ಬ್ರೇಕಿಂಗ್ ನ್ಯೂಸ್ ಹೆಸ್ಕಾಮ್ ಅಧಿಕಾರಿಗಳ ಸಭೆ ನಡೆಸಿದ ಅಥಣಿ ಶಾಸಕ ಕುಮಠಳ್ಳಿ 06/05/202006/05/20201 min read admin ಅಥಣಿ : ಪಟ್ಟಣದ ಹೆಸ್ಕಾಮ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅಥಣಿ ಶಾಸಕ ಮಹೇಶ ಕುಮಠಳ್ಳಿ ರೈತರ ಸಂಕಷ್ಟಕ್ಕೆ ಸ್ಪಂದಿಸುವoತೆ ತಿಳಿ ಹೇಳಿದರು.ಬಹಳ ದಿನಗಳಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಬದಲಾವಣೆಗಾಗಿ ರೈತರಿಂದ ಹಣ ಪಡೆಯುತ್ತಾರೆ ಎಂದು ಆರೋಪಗಳು ಕೇಳಿ ಬರುತ್ತಿದ್ದವು ಆದರೆ ಸದ್ಯ ಅಂತಹ ಆರೋಪಗಳು ಕಡಿಮೆಯಾಗಿದ್ದು ನಮಗೂ ಕೂಡ ಸಂತಸ ತಂದಿದೆ.ಹಲವು ಕಡೆ ಅಧಿಕಾರಿಗಳು ರೈತರಿಂದ ಹಣ ಪಡೆದ ಆರೋಪಗಳು ಕೇಳಿ ಬರುತ್ತಿವೆ ಇನ್ನೊಮ್ಮೆ ರೈತರಿಂದ ಇಂತಹ ಆರೋಪಗಳು ಕೇಳಿ ಬಂದರೆ ನಾನು ಸುಮ್ಮನಿರುವದಿಲ್ಲ.ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು ಬಹಳ ಜನ ಸೆಕ್ಷಣ್ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಮೆರೆಯುವ ಅಗತ್ಯ ಇದೆ ಎಲ್ಲರೂ ಅಪ್ರಾಮಾಣಿಕರು ಎಂದು ನಾನು ಹೇಳುವದಿಲ್ಲ ಆದರೆ ತಪ್ಪು ಮಾಡಿದವರು ತಿದ್ದಿಕೊಳ್ಳಬೇಕು ಯಾವುದೇ ಕಾರಣಕ್ಕೂ ರೈತ ಬಾಂಧವರಿಗೆ ಹಾಗೂ ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಸಹನೆಯಿಂದ ವರ್ತಿಸಬೇಕು ಎಂದರು.ಇದೇ ವೇಳೆ ಎಷ್ಟು ಟಿಸಿಗಳು ಅನುಮತಿಸಲಾಗಿದೆ ಎಷ್ಟು ಟಿಸಿ ಸ್ಥಳಾಂತರ ಆಗಿದೆ ಎಂದು ಮಾಹಿತಿ ಕೇಳಿದರಲ್ಲದೆ ಎಷ್ಟು ಅವಧಿಯಲ್ಲಿ ಕೆಲಸ ಆಗುತ್ತದೆ ಎಂದು ಅಲ್ಲಿನ ಜನರಿಗೆ ಹೇಳಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.ಅಥಣಿ ಮತಕ್ಷೇತ್ರದಲ್ಲಿ ಹೆಸ್ಕಾಮ್ಅಧಿಕಾರಿಗಳು ಜನಪರ ಕೆಲಸಗಳಿಗೆ ಮುಂದಾಗಬೇಕು.ಕರ್ನಾಟಕ ಸರ್ಕಾರ ವಿದ್ಯುತ್ ಸರಬರಾಜು ಮಂಡಳಿಗಳ ಸಿಬ್ಬಂದಿಯ ಸಂಬಳ ಕಡಿತಗೊಳಿಸಿಲ್ಲ.ಸದ್ಯ ಮಳೆಗಾಲ ಸಮಯದಲ್ಲಿ ಮಳೆ ಗಾಳಿಯಿಂದ ವಿದ್ಯುತ್ ಕಂಬಗಳು ಉರುಳುವ ಮತ್ತು ಗಿಡಮರಗಳು ಬೀಳುವದರಿಂದ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು ಸಮರೊಪಾದಿಯಲ್ಲಿ ಕೆಲಸ ನೀರ್ವಹಿಸಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.ಈ ವೇಳೆ ವಿವಿಧ ಸೆಕ್ಷನ್ ಆಪಿಸರ್ ಗಳ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡ ಮಹೇಶ ಕುಮಠಳ್ಳಿ ರೈತರು ತಕರಾರು ತೆಗೆಯದಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಒಂದು ವೇಳೆ ಕರ್ತವ್ಯ ನೀರ್ವಹಣೆಗೆ ಅಡ್ಡಿ ಆತಂಕಗಳು ಎದುರಾದಲ್ಲಿ ನಮ್ಮ ಗಮನಕ್ಕೆ ತರಬೇಕು ಎಂದರಲ್ಲದೆ ಕೆಲವು ಅಧಿಕಾರಿಗಳ ವಿರುದ್ದ ಹಲವು ಆರೋಪಗಳು ಕೇಳಿ ಬಂದಿದ್ದು ಅಂತಹ ಆರೋಪಗಳು ಮರುಕಳಿಸದಂತೆ ಕೆಲಸ ನೀರ್ವಹಿಸಿ ಅಥಣಿ ಹೆಸ್ಕಾಮ್ ಗೆ ಒಳ್ಳೆಯ ಹೆಸರು ತರಬೇಕು ಒಂದು ವೇಳೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಅನ್ನುವದಾದರೆ ಅಂತಹವರ ಅಗತ್ಯ ನಮ್ಮ ಮತಕ್ಷೇತ್ರಕ್ಕೆ ಇಲ್ಲ ಬೇಕಾದರೆ ವರ್ಗಾವಣೆ ತಗೊಂಡು ಹೋಗಿಬಿಡಿ ಎಂದು ಕಡಕ್ ಆಗಿ ಬಿಸಿ ಮುಟ್ಟಿಸಿದರುಈ ವೇಳೆ ಅಥಣಿ ಹೆಸ್ಕಾಮ್ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಬಹುರೂಪಿ,ಮತ್ತು ಹೆಸ್ಕಾಮ್ ಅಧಿಕಾರಿಗಳಾದ ಕೆ ಎಸ್ ಠಕ್ಕನ್ನವರ,ಸಿದ್ದು ಮಹೇಶವಾಡಗಿ,ಮಲಕಪ್ಪ ಜಾಲಿಬೆಂಚಿ,ಎಸ್ ಎ ಪಾರ್ಥನಳ್ಳಿ,ಎನ್ ಬಿ ನೇಮನ್ನವರ,ಪಿ ಎಸ್ ಶಿವಣ್ಣವರ,ರಾಜು ಹಿಪ್ಪರಗಿ,ಬಿ ಎಸ್ ಶೀಲವಂತರ,ಪಿ ಕೆ ಹಿರೇಮಠ,ಸೇರಿದಂತೆ ಹಲವರು ಉಪಸ್ಥಿತರಿದ್ದರು Share