ಬ್ರೇಕಿಂಗ್ ನ್ಯೂಸ್ ಹಂದಿಗುoದದ ಶ್ರೀ ಮಹಾಲಕ್ಷ್ಮಿ ಸೊಸಾಯಿಟಿ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ. 15/04/202015/04/20201 min read admin ಮುಗಳಖೋಡ: ರಾಯಬಾಗ ತಾಲೂಕಿನ ಹಂದಿಗುoದ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಅವರು ಹಂದಿಗುoದ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕರೋನ ವೈರಸ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ ಕ್ರೇಡಿಟ್ ಸೊಸಾಯಿಟಿ ವತಿಯಿಂದ ಅಧ್ಯಕ್ಷರಾದ ಬಿ.ಎಸ್. ತೇಲಿ ಅವರು 50.000 ರೂ ಚೆಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಅಧ್ಯಕ್ಷ ಮುರಿಗೆಪ್ಪ ಸಂಗಪ್ಪ ಮಿರ್ಜಿ ಹಾಗೂ ಕಾರ್ಯದರ್ಶಿ ಬಿ. ಎಸ್. ನಾಯಿಕ 50.000 ರೂ. ವೈಯಕ್ತಿಕವಾಗಿ ಕುಡಚಿ ಬಿಜೆಪಿ ಮಂಡಳದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ 10.000 ರೂ. ಚೌಗಲಾತೋಟ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ 25.000 ರೂ. ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿ ( ಕೋವಿಡ್ 19) ಖಾತೆಗೆ ಸಂಸದ ಅಣ್ಣಾಸಾಹೇಬ ಜೋಲ್ಲೆ ಅವರಿಗೆ ನೀಡಿದರು.ಸಂಸದ ಅಣ್ಣಾಸಾಹೇಬ ಜೋಲ್ಲೆ ಮಾತನಾಡಿ ಇತರೆ ಹಳ್ಳಿಗಳಿಗೆ ಮಾದರಿಯಾದ ಹಂದಿಗುoದ ಗ್ರಾಮವನ್ನು ಮುಕ್ತಕಂಠದಿoದ ಕೊಂಡಾಡಿ ಆದರ್ಶ ಗ್ರಾಮವಾದ ಹಂದಿಗುoದದಲ್ಲಿ ದಾನಿಗಳ ಊರು ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಶಾಸಕ ಪಿ. ರಾಜೀವ್, ಜಿಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ್, ಮಲ್ಲಿಕಾರ್ಜುನ ತೇಲಿ, ಅಧ್ಯಕ್ಷ ಸುಮಂಗಲಾ ಪಾಟೀಲ್, ಉಪಾದ್ಯಕ್ಷ ಶಿವಪ್ಪ ಹೋಸೂರು, ಸಂಗಪ್ಪ ಮಿರ್ಜಿ, ಮಲ್ಲೇಶ ಕೌಜಲಗಿ, ಶಿವಲಿಂಗಪ್ಪ ಬಾಗೇವಾಡಿ, ಶ್ರೀನಿವಾಸ ಚಿಕ್ಕಟ್ಟಿ, ರಮೇಶ ಉಳೇಗಡ್ಡಿ, ರವಿ ಉಳೇಗಡ್ಡಿ ಹಾಗೂ ಆರ.ಎಸ.ಎಸ, ಬಿಜೆಪಿ ಮತ್ತು ಆಶಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು Share