ಮಂಡ್ಯ:ಮತ್ತೆ ಮೂವರಿಗೆ ಕರೋನಾ ಸೋಂಕು ಪತ್ತೆ


ಮಂಡ್ಯ. ಎ.೧೩.ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಎಂಟಕ್ಕೆರಿದೆ.
ಸೋಂಕು ತಗುಲಿಸಿಕೊಂಡಿರುವ ಮೂವರು ಸಹ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಎಂಟು ವರ್ಷದ ಬಾಲಕಿ.೬೦ವರ್ಷದ ವೃದ್ದೆ.೧೮ರ ಪ್ರಯಾದ ಯುವಕನಿಗೆ ಸೋಂಕು ತಗುಲಿದ್ದು ಮೂವರು ಸಹ ಮಳವಳ್ಳಿ ಮೂಲದವರಾಗಿದ್ದಾರೆ.
ದೆಹಲಿಯ ತಬ್ಲೀಗ್ ಜಮಾತ್ ಗೆ ತೆರಳಿದ್ದವರ ಸಂಪರ್ಕದಲ್ಲಿದ್ದ ಇವರಿಗೆ ನಂ ೧೭೯ರ ಸೋಂಕಿತನಿಂದ ಸೋಂಕು ಹರಡಿದೆ ಎಂದು ಸಂಶಯಿಸಲಾಗಿದೆ.
ಈ ಪ್ರಕರಣ ವರದಿಯಾಗುವುದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಎಂಟಕ್ಕೇರಿದ್ದು.ತಬ್ಲೀಗಿ.ಹಾಗೂ ನಂಜನಗೂಡು ಜ್ಯೂಬಿಲೆಯೆಂಟ್ ಕಾರ್ಖಾನೆಯ ಮೂಲದಿಂದಲೆ ಸೋಂಕು ಹರಡುತ್ತಿರುವುದನ್ನು ಗಮನಿಸಬಹುದಾಗಿದೆ
ವರದಿ :
ಕೃಪ ಸಾಗರ್ ಗೌಡ
ಮಂಡ್ಯ
Share
WhatsApp
Follow by Email