ಜಯ ಕರ್ನಾಟದಿಂದ ಅಲೆಮಾರಿಗಳಿಗೆ ಉಪಹಾರ ಸೇವೆ

ಜಯ ಕರ್ನಾಟದಿಂದ ಅಲೆಮಾರಿಗಳಿಗೆ ಉಪಹಾರ ಸೇವೆ

ಮೂಡಲಗಿ: ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ಅವರ ಜನ್ಮದಿನದ ಅಂಗವಾಗಿ ಇಲ್ಲಿಯ ತಾಲ್ಲೂಕು ಘಟಕದಿಂದ ಅಲೆಮಾರಿ ಕುಟುಂಬಗಳಿಗೆ ಉಪಹಾರವನ್ನು ನೀಡಿದರು.
ಮೂಡಲಗಿ ಪಟ್ಟಣದ ಹೊರವಲದಯದಲ್ಲಿರುವ ವಿವಿಧ ಸ್ಥಳಗಳಲ್ಲಿ ಹಾಕಿಕೊಂಡಿದ್ದ ಗುಡಿಸಲುಗಳಿಗೆ ವಾಹನದಲ್ಲಿ ತೆರಳಿ 300ಕ್ಕೂ ಅಧಿಕ ಸಂಖ್ಯೆ ಅಲೆಮಾರಿ ಜನರಿಗೆ ಮತ್ತು ಹೆಸ್ಕಾಂ ಸಿಬ್ಬಂದಿ, ಪವರಮನ್, ಪೌರ ಕಾರ್ಮಿಕರಿಗೆ ಉಪಹಾರವನ್ನು ನೀಡಿದರು.
ಜಯ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಡ್ಡಿ ಹುಚ್ಚರಡ್ಡಿ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಜಂಗಲಿಸಾಬ ತರಕಾವತ, ತಿಮ್ಮಣ್ಣ ಕೋಳಿಗುಡ್ಡ, ಅಪ್ಪಸಾಬ ನದಾಫ ಭಾಗವಹಿಸಿದ್ದರು
Share
WhatsApp
Follow by Email