ಬ್ರೇಕಿಂಗ್ ನ್ಯೂಸ್ ಬೈಲಹೊಂಗಲದಲ್ಲಿ ವಿಶೇಷ ಪೊಲೀಸ್ ಪಡೆ ನಿಯೋಜನೆ: ಎಲ್ಲೆಡೆ ಜಾಗೃತಿ ಪಥ ಸಂಚಲನ 08/04/202008/04/2020 admin ಬೈಲಹೊಂಗಲ: ಪಟ್ಟಣದಲ್ಲಿ ಕೊರೊನಾ ವೈರಸ್ ವಿರುದ್ಧ ಸಮರ ಸಾರಿ ಜನರ ರಕ್ಷಣೆಗಾಗಿ ಇಡೀ ದಿನ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರು ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ಪಡೆಯೊಂದಿಗೆ ಬುಧವಾರ ಜಾಗೃತಿಯ ಪಥ ಸಂಚಲನ ಮಾಡಿದರು.ಪೊಲೀಸ್ ಠಾಣೆ ಆವರಣದಿಂದ ಶಿಸ್ತಿನ ಸಿಪಾಯಿಗಳಂತೆ ತೆರಳಿದ ಪೊಲೀಸರು ಪ್ರಮುಖ ಬೀದಿಗಳಲ್ಲಿ ಕೊರೊನಾ ವೈರಸ್ ತಡೆಗೆ ಯಾರೊಬ್ಬರು ಮನೆ ಬಿಟ್ಟು ಹೊರಗಡೆ ಬಾರದಂತೆ ಜಾಗೃತಿ ಮೂಡಿಸಿದರು.ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ ಶೆಟ್ಟಿ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ರಕ್ಷಣೆಗಾಗಿ ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗಿದೆ. ವಿನಾಕಾರಣ ಮನೆಯಿಂದ ಆಚೆ ಬರದೆ ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ದಿನ ನಿತ್ಯದ ಅವಶ್ಯಕತೆಗೆ ಬೇಕಾದ ದಿನಸಿ, ಆಹಾರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜವಾವ್ದಾರಿಯನ್ನು ಸರ್ಕಾರ, ಅಧಿಕಾರಿಗಳು ಪ್ರಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ವೈದ್ಯರು ತಮ್ಮ ಜೀವ ಲೆಕ್ಕಿಸದೆ ಕೊರೊನಾ ಶಂಕಿತರಿಗೆ ಚಿಕಿತ್ಸೆ ಕಲ್ಪಿಸುತ್ತಿದ್ದಾರೆ. ಇದನೆಲ್ಲ ಮನಗಂಡು ಜನರು ಮನೆ ಬಿಟ್ಟು ಆಚೆ ಬರದೆ ಮನೆಯಲ್ಲಿಯೇ ಇದ್ದು ಪೊಲೀಸರೊಂದಿಗೆ ಸಹಕರಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಪೊಲೀಸ್ ಸಿಬ್ಬಂದಿ ಬಹಳ ಜಾಗರುಕತೆಯಿಂದ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜನರು ಪೊಲೀಸರ ತಾಳ್ಮೆ ಕೆಣಕಬಾರದು ಎಂದು ವಿನಂತಿಸಿದರು. ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್ಐ ಎಂ.ಎಸ್.ಹೂಗಾರ, ಎಎಸ್ಐ ಎಂ.ವಿ.ಮಾವಿನಕಟ್ಟಿ, ಸಿಬ್ಬಂದಿಗಳಾದ ಎಸ್.ಐ.ಅಮರಾಪುರ, ವಿ.ಎಸ್.ಯರಗಟ್ಟಿಮಠ, ಎಸ್.ಎಚ್.ಹಾದಿಮನಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು. Share