇಳಿಕೆ ನೀಡಲು ಒತ್ತಡ ಹಾಕಿದರು. ಭಯದಿಂದ ಹೇಳಲು ಹಿಂಜರಿದ ನನಗೆ, ಮಹಿಳೆ ಸುಜಾತ ಭಟ್ ಧೈರ್ಯ ತುಂಬಿದರು. ಅವರ ಪ್ರೋತ್ಸಾಹದಿಂದ ನಾನು ಮುಂದೆ ಬಂದೆ,” ಎಂದು ಆತ ವಿವರಿಸಿದ್ದಾನೆ.
  • “ಗುಂಪು ನನಗೆ ಬುರುಡೆ ತಂದು ಕೊಟ್ಟು, ಹೇಗೆ ಮಾತನಾಡಬೇಕು ಎಂದು ದಿನಂಪ್ರತಿ ತರಬೇತಿ ನೀಡುತ್ತಿತ್ತು. ಪೊಲೀಸರ ಮುಂದೆ ಏನು ಹೇಳಬೇಕು ಎಂಬುದನ್ನೂ ಮೂವರು ನಿರಂತರವಾಗಿ ಹೇಳಿಕೊಡುತ್ತಿದ್ದರು. ನಾನು ಅದೇ ರೀತಿಯಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದೇನೆ,” ಎಂದು ಆತ SIT ಮುಂದೆ ಬಾಯ್ಬಿಟ್ಟಿದ್ದಾನೆ.

SIT ಅಧಿಕಾರಿಗಳು ದೂರುದಾರನ ಹೇಳಿಕೆಯನ್ನು ವೀಡಿಯೋ ರೆಕಾರ್ಡ್ ಮಾಡಿರುವುದಾಗಿ ತಿಳಿದು ಬಂದಿದೆ.

Share
WhatsApp
Follow by Email