ಬ್ರೇಕಿಂಗ್ ನ್ಯೂಸ್ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಮೂಡಲಗಿ ಸಿದ್ದ ಸಂಸ್ಥಾನ ಮಠದ ಶ್ರೀಪಾದಬೋಧ ಮಹಾಸ್ವಾಮಿಯವರ ಶ್ರದ್ಧಾಂಜಲಿ ಸಭೆ 22/04/202022/04/20201 min read admin ವರದಿ:ಕೆ.ವಾಯ್ ಮೀಶಿಮೂಡಲಗಿ : ಗ್ರಾಮದ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಮೂಡಲಗಿ ಸಿದ್ದ ಸಂಸ್ಥಾನ ಮಠದ ಶ್ರೀಪಾದಬೋಧ ಮಹಾಸ್ವಾಮಿಯವರು ಶ್ರದ್ಧಾಂಜಲಿ ಸಭೆ ನೆರವೇರಿಸಲಾಯಿತು.ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮಾಡಿ ಭಗವಂತನು ಅವರ ದಿವ್ಯ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದ್ದು ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿರುತ್ತದೆಯೆಂದು ಸಿದ್ದು ಗಡ್ಡೆಕಾರ ಹೇಳಿದರು.ಈ ಸಂಧರ್ಭದಲ್ಲಿ ವ್ಹಿ.ಬಿ.ಮೂಗಳಖೋಡ, ಎಸ್ ಎಸ್ ಮೂಗಳಖೋಡ, ಪ್ರಕಾಶ ಮೂಗಳಖೋಡ, ವೀರಭದ್ರ ನೆರ್ಲಿ, ಎಸ್ ಜಿ ಹಂಜಿನಾಳ, ಪಿ ಸಿ ಮೂಗಳಖೋಡ, ಡಾ||ಪರುತ ಹಿರೇಮಠ, ದಯಾನಂದ ಪಾದಗಟ್ಟಿ, ಈರಪ್ಪ ಮೂಗಳಖೋಡ ಅನೇಕರು ಉಪಸ್ಥಿತರಿದ್ದರು.ಅದೆ ರೀತಿ ಗುರ್ಲಾಪೂರ ಕೋ-ಆಪ್ ಸೋಸಾಯಿಟಿಯಲ್ಲಿ ಹಾಗೂ ಮಲ್ಲಿಕಾರ್ಜುನ ವಿವಿದೋಧ್ಧೇಶಗಳ ಸಹಕಾರಿ ಸಂಘದಲ್ಲಿ, ಗುರ್ಲಾಪೂರ, ರೇವಣಸಿದ್ದೇಶ್ವರ ವಿವಿದೊದ್ಧೇಶಗಳ ಸಹಕಾರಿ ಸಂಘ , ಬಸವೇಶ್ವರ ಅರ್ಬನ ಕೋ-ಆಪ್ ಸೋಸಾಯಿಟಿ ಮೂಡಲಗಿ ಶಾಖೆ-ಗುರ್ಲಾಪೂರ ಹಾಗೂ ಶಿವಭೋಧರಂಗ ಅರ್ಬನ ಕೋ-ಆಪ್ ಸೋಸಾಯಿಟಿ ಮೂಡಲಗಿ ಶಾಖೆ ಗುರ್ಲಾಪೂರದಲ್ಲಿ ಶ್ರೀಗಳಿಗೆ ಶ್ರದ್ಧಾಂಜಲಿ ಸಭೆ ನೆರವೆರಿಸಲಾಯಿತು. ಈ ಸಂಧರ್ಭದಲ್ಲಿ ಆಢಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. Share