ಲಾಕ್ ಡೌನ್ ಹಿನ್ನೆಲೆ ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವು

ತೇರದಾಳ್ : ಇಡೀ ದೇಶದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕರೋನಾ ವೈರಸ್ ಹರಡದಂತೆ ತಡೆಗಟ್ಟಲು ಇಡೀ ದೇಶವನ್ನೆಲ್ಲಾ ಲಾಕ್ ಡೌನ್ ಮಾಡಲಾಗಿತ್ತು.
ಲಾಕ್ ಡೌನ್ ಪರಿಣಾಮವಾಗಿ ಗ್ರಾಮದ ರಸ್ತೆಗಳನ್ನು ಸಾರ್ವಜನಿಕರು ಬಂದ್ ಮಾಡಿದ್ದರು.
ಆದರೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿರ್ಮಲ ತೆಳಗಿನಮನಿ (61) ಇವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ
ರಸ್ತೆಗಳನ್ನು ಬಂದ್ ಮಾಡಿದ ಪರಿಣಾಮವಾಗಿ ಈ ವೃದ್ಧೆ ರಸ್ತೆ ಮಾರ್ಗದಲ್ಲಿ ಸಾವನ್ನಪ್ಪಿದ್ದಾಳೆ.
Share
WhatsApp
Follow by Email