ಬ್ರೇಕಿಂಗ್ ನ್ಯೂಸ್ ಭಾರತದಲ್ಲಿ ಲಾಕ್ ಡೌನ್ ಪರಿಣಾಮವಾಗಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ಮೊರಬ ಗ್ರಾಮದ ಅಲೆಮಾರಿ ಜನಾಂಗದ ಹಸಿವು ನೀಗಿಸಲು ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರುಗಳು 12/04/202012/04/20201 min read admin ಚಿಕ್ಕೋಡಿ :- ಸಮೀಪದ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಅಲೆಮಾರಿ ಜನಾಂಗದವರು ವಾಸವಾಗಿರುವ ಬಹುರುಪಿ. ಚಿಗಲಕಾರ , ಭೂವಿ ಹೀಗೆ ಹಲವಾರು ಅಲೆಮಾರಿ ಜನಾಂಗದವರು ಅನ್ನಕ್ಕಾಗಿ ನೂರಾರು ಕುಟುಂಬಗಳು ಆಕ್ರಂದಿಸುತ್ತಿದ್ದವು ದಿನನಿತ್ಯ ಬಹುರುಪಿಗಳು ದಿನಕೊಂದು ವೇಷದರಿಸಿ ಬೇರೆ ಬೇರೆ ಗ್ರಾಮ ಗ್ರಾಮಗಳಿಗೆ ಹೋಗಿ ತಮ್ಮ ಕಲೆಯನ್ನ ಜನರಮುಂದೆ ಪ್ರದರ್ಶಿಸಿ ಮೆಚ್ಚುಗೆ ಪಾತ್ರರಾಗಿ ಜನರು ಕೊಟ್ಟ ಹಣ ಹಾಗೂ ಆಹಾರ ದಾನ್ಯಗಳು ತಂದು ತಮ್ಮ ಉಪ ಜೀವನ ಸಾಗಿಸುತ್ತಿದ್ದರು ಇದೀಗ ಕೆಲಸವೂ ಇಲ್ಲ, ಮನೆಯಿಂದ ಹೊರಗೂ ಬರಲಾರದ ಸ್ಥಿತಿ ಎದುರಾಗಿದೆ.ಪರಿಣಾಮ ಹಸಿವೆಯಿಂದ ಎಲ್ಲಾ ಕುಟುಂಬಗಳ ಮಕ್ಕಳು ಹಾಗೂ ಮಹಿಳೆಯರು ಪರದಾಡುವ ಸ್ಥಿತಿ ಎದುರಾಗಿದೆ. ಇದನ್ನು ನೋಡಿದ ಮೋರಬ ಗ್ರಾಮ ಪಂಚಾಯಿತಿ ಸಿಂಬಂದಿ ಮತ್ತು ಸದಸ್ಯರು ಇದೀಗ ತುತ್ತು ಅನ್ನಕ್ಕೂ ಪದಾಡುತ್ತಿದ್ದ ಹಸಿದ ಜನರಿಗೆ ಅನ್ನ ಹಾಕುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.ಪಡಿತರ ಗ್ರಾಹಕರಿಗೆ ಕೊಡಬೇಕಾದ ಅಕ್ಕಿ, ದಿನಸಿ ಸಾಮಗ್ರಿಗಳು ಹಾಗೂ ತರಕಾರಿ .ಹಾಗೂ ಆರೊಗ್ಯ ಕಾಪಾಡಿಕೊಳ್ಳಲು ಮಾಸ್ಕ ಅಲೆಮಾರಿ ಜನಾಂಗದವರು ವಾಸಿಸುವ ಸ್ಥಳಕೆ ಬೆಟಿಕೊಟ್ಟು ಅವಶ್ಯಕ ವಸ್ತುಗಳನ್ನು ಅಲ್ಲದೆ ಶುದ್ದ ಕುಡಿಯುವ ನೀರನ್ನು ವಿತರಿಸಿದರು ಅಲೆಮಾರಿ ಜನರು ಸಹ ಒಬ್ಬೊಬ್ಬರಾಗಿ ಬಂದು ದಿನಸಿ ಸಾಮಗ್ರಿಗಳನ್ನು ಪಡೆದು ತಮ್ಮ ಹಸಿವನ್ನು ನೀಗಿಸಿ ಕೊಳ್ಳುತ್ತಿದ್ದಾರೆ. ಹಾಗೂ ಮಾನವೀಯತೆಯಿಂದ ಹಸಿವು ನೀಗಿಸಿದ ಮೋರಬ ಗ್ರಾಮ ಪಂಚಾಯತಿ ಅವರ ಕಾರ್ಯಕ್ಕೆ ಅಲೆಮಾರಿ ಜನಾಂಗದವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಫಿರೋಜ್ ಚೌಗಲಾ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಬೀರಪ್ಪ ಚೌಗಲಾ, ದಿವಾಕರ ಅಸೋದೆ, ಸದಾಶಿವ ದೊಡ್ಡಮನಿ, ನಾರಾಯಣ ಕೋಳೆಕರ, ತಾಲೂಕ ಪಂಚಾಯಿತಿಯ ಸದಸ್ಯರಾದ ಶ್ರಾವಣ ಕಾಂಬಳೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೈ ಆಯ ಅಸೋದೆ ಹಾಗೂ ಗ್ರಾಮದ ಎಲ್ಲಾ ಯುವಕರು ಉಪಸ್ಥಿತರಿದ್ದರು. Share