ಬ್ರೇಕಿಂಗ್ ನ್ಯೂಸ್ ಚಿವಟಗುಂಡಿ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಮಾಸ್ಕ ವಿತರಣೆ 08/04/202008/04/20201 min read admin ಬೈಲಹೊಂಗಲ : ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಮಹಾಮಾರಿ ಕೊರೋನಾ ವೈರಸಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಉಚಿತವಾಗಿ ಮಾಸ್ಕ ವಿತರಿಸಲಾಯಿತು.ಗೆಳೆಯರ ಬಳಗದ ಅಧ್ಯಕ್ಷ ಶಿವಾನಂದ ಕೆಂಚನಗೌಡ್ರ ಮಾತನಾಡಿ, ಸೈನಿಕ ವೀರು ದೋಡವೀರಪ್ಪನವರ ಮಾರ್ಗದರ್ಶನದಂತೆ ಗ್ರಾಮಸ್ಥರಿಗೆ ಕೊರೊನಾ ವೈರಾಣು ಹರಡದಂತೆ ಜಾಗೃತಿ ಮೂಡಿಸಿ, ಮಾಸ್ಕಗಳನ್ನು ವಿತರಿಸಲಾಗುತ್ತಿದೆ. ಈ ಕೊರೋನಾದಿಂದಇಡಿ ಪ್ರಪಂಚವೆ ವಿಲ, ವಿಲ ಒದ್ದಾಡತಾಯಿದೆ. ಭಾರತದಲಿಯೂ ಇದರ ಪ್ರಮಾಣ ಹೆಚ್ಚುತಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸರಕಾರದ ಆದೇಶಕ್ಕೆ ಅನುಗುಣವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮನೆ ಬಿಟ್ಟು ಹೊರಗಡೆ ಬರದಂತೆ ಅಚ್ಚು ಕಟ್ಟಾಗಿ ಪಾಲನೆಮಾಡಬೇಕು. ನಿಮ್ಮ ಮನೆಯ ಕಡೆ ಯಾರಾದ್ರೂ ಹೊರಗಡೆ ದೇಶದಿಂದ ಮತ್ತು ರಾಜ್ಯಗಳಿಂದ ಬಂದ ಜನರ ಕಡೆ ಗಮನವಿರಲಿ. ಕೊರೊನಾ ವೈರಸ್ ಲಕ್ಷಣಗಳು ಕಂಡುಬAದರೆ ಕೊಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು. ಇದೇ ವೇಳೆ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ಮಾಸ್ಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಿ.ಎಸ್.ದೋಡವೀರಪ್ಪನವರ, ವಿನೋದ ಮಲ್ಲೂರ, ಪ್ರಕಾಶ್ ಕೇಚನಗೌಡ್ರ, ಅಂಗನವಾಡಿ ಶಿಕ್ಷಕಿಯರಾದ ಲಲಿತಾ ಕೆಂಚನಗೌಡ್ರ, ಶೈಲಾ ವಸ್ತರದ, ಎಸ್‌ಡಿಎಂಸಿ ಸದಸ್ಯ ಮಲ್ಲಪ್ಪ ದೋಡವೀರಪ್ಪನವರ, ನಾಗಪ್ಪ ಸೋಮಣ್ಣವರ, ಬಸವರಾಜ್ ಕೆಂಚಬಾಳ, ಪ್ರಕಾಶ ದೋಡವೀರಪ್ಪನವರ, ಸಿದ್ಧಲಿಂಗ ಗುಲಬಾಜಿ ಹಾಗೂ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. Share