ಬ್ರೇಕಿಂಗ್ ನ್ಯೂಸ್ “ಬಿಜೆಪಿ ವಿಶ್ವದಲ್ಲೇ ದೊಡ್ಡ ಪಕ್ಷವಾಗಿ ಬೆಳೆಯಲು ಕಾರ್ಯಕರ್ತರ ಶ್ರಮ ಅಪಾರ” – ಲಕ್ಕಪ್ಪ ಲೋಕುರಿ 06/04/202006/04/20201 min read admin ಮೂಡಲಗಿ : ಬಿಜೆಪಿ ಇಂದು ದೇಶದಾದ್ಯಂತ ಹೆಮ್ಮರವಾಗಿ ಬೆಳೆಯಲು ಪಂ. ದೀನ ದಯಾಳ ಉಪಾಧ್ಯಾಯ ಅವರ ಕೊಡುಗೆ ಅನನ್ಯವಾಗಿದೆ ಎಂದು ಯುವ ಮುಖಂಡ ಲಕ್ಕಪ್ಪ ಲೋಕುರಿ ಹೇಳಿದರು.ಸೋಮವಾರದಂದು ಇಲ್ಲಿಯ ಅರಭಾವಿ ಮಂಡಲ ಬಿಜೆಪಿಯಿಂದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಪಂ. ದೀನ ದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಾರ್ಟಿ ಎತ್ತರಕ್ಕೆ ಬೆಳೆದಿದೆ. ಇದರ ಹಿಂದಿನ ಶಕ್ತಿ ಪಂ. ದೀನ ದಯಾಳ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ ಮುಖರ್ಜಿ ಅವರಂತಹ ಮಹಾನ್ ನಾಯಕರುಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ ಶಾ ಅವರ ಸಾರಥ್ಯದಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 18 ಕೋಟಿಗೂ ಅಧಿಕ ಸದಸ್ಯರನ್ನು ಬಿಜೆಪಿ ಹೊಂದಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಎಪ್ರೀಲ್ 14 ರವರೆಗೆ ಕೊರೋನಾ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ದೇಶದಾಧ್ಯಂತ ಲಾಕ್ಡೌನ್ ಘೋಷಿಸಿದ್ದು, ಯಾರೂ ಮನೆಯಿಂದ ಆಚೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವಶ್ಯಕ ಪ್ರಸಂಗಗಳಲ್ಲಿ ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಲು ಮರೆಯಬೇಡಿ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆoದು ಲಕ್ಕಪ್ಪ ಲೋಕುರಿ ಹೇಳಿದರು.ಈ ಸಂದರ್ಭದಲ್ಲಿ ಗೋಸಬಾಳ ಗ್ರಾಪಂ ಸದಸ್ಯ ಬಸಪ್ಪ ಕಪರಟ್ಟಿ, ಗುತ್ತಿಗೆದಾರ ಮಹಾದೇವ ಹಾರೂಗೇರಿ, ಮಾರುತಿ ಮುರಗಜ್ಜಗೋಳ, ಬಸು ಗಲಗಲಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು Share