ಡಾ. ಬಿ.ಆರ್ ಅಂಬೇಡ್ಕರ ಜಯಂತಿಯನ್ನು ಸರಳ ರೀತಿಯಲ್ಲಿ ಆಚಾರಣೆಗೆ ಕರೆ

ಡಾ. ಬಿ.ಆರ್ ಅಂಬೇಡ್ಕರ ಯುವ ದಲಿತ ಸಮಿತಿವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಗೂ ಸಾಯಂಕಾಲ 7 ಗಂಟೆಗೆ ಭಾವಚಿತ್ರದ ಮುಂದೆ ದೀಪ ಹಚ್ಚಿ ಜಯಂತಿಯನ್ನು ಆಚರಿಸಲು ಯುವ ದಲಿತ ಸಮಿತಿ ಕರೆ ನೀಡಿತು.
ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಯುವ ದಲಿತ ಸಮಿತಿ ವತಿಯಿಂದ ವಿಡಿಯೋ ಸಂವಾದದಲ್ಲಿ ಅಂಬೇಡ್ಕರ್ ಅವರ ಜಯಂತಿ ನಿಮಿತ್ಯವಾಗಿ ಜಯಂತಿಯ ಕಾರ್ಯವೈಖರಿ ಬಗ್ಗೆ ಚರ್ಚಿಸಲಾಯಿತು ಜಯಂತಿಯನ್ನು
ಮಹಾಮಾರಿ ಕರೂನಾ ವೈರಸ್ ಸಲುವಾಗಿ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಬೇಕೆಂದು ನಿರ್ಧರಿಸಿದರು.
ಯುವ ದಲಿತ ಸಮಿತಿ ಕಾರ್ಯಕರ್ತರಿಗೆ ಮತ್ತು ಎಲ್ಲ ದಲಿತ ಬಾಂಧವರಿಗೆ ಯುವ ದಲಿತ ಸಮಿತಿಯ ವಿನಂತಿಸಿಕೊಳ್ಳುವುದೇನೆಂದರೆ. ದಿನಾಂಕ 14-04-2020 ರಂದು ಭಾರತರತ್ನ ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಇದ್ಧು ಈಗ ದೇಶದಲ್ಲೆಡೆ ಮಹಾಮಾರಿ ಕರೂನಾ ವೈರಸ್ ಸಾಂಕ್ರಾಮಿಕ ರೋಗ ಇರುವುದರಿಂದ ಸಾಮೂಹಿಕವಾಗಿ ಯಾವುದೆ ಸಮಾರಂಭಗಳನ್ನು ಆಚರಿಸದಂತೆ ದೇಶದಲ್ಲೆಡೆ ಕಾನೂನು ತರಲಾಗಿದ್ದು ಕಾನೂನನ್ನು ಪಾಲಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಈ ಸಲ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಸಾಮೂಹಿಕವಾಗಿ ಆಚರಣೆ ಮಾಡಲಿಕ್ಕೆ ಆಗುವುದಿಲ್ಲ.
ಆದಕಾರಣ ನಾವು ಎಲ್ಲ ದಲಿತ ಬಾಂಧವರು ಯುವ ದಲಿತ ಸಮಿತಿಯ ಎಲ್ಲ ಸದಸ್ಯರು ಈ ಸಲ ನಮ್ಮ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ನಮ್ಮ ನಮ್ಮ ಮನೆಗಳ ಮುಂದೆ ದಿನಾಂಕ14-04-2020 ರಂದು ರಾತ್ರಿ 7 ಗಂಟೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದುಕೊಂಡು ದೀಪವನ್ನು ಹಚ್ಚಿ ಜೈ ಭೀಮ್ ಘೋಷಣೆಯನ್ನು ಹಾಕುತ್ತಾ 5 ನಿಮಿಷದವರೆಗೆ ದೀಪವನ್ನು ಹಚ್ಚಿ ಆಚರಣೆ ಮಾಡುತ್ತ ಹಾಗೂ ಹೂವಿನ ಮಾಲೆ ಹಾಕುವ ಮೂಲಕ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಬೇಕು ಹಾಗೂ ಬಡ ಜನಗಳಿಗೆ ಆಹಾರಧಾನ್ಯವನ್ನು ಯುವ ದಲಿತ ಸಮಿತಿ ವತಿಯಿಂದ ವಿತರಣೆ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ದಲಿತ ಸಮಿತಿಯ ಅಧ್ಯಕ್ಷರು ಶ್ರೀ ಸಿದ್ದು ಕನಮ್ಮಡ್ಡಿ ಉಪಾಧ್ಯಕ್ಷರಾದ ಈಶ್ವರ ಗುಡಜ, ಕಾನೂನು ಸಲಹೆಗಾರರು ದೀಪಕ ಕೋಟಬಾಗಿ, ದಲಿತ ಮುಖಂಡರಾದ ಸತ್ಯಜಿತ ಕರವಾಡಿ, ಹಾಗು ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ರಾಮಗಾನಟ್ಟಿ, ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು .
Share
WhatsApp
Follow by Email