ಲಾಕ್ ಡೌನ್ ಹಿನ್ನೆಲೆ ಕುರಿಗಾರರು ಕುರಿ ಮರಿಗಳ ರಕ್ಷಣೆ ಮಾಡುವುದೇ ದೊಡ್ಡ ಜವಾಬ್ದಾರಿಯಾಗಿದೆ

ಅರಟಾಳ ; ಕರೊನಾ ಎಂಬ ಮಹಾಮಾರಿ ವೈರಸ್ ದಾಳಿಯಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕಂಗೆಟ್ಟು ಹೋಗಿವೆ. ಲಾಕ್ ಡೌನ್ ಜಾರಿಯಾಗಿರುವುದರಿಂದ ಜನರು ಹೆಚ್ಚು ಕಾಲ ಮನೆಯಲ್ಲಿ ಕಳೆಯುತ್ತಿದ್ದಾರೆ. ಆದರೆ ಕುರಿಗಾರರು ಕುರಿ ಮರಿಗಳ ರಕ್ಷಣೆ ಮಾಡುವುದೇ ದೊಡ್ಡ ಜವಾಬ್ದಾರಿಯಾಗಿದೆ. ಕರೊನಾ ವೈರಸ್ ಹಾವಳಿಯಿಂದ ಕುರಿಗಾರರು ತುಂಬಾ ಕಷ್ಟ ಎದುರಿಸುತ್ತಿದ್ದಾರೆ.
ಗ್ರಾಮದ ಕುರಿಗಾರರ ಕಷ್ಟವನ್ನು ನೋಡಿದ ಗ್ರಾಮದ ಮಲ್ಲಿಕಾರ್ಜುನ ದುಂಡಪ್ಪ. ಖ್ಯಾಡಿ ಕುಟುಂಬದವರು ಪ್ರತಿದಿನ ಒಂದು ಚೀಲ ಗೋವಿನ ಜೋಳವನ್ನು ಕುರಿಗಾರರಿಗೆ ಕೊಟ್ಟು ಕುರಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಮೇ 3ರ ವರೆಗೆ ಪ್ರತಿದಿನ ಒಂದು ಚೀಲ ಗೋವಿನ ಜೋಳವನ್ನು ಕೂಡುವುದಾಗಿ ವಾಗ್ದಾನ ಮಾಡಿದ್ದಾರೆ. ಕುರಿಗಾರರಾದ ಮಹಾದೇವ ಹಟ್ಟಿ, ಶಿವಪ್ಪ ಅರ್ಜುಣಗಿ ಇವರು ಸಾಕಿರುವ 105 ಕುರಿಗಳಿಗೆ ಮೇವಿನ ಕೊರತೆ ಉಂಟಾದಾಗ ಖ್ಯಾಡಿ ಕುಟುಂಬದವರು ಅನ್ನ ಹಾಕುವ ಪ್ರಯತ್ನ ಮೆಚ್ಚುವಂತಹದು ಎನ್ನುತ್ತಾರೆ ಕುರಿಗಾರರು.
ಈ ವರ್ಷ ಕರೊನಾ ಹಾವಳಿಯಿಂದ ಕುರಿಗಾರರು ಕುರಿಗಳನ್ನು ದೂರದ ಊರುಗಳಿಗೆ ಮೇಯ್ಯಿಸಲು ಹೋಗದೆ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಬೇಸಿಗೆ ಪ್ರಾರಂಭದಿAದ ಮಳೆಗಾಲದವರೆಗೆ ಕುರಿಗಾರರು ದೂರದ ಊರುಗಳಿಗೆ ಹೋಗಿ ಮಳೆಯಾದ ನಂತರ ಗ್ರಾಮಕ್ಕೆ ಬರುತ್ತಿದ್ದರು. ಕಷ್ಟದಲ್ಲಿದರುವ ಕುರಿಗಾರರಿಗೆ ಸಹಾಯ ಮಾಡುವ ಖ್ಯಾಡಿ ಕುಟುಂಬವು ಎಲ್ಲರಿಗೂ ಮಾದರಿಯಾಗಿದೆ.
Share
WhatsApp
Follow by Email