ಬ್ರೇಕಿಂಗ್ ನ್ಯೂಸ್ ರಾಜ್ಯದಲ್ಲಿ 17 ಹೊಸ ಪ್ರಕರಣಗಳು ಪತ್ತೆ: 277ಕ್ಕೇರಿದ ಸೋಂಕಿತರ ಸಂಖ್ಯೆ 15/04/202015/04/2020 admin ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪವಾಗಿ ಹರಡುತ್ತಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 17 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೂ ಒಟ್ಟು 277 ಕೊರೋನಾ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಇಂದು ಪತ್ತೆಯಾದ 17 ಪ್ರಕರಣಗಳಲ್ಲಿ 15 ಪುರುಷರು ಮತ್ತು 2 ಮಹಿಳೆಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.10 ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ 9 ಮಂದಿ ನಂಜನಗೂಡಿನವರೆಂದು ತಿಳಿದಿದೆ.ಉಳಿದಂತೆ ಬೆಂಗಳೂರು 2, ಬಾಗಲಕೋಟೆ 2, ವಿಜಯಪುರದಲ್ಲಿ 2 ಪ್ರಕರಣ ಪತ್ತೆಯಾಗಿದ್ದು, ಕಲಬುರಗಿಯಲ್ಲಿ 1 ಕೊರೋನಾ ಪ್ರಕರಣ ವರದಿಯಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದ್ದು, 75 ಮಂದಿ ಗುಣಮುಖರಗಿದ್ದಾರೆ. Share