ಬೆಳಗಾವಿಯಲ್ಲಿ ಮತ್ತೆ 5 ಜನರಲ್ಲಿ ಕೊರೊನಾ ಸೋಂಕು

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 44 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ ಕಂಡುಬಂದಿದ್ದು, ಇವರಲ್ಲಿ ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 41 ಜನರಿಗೆ ಸೋಂಕು ತಗುಲಿದಂತಾಗಿದೆ. ಬೆಂಗಳೂರಿನಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದೆ.
ಬೆಳಿಗ್ಗೆಯಷ್ಟೇ ರಾಜ್ಯದಲ್ಲಿ 38 ಪ್ರಕರಣ ಪತ್ತೆಯಾಗಿತ್ತು. ಆದರೆ ಸಂಜೆ ವೇಳೆಗೆ ಮತ್ತೆ 6 ಜನರಲ್ಲಿ ಹೊಸದಾಗಿ ಕೊರೊನ ಸೋಂಕು ಇರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಘೋಷಿಸಿದ್ದರೂ ಕೂಡ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಪತ್ತೆಯಾಗಿರುವ ಎಲ್ಲ 5 ಪ್ರಕರಣಗಳೂ 127ನೇ ನಂಬರ್ ರೋಗಿಯ ಸಂಪರ್ಕದಿಂದ ಬಂದಿದೆ ಎನ್ನುವುದು ದೃಢಪಟ್ಟಿದೆ. ಅಂದರೆ ಬೆಳಗಾವಿ ನಗರದಲ್ಲೇ ಹೊಸ ಪ್ರಕರಣಗಳು ಪತ್ತೆಯಾದಂತಾಗಿದೆ
Share
WhatsApp
Follow by Email