ಬ್ರೇಕಿಂಗ್ ನ್ಯೂಸ್ ಹಳ್ಳೂರ; ರಸ್ತೆ ಬಂದ ಮಾಡಿ ದಿಗ್ಬಂದನ 30/03/202030/03/2020 admin ಹಳ್ಳೂರ ; ಗ್ರಾಮದಲ್ಲಿ ಹೊರಗಿನಿಂದ ಬರುವರಿಗೆ ರಸ್ತೆ ಬಂದ ಮಾಡಿ ದಿಗ್ಬಂದನ ಹೇರಲಾಗಿದೆ. ಕೊರೋನಾ ಭೀತಿಯಿಂದ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಅನ್ಯರು ಒಳಗಡೆ ಬರದಂತೆ ಶಿವಾಪೂರ ದಿಂದ ಹಳ್ಳೂರ ಹಾಗೂ ಹಳ್ಳೂರ ಪ್ಲಾಟ ರಸ್ತೆಗೆ ಅಡ್ಡಲಾಗಿ ಕಲ್ಲು ಮಣ್ಣಿನ ಒಡ್ದು ಹಾಕಿ ಮೇಲೆ ಮುಳ್ಳಿನ ಕಂಠಿ ಹಾಕಿ ಸ್ವಯಂ ದಿಗ್ಬಂದನ ಹಾಕಲಾಯಿತು. ಗ್ರಾಮದಲ್ಲಿ ಹೊರಗಿನವರು ವಲಸೆ ಹೋದವರು ಊರೊಳಗೆ ಬಂದರೆ ಮೊದಲು ಆರೋಗ್ಯ ಕೇಂದ್ರಕ್ಕೆ ಕಳಸಿ ಅನೇಕ ಜನರನ್ನು ತಪಾಸಣೆ ಮಾಡಲಾಗಿದೆ.ಹಾಗೂ ಅವರು 15 ದಿನ ಮನೆ ಬಿಟ್ಟು ಹೊರಗೆ ಬಾರದಂತೆ ಸ್ಥಳೀಯ ಆಡಳಿತ ಮಂಡಳಿ ಆದೇಶ ಹೊರಡಿಸಿದ್ದಾರೆ. ಇದೆ ಸಂದರ್ಭದಲ್ಲಿ ಗ್ರಾಮ ಪ ಅಭಿವೃದ್ಧಿ ಅಧಿಕಾರಿಯಾದ ಹಣಮಂತ ತಾಳಿಕೋಟಿ. ಗ್ರಾಮ ಲೆಕ್ಕಾಧಿಕಾರಿ ಸಂಜು ಅಗ್ನೆಪ್ಪಗೋಳ.ಹಳ್ಳೂರ ಬಿಟ್ ಪೊಲೀಸ್ ಏನ್ ಎಸ್ ಒಡೆಯರ.ಪಿ ಏನ್ ಪಾಟೀಲ. ಲಕ್ಷ್ಮನ ಕತ್ತಿ. ಬಾಹುಬಲಿ ಸಪ್ತಸಾಗರ. ರಾಜು ಮುಜಾವರ ಕಿಶೋರ ಗಣಾಚಾರಿ. ಗಿರಾಮಲ್ಲ ಸಂತಿ ಇಬ್ರಾಹಿಂ ಮುಜಾವರ ಸಂಗಪ್ಪ ಪಟ್ಟಣಶೆಟ್ಟಿ. ವರದಿಗಾರರಾದ ಮುರಿಗೆಪ್ಪ ಮಾಲಗಾರ. ರಮೇಶ ಸವದಿ ಅಶೋಕ ಬಾಗಡಿ ಇಬ್ರಾಹಿಂ ಮುಜಾವರ ವಿಠ್ಠಲ ತೊಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು Share