ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ, ರಾಜ್ಯ ಸರ್ಕಾರ ತಕ್ಷಣವೇ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ತನಿಖೆಯನ್ನು ಪ್ರಾರಂಭಿಸಿತು. ಕಳೆದ 15 ದಿನಗಳಿಂದ ಶೋಧ ಕಾರ್ಯಗಳು ತೀವ್ರಗೊಂಡಿದ್ದು, ಅನಾಮಿಕ ವ್ಯಕ್ತಿ ತೋರಿಸಿದ ಹಲವು ಸ್ಥಳಗಳನ್ನು ಅಗೆದರೂ, ಇದುವರೆಗೆ ಒಂದೇ ಅಸ್ಥಿಪಂಜರ ಮತ್ತು ಕೆಲವು ಮೂಳೆಗಳು ಮಾತ್ರ ಪತ್ತೆಯಾಗಿವೆ.
ಈ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆ ನಡೆಯುತ್ತಿದೆ. ಕೆಲವರು ಹಿಂದೂ ಧಾರ್ಮಿಕ ಕೇಂದ್ರಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರ
ಮೌನ ಮುರಿದ ಧರ್ಮಾಧಿಕಾರಿಗಳು
ಕಳೆದ ಒಂದು ತಿಂಗಳಿನಿಂದ ಯಾವುದೇ ಹೇಳಿಕೆ ನೀಡದೇ ಮೌನವಾಗಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಇದೀಗ ಮೊದಲ ಬಾರಿಗೆ ಮಾಧ್ಯಮದ ಮುಂದೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
“ಈ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಲ್ಪಿತ. ನನಗೂ, ಭಕ್ತರಿಗೂ ಇದರಿಂದ ತುಂಬಾ ನೋವು ಉಂಟಾಗಿದೆ. ಯಾರಿಗೂ ನನ್ನ ಮೇಲೂ, ಕ್ಷೇತ್ರದ ಮೇಲೂ ಅನುಮಾನವಿಲ್ಲ. ಭಕ್ತರು ಈ ವಿಚಾರವನ್ನು ನೋಡಿ ದುಃಖ ವ್ಯಕ್ತಪಡಿಸಿದ್ದಾರೆ” ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕುಟುಂಬದ ಉಸ್ತುವಾರಿ ವಿವರ
ಹೆಗ್ಗಡೆ ಅವರು ತಮ್ಮ ಕುಟುಂಬದ ಕಾರ್ಯವಿಭಾಗಗಳನ್ನೂ ವಿವರಿಸಿದ್ದಾರೆ. “ನನಗೆ ಮೂವರು ಸೋದರರು, ಒಬ್ಬ ಸೋದರಿ ಇದ್ದಾರೆ. ನನ್ನ 2ನೇ ಸೋದರ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತಾರೆ. ಮೂರನೇ ಸೋದರ ಧರ್ಮಸ್ಥಳದಲ್ಲೇ ಇದ್ದು ಆಡಳಿತಾತ್ಮಕ ಕೆಲಸಗಳ ಹೊಣೆ ಹೊತ್ತಿದ್ದಾರೆ. ಅನ್ನಸಂತರ್ಪಣೆ, ಸ್ವಚ್ಛತೆ, ಯಕ್ಷಗಾನ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ನನ್ನ ಸೋದರಿ ಧಾರವಾಡದಲ್ಲಿದ್ದು, ಅವರ ಪತಿ ಧಾರವಾಡ ಮೆಡಿಕಲ್ ಕಾಲೇಜಿನ ವೈಸ್ ಚಾನ್ಸಲರ್ ಆಗಿದ್ದಾರೆ” ಎಂದು ಹೇಳಿದ್ದಾರೆ.
ತನಿಖೆಗೆ ಸ್ವಾಗತ
ಪ್ರಕರಣದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಹೆಗ್ಗಡೆ, “ನಾವು ಆರಂಭದಲ್ಲೇ ಎಸ್ಐಟಿಯನ್ನು ಸ್ವಾಗತಿಸಿದ್ದೇವೆ. ಸೂಕ್ತ ತನಿಖೆಯಿಂದ ಈ ಎಲ್ಲ ಅನುಮಾನ, ಗೊಂದಲಗಳು
