ಉಡುಪಿ: ಪ್ರತಿಭಟನಾ ಹಕ್ಕಿಗೆ ಹೈಕೋರ್ಟ್ ಬೆಂಬಲ – ಎಬಿವಿಪಿ ನಾಯಕರ ವಿರುದ್ಧದ ಪ್ರಕರಣಕ್ಕೆ ತೆರೆ

ಉಡುಪಿ: ಪ್ರತಿಭಟನಾ ಹಕ್ಕಿಗೆ ಹೈಕೋರ್ಟ್ ಬೆಂಬಲ – ಎಬಿವಿಪಿ ನಾಯಕರ ವಿರುದ್ಧದ ಪ್ರಕರಣಕ್ಕೆ ತೆರೆ

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ಆಗ್ರಹಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಉಡುಪಿ ನಗರದಲ್ಲಿ ಪ್ರತಿಭಟನಾ ಜಾಥಾ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ, 15 ವಿದ್ಯಾರ್ಥಿ ನಾಯಕರ ವಿರುದ್ಧ ಐಪಿಸಿ ಕಲಂ 143, 147, 341, 290, 149 ಅಡಿ ಪ್ರಕರಣ ದಾಖಲಿಸಲಾಯಿತು.

ಪ್ರಾರಂಭಿಕ ಹಂತದಲ್ಲಿ ಉಡುಪಿಯ ನ್ಯಾಯಾಲಯದಲ್ಲಿ ವಕೀಲ ಶ್ರೀನಿಧಿ ಹೆಗ್ಡೆ ಅವರ ವಾದದ ಮೇರೆಗೆ ವಿದ್ಯಾರ್ಥಿಗಳಿಗೆ ಜಾಮೀನು ದೊರಕಿತು. ನಂತರ, ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಅರುಣ್ ಶ್ಯಾಮ್ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ರಿಟ್ ಪಿಟೀಷನ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ಏಕಸದಸ್ಯ ಪೀಠ, ಪ್ರಕರಣವನ್ನು ವಜಾಗೊಳಿಸಿ, ವಿದ್ಯಾರ್ಥಿಗಳ ಶಾಂತಿಪೂರ್ಣ ಪ್ರತಿಭಟನಾ ಹಕ್ಕನ್ನು ಬಲಪಡಿಸಿದೆ.

ಈ ಪಿಟೀಷನ್‌ನಲ್ಲಿ ವಕೀಲರಾದ ಶ್ರೀರಾಮ ಅಂಗೀರಸ, ನಿಶಾಂತ್ ಎಸ್.ಕೆ, ರಿತಿಕ್ ವೈ.ಎಂ, ಜಾಗೃತ್, ಚೈತ್ರ ಶ್ರೀಹರಿ, ರಾಧಿಕಾ ಮತ್ತು ತುಷಾರ್ ಅವರು ಅಡ್ವೊಕೇಟ್ ಆನ್ ರೆಕಾರ್ಡ್ ಆಗಿ ಕಾರ್ಯನಿರ್ವಹಿಸಿದರು.

Share
WhatsApp
Follow by Email