ಅನಧಿಕೃತವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಪಡಿತರ ವಶ


ತಹಶೀಲ್ದಾರ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ದಾಳಿ
ರಬಕವಿ-ಬನಹಟ್ಟಿ: ಪಡಿತರ ದಾಸ್ತಾನನ್ನು ಅನಧಿಕೃತವಾಗಿ ಸಂಗ್ರಹಿಸಿ ಲಾರಿ ಮೂಲಕ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ರಬಕವಿ-ಬನಹಟ್ಟಿ ತಾಲ್ಲೂಕಿನ ರಬಕವಿಯಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
ರಬಕವಿಯಿಂದ ಮಹಾರಾಷ್ಟ್ರದ ಜೈಸಿಂಗಪೂರಕ್ಕೆ ಸಾಗಿಸುತ್ತಿದ್ದ ಕೆ.ಎ.23 ಎ 0170 ಲಾರಿಯಲ್ಲಿ 50 ಕೆಜಿಯ 257 ಚೀಲದಲ್ಲಿ 2,05,050 ರೂ. ಮೊತ್ತದ ಅಕ್ಕಿ, 50 ಕೆಜಿಯ 26 ಚೀಲದ 27, 300 ರೂ ಮೊತ್ತದ ಪಡಿತರ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.
ರಬಕವಿಯ ರಾಘವೇಂದ್ರ ಗಂಗಪ್ಪ ತೇಲಿ, ಶೇಡಬಾಳದ ಸಚೀನ್ ಪೋಪಟ್, ಪ್ರಕಾಶ ಜಾಧವ, ಮಹಾಂತೇಶ ವಡರಾಳಿ ಹಾಗೂ ಇನ್ನೋರ್ವ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.
ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ, ತೇರದಾಳ ಕಂದಾಯ ನೀರಿಕ್ಷಕ ಬಸವರಾಜ ತಾಳಿಕೋಟಿ, ತೇರದಾಳ ಠಾಣಾಧಿಕಾರಿ ವಿಜಯ ಕಾಂಬಳೆ ಆಹಾರ ಶಿರಸ್ತೇದಾರ ಡಿ. ಬಿ. ದೇಶಪಾಂಡೆ ದಾಳಿಯ ಕಾಲಕ್ಕೆ ಇದ್ದರು.
Share
WhatsApp
Follow by Email