ಬ್ರೇಕಿಂಗ್ ನ್ಯೂಸ್ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ 78.39 ಲಕ್ಷ ರೂಪಾಯಿ-ಶಾಸಕ ಬಾಲಚಂದ್ರ ಜಾರಕಿಹೊಳಿ 18/03/202018/03/20201 min read admin ಮೂಡಲಗಿ: ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಯನ್ನು 78.39ಲಕ್ಷ ರೂಗಳ ವೆಚ್ಚದಲ್ಲಿ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಮತ್ತು ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ರಸ್ತೆ ಸುಧಾರಣೆಗಳಿಗಾಗಿ ಪ್ರಭಾ ಶುಗರ್ 16.72 ಲಕ್ಷ ಮತ್ತು ಸತೀಶ ಶುಗರ್ಸ್ 61.67 ಲಕ್ಷ ರೂಗಳನ್ನು ನೀಡಿವೆ ಎಂದು ತಿಳಿಸಿದ್ದಾರೆ. ಮೂಡಲಗಿ-ಪಟಗುಂದಿ ರಸ್ತೆಯಿಂದ ಕೆನಾಲ್ ಮೇಲಿನ ರಸ್ತೆಗೆ 2ಲಕ್ಷ, ಮೂಡಲಗಿ-ಗುರ್ಲಾಪೂರ ರಸ್ತೆಯಿಂದ ಸಂತೋಷ ಸೋನವಾಲ್ಕರ ತೋಟದ ರಸ್ತೆಗೆ 5ಲಕ್ಷ, ಗುಜನಟ್ಟಿ-ಕಲ್ಲೋಳ್ಳಿ ರಸ್ತೆಯಿಂದ ಕಡತನಾರ ಹಳ್ಳದವರೆಗೆ 2ಲಕ್ಷ, ಗುಜನಟ್ಟಿ ಕಲ್ಲಪ್ಪನ ಮನೆಯಿಂದ ಧರ್ಮಟ್ಟಿ-ನಿಪನಾಳ ರಸ್ತೆಗೆ 5ಲಕ್ಷ, ಗುಜನಟ್ಟಿ ಕಲ್ಲೋಳ್ಳಿ ರಸ್ತೆಯಿಂದ ನಾಗಪ್ಪ ಬಂಡ್ರೋಳ್ಳಿ ತೋಟದ ರಸ್ತೆಗೆ 2ಲಕ್ಷ, ಬಡಲಕ್ಕನ್ನವರ ತೋಟದ ಇರಬೆವ್ವಗೋಳ ತೋಟದಿಂದ ಕೊರಕಪ್ರಜೇರಿ ತೋಟದವರೆಗೆ 2ಲಕ್ಷ, ದಂಡಿನ ಮಾರ್ಗ ರಸ್ತೆಯಿಂದ ಹಡಗಿನಾಳ ನಿಂಗನ್ನವರ ತೋಟದ ವರೆಗೆ 4ಲಕ್ಷ, ಹಡಗಿನಾಳ ಲಕ್ಷ್ಮೀ ಗುಡಿಯಿಂದ ರಾಮಸಿದ್ಧ ಹರಿಜನ ತೋಟದ ವರೆಗೆ 2ಲಕ್ಷ, ನಾಗನೂರ ತಿಗಡಿಯವರ ತೋಟದಿಂದ ಹುಬ್ಬರಟ್ಟಿ ತೋಟದವರೆಗೆ 3ಲಕ್ಷ, ನಾಗನೂರ ಕರೋಳಿ ತೋಟದಿಂದ ಕಮತಹಳ್ಳದ ವರೆಗೆ 2ಲಕ್ಷ, ಮಸಗುಪ್ಪಿ ಗ್ರಾಮದಿಂದ ಕಡತನಾರ ಹಳ್ಳದ ವರೆಗೆ 3ಲಕ್ಷ, ಧರ್ಮಟ್ಟಿ ಚರ್ಚದಿಂದ ಲಕ್ಕಪ್ಪ ಬಡ್ಡಿ ತೋಟದವರೆಗೆ 2ಲಕ್ಷ, ಧರ್ಮಟ್ಟಿ ಮೂಡಲಗಿ ರಸ್ತೆಯಿಂದ ಬೀರಪ್ಪನ ಗುಡಿಯತನಕ 3ಲಕ್ಷ, ತಿಗಡಿ ಬೇಟಗೇರಿ ರಸ್ತೆಯಿಂದ ಶಿಳ್ಳನವರ ತೋಟದವರೆಗೆ 2ಲಕ್ಷ, ನಲ್ಲಾನಟ್ಟಿ ಸೊಸಾಯಿಟಿಯಿಂದ ಹುಣಶ್ಯಾಳ ಪಿಜಿ ಹದ್ದಿನವರೆಗೆ ಒಳಗಿನ ರಸ್ತೆಗೆ 5ಲಕ್ಷ, ಬಸಳಿಗುಂದಿ ಸಂಗೋಳಿ ರಾಯಣ್ಣ ಮೂರ್ತಿಯಿಂದ ವಡೇರಸಿದ್ದೇಶ್ವರ ದೇವಸ್ಥಾನದ ವರೆಗೆ 2ಲಕ್ಷ, ಪಟಗುಂದಿ-ಕಮಲದಿನ್ನಿ ರಸ್ತೆಯಿಂದ ಸುಣಧೋಳಿ ರಸ್ತೆಯ ವರೆಗೆ 5ಲಕ್ಷ, ಮಸಗುಪ್ಪಿ ಲಕ್ಷ್ಮೀ ನಗರದಿಂದ ಗಂಗಣ್ಣವರ ತೋಟದ ವರೆಗೆ 3ಲಕ್ಷ, ಯಾದವಾಡ ಮುಖ್ಯರಸ್ತೆಯಿಂದ ಮುಸಗುಪ್ಪಿ ಮಳಲಿ ತೋಟದ ರಸ್ತೆಗೆ 3.67ಲಕ್ಷ, ತಿಗಡಿ-ವಾಲಿಕಾರ ತೋಟದ ರಸ್ತೆಗೆ 4ಲಕ್ಷ ರೂಗಳು ಸ್ಭೆರಿದಂತೆ ಒಟ್ಟು 33 ಕೀಮಿ ರಸ್ತೆ ದುರಸ್ತಿಗೆ 61.67 ಲಕ್ಷ ರೂಗಳನ್ನು ಸತೀಶ ಶುಗರ್ಸ್ ಅಡಿಯಲ್ಲಿ ಕಾಮಗಾರಿ ನಡೆಯಲಿವೆ ಎಂದು ತಿಳಿಸಿದ್ದಾರೆ. ಇನ್ನೂ ಪ್ರಭಾ ಶುಗರ್ಸ್ನಿಂದ ಬಸಳಿಗುಂದಿ ಹರಿಜನಕೇರಿಯಿಂದ ಭರಮಪ್ಪ ವ್ಯಾಪಾರಿ ತೋಟದ ರಸ್ತೆಗೆ 4ಲಕ್ಷ, ಅರಭಾಂವಿ ಗ್ರಾಮದಿಂದ ತಮ್ಮಣ್ಣ ಜಮಖಂಡಿ ತೋಟದ ರಸ್ತೆಗೆ 2.72 ಲಕ್ಷ, ನಲ್ಲಾನಟ್ಟಿ ಹರಿಜನಕೇರಿಯಿಂದ ಚಿಗಡೊಳ್ಳಿ ಬ್ರೀಡ್ಜ್ ವರೆಗೆ 4ಲಕ್ಷ, ನಲ್ಲಾನಟ್ಟಿ ಮಾರುತಿ ಗೋರಕನಾಥ ತೋಟದಿಂದ ಲೇಪಾಕ್ಷಿ ಅರಭಾಂವಿ ರಸ್ತೆಗೆ 2ಲಕ್ಷ ಹಾಗೂ ಪಟಗುಂದಿ-ಮೂಡಲಗಿ ರಸ್ತೆಯಿಂದ ಗಂಗಪ್ಪ ಹಂಜಿ ತೋಟದ ರಸ್ತೆಗೆ 4ಲಕ್ಷ ಸೇರಿದಂತೆ 8 ಕೀಮಿ ರಸ್ತೆಗೆ 16.72ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆಗಳನ್ನು ಸುಧಾರಣೆಯನ್ನು ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. Share