ಬ್ರೇಕಿಂಗ್ ನ್ಯೂಸ್ ಅನ್ನದಾನ ಮಾಡಿ ಮಾನವಿಯತೆ ಮೆರೆದ ಯುವಕರು 11/04/202011/04/20201 min read admin ಮಕಬುಲ್ ಅ ಬನ್ನೇಟ್ಟಿ.ಕನ್ನಡ ಟುಡೇ ವಿಶೇಷ.ಮುದ್ದೇಬಿಹಾಳ: ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತನಬೇಡ ಮುಂದೆ ನಿನಗಾಗಿ ಕಟ್ಟಿರುವದು ಬುತ್ತಿ ಸರ್ವಜ್ಞ , ಎನ್ನುವ ಹಾಗೆ ಮಾನವನ ಹತ್ತಿರ ಹಣ ಎಷ್ಟಿದ್ದರೆ ಏನು ದಾನವ ಮಾಡುವ ಮನಸ್ಸಿರಬೇಕು, ಸಮಾಜದಲ್ಲಿ ಸಾಕಷ್ಟು ಸ್ಥತಿವಂತರು ಇದ್ದಾರೆ ಕೆಲವರು ಮಾತ್ರ ದಾನವ ಮಾಡುವ ಮನಸ್ಸುಳ್ಳವರು, ಮಕ್ಕಳು ಮೋಮ್ಮಕ್ಕಳಿಗೆ ಆಸ್ತೀ ಮಾಡಿ ಇಡಬೇಕೇನ್ನುವರ ಮದ್ಯ ನಗರದ ಸೂರಜ್ ಸೋಸಿಯಲ್ ಗ್ರುಪ್ ನ ಸದಸ್ಯರ ಮಾಡುವಂತಹ ಕಾರ್ಯ ಸರ್ವಧರ್ಮಿಯರು ಮೇಚ್ಚುಗೆ ವ್ಯಕ್ತ ಪಡಿಸುತ್ತಿದ್ದು, ಸಮಾಜ ಕಾರ್ಯ ಮಾಡುವರಿಗೆ ಅಭಿನಂದನೆಯ ಸುರಿಮಳೆ ಸಲ್ಲಿಸುತ್ತಿದ್ದಾರೆ ತಾಲೂಕಿನ ಜನತೆ.ಹೌದು ಮುದ್ದೇಬಿಹಾಳ ನಗರದಲ್ಲಿ ಆ ಯುವಕರು ತಮ್ಮ ಕೈಯಿಂದ ಮತ್ತು ದಾನಿಗಳಿಂದ ಹಣವನ್ನು ತೆಗೆದುಕೊಂಡು ಬಡವರಿಗೆ ದಿನನಿತ್ಯದ ಆಹಾರ ಕೀಟ್ ಗಳನ್ನು ವಿತರಿಸುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಬಾಗಗಳಲ್ಲಿ ಸುಮಾರು 2000 ಸಾವಿರ ಕುಟುಂಬಗಳಿಗೆ ದಾನ ಮಾಡುವ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ.ತಾಲೂಕಿನ ಕೆಲವು ಜನಪ್ರತಿನಿದಿಗಳು ಮನೆಯಿಂದ ಹೊರಬರುವದು ಅಪರೂಪವಾದರೇ ಅವರ ತದ್ವೀರುದ್ದ ಎಂಭAತೆ ತಾನು ಕೈಲಾದಷ್ಟು ಸಮಾಜ ಸೇವೆ ಮಾಡಬೇಕು ಎನ್ನುವ ಹಂಬಲದಿAದ ಮಹಿಬೂಬ ಹಡಲಗೇರಿ ದಾನ ಮಾಡಲು ಅಖಾಡಕ್ಕೀಳಿದ್ದಿದ್ದಾರೆ.ಕೋರಾನಾ ಲಾಕಡೌನ್ ನಿಂದ ಅಹಾರ ಸಮಸ್ಯೆ ಎದುರಾಗಿರುವ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಿಗೆ ಹೋಗಿ ಸೂರಜ್ ಸೋಸಿಯಲ್ ಗ್ರುಪ್‌ನ ಮೂಲಕ ಮಹಬೂಬ ಹಡಲಗೇರಿ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಕಳೆದ 15ದಿನಗಳಿಂದ ಆಹಾರ ಕೀಟ್ ವಿತರಿಸಲಾಗುತ್ತಿದೆ.ಕೂಲಿ ಕಾರ್ಮಿಕರಿಗೆ ಬಡವರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಗುರುತಿಸಿ, 1ಕೆಜಿ ಸಕ್ಕರೆ, ರವಾ, ಬೆಲ್ಲ, ಅಡುಗೆಗೆ ಬೇಕಾದ ಎಣ್ಣೇ, ಸಾಬೂನು , ಖಾರದ ಪುಡಿ, ಬೆಳುಳ್ಳಿ , ಮಾಸ್ಕ್, ಅರಿಸಿಣ, ಉಪ್ಪು ಇನ್ನೀತರ ದಿನಸಿ ಪದಾರ್ಥಗನ್ನೋಳಗೊಂಡ ಆಹಾರ ಕಿಟ್ ಸುಮಾರು 2 ಸಾವಿರ ಕುಟುಂಬಗಳಿಗೆ ವಿತರಣೆ ಮಾಡುವಲ್ಲಿ ಯಶಸ್ವೀಯಾಗಿದ್ದಾರೆ.ಕೆಲ ರಾಜಕೀಯ ನಾಯಕರು ಪ್ರಚಾರಗೋಸ್ಕರ್ ನಿಯಮ ಉಲ್ಲಂಘಿಸಿ, ಅಂತರ ಕಾಯ್ದುಕೋಳ್ಳದೇ ಎರಡು ನಿಮಿಷದಲ್ಲಿ ಬಂದು ಹೋಗುತ್ತಾರೆ, ಅಂತದರಲ್ಲಿ ಮಹಬೂಬ ಹಡಲಗೇರಿ ಅವರು ಸೊಂಕು ಹರಡದಂತೆ ನಿಯಮದ ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಹೋಗಿ ಆಹಾರದ ಕಿಟ್ ವಿತರಿಸುತ್ತಿರುವದು ಗಮನಸೆಳೆಯುತ್ತದೆ.ಈ ವೇಳೆ ಮಾತನಾಡಿದ ಮಹಬೂಬ ಹಡಲಗೇರಿ, ಕೋರೋನಾ ವೈರಸ್ ಹರಡುವದನ್ನು ತಡೆಯುವದರಿಂದ ದೇಶದಲ್ಲಿ 21ದಿನಗಳ ಕಾಲ ಲಾಕ್ ಡೌನ್ ಘೋಷಿಸಿಲಾಗಿದೆ. ಆದರೆ ಇದು ಅನೇಕರಿಗೆ ಬದುಕಿನಪ್ರಶ್ನೇಯಾಗಿದೆ.ರಾಷ್ಟçವ್ಯಾಪ್ತಿ ಲಾಕಡೌನ್ ನಿಂದ ಲಕ್ಷಾಂತರ ಜನರು ನೀರೂದ್ಯೂಗಿಗಳಾಗಿದ್ದಾರೆ, ಕಾರ್ಮಿಕರ, ಬಡವರು ದಿನನಿತ್ಯ ದುಡಿದು ಬದುಕುವರ ಸ್ಥೀತಿ ಚಿಂತಾಜನಕವಾಗಿದೆ. ಲಾಕ ಡೌನ್ ನಿಂದ ಲಕ್ಷಾಂತರ ಬಡವರಿಗೆ ಆಹಾರ ಇಲ್ಲದಂತೆ ಮಾಡಿದೆ , ಇದನ್ನು ಮನಗಂಡು ನಾವು ನಮ್ಮ ಸೂರಜ್ ಸೋಸಿಯಲ್ ಗ್ರುಪ್‌ನ ವತಿಯಿಂದ ಎಲ್ಲಾ ಸದಸ್ಯರು ಕೂಡಿಕೊಂಡು ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದ್ದೇವೆ, ಮತ್ತು ಉಳ್ಳವರು ನಮ್ಮ ತಂಡಕ್ಕೆ ನೆರವು ನೀಡಿದರೆ , ಇನ್ನು ಹೇಚ್ಚಿನ ಕುಟುಂಬಗಳಿಗೆ ಆಹಾರ ಒದಗಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.ಗ್ರೂಪನ ಸದಸ್ಯರಾದ, ಕಾಸೀಮ್ ಕುಂಟೋಜಿ, ರೇವಣಸಿದ್ದ ನಾಯಕ, ಅಬ್ದುಲ್‌ಗಪೂರ ಕಡಕೋಳ, ಲಾಲಸಾಬ ಜತ್ತಿ, ಪಾರುಖ ಮಕಾಶಿ, ರಾಜಮೊಮ್ಮದ ಹಡಲಗೇರಿ ಇನ್ನೀತರರು ಸಮಾಜ ಸೇವೆಯಲ್ಲಿ ತೋಡಗಿಸಿ ಕೊಂಡಿದ್ದಾರೆ. ಕೋರೋನಾ ವೈರಸ್ ನಿಂದ ದೇಶವೇ ಲಾಕ್ ಡೌನ್ ವಾಗಿದೆ. ಇದರಿಂದ ದಿನನಿತ್ಯ ದುಡಿದು ಬದುಕುವರಿಗೆ ಕಷ್ಟವಾಗಿದೆ, ಇದನ್ನು ಅರಿತುಕೊಂಡು ನಾವು ಮತ್ತು ನಮ್ಮ ಸೂರಜ್ ಸೋಸಿಯಲ್ ಗ್ರೂಪನ್ ನ ಸದಸ್ಯರು ಕೂಡಿಕೊಂಡು , ಬಡವರಿಗೆ ಮತ್ತು ಕೂಲಿಕಾರ್ಮಿಕರಿಗೆ ನಮ್ಮ ಕೈಲಾದಷ್ಟು ಆಹಾರ ಕೀಟ್‌ಗಳನ್ನು ವಿತರಿಸುತ್ತಿದ್ದೇವೆ. ಮಹಬೂಬ ಹಡಲಗೇರಿ ಸೂರಜ್ ಸೋಸಿಯಲ್ ಗ್ರೂಪನ್ ಅದ್ಯಕ್ಷರು ಮುದ್ದೇಬಿಹಾಳ Share