ಕೊರೊನ ವೈರಿಯರ್ಸ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

ಕೊರೊನ ವೈರಿಯರ್ಸ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ

ಮೂಡಲಗಿ : ಕೊರೋನಾ ವಿರುದ್ದ ಹೋರಾಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿಗಳ ತ್ಯಾಗ ಮತ್ತು ಸೇವೆ ಅತ್ಯಮೂಲವಾದದ್ದು, ಅವರ ಸೇವಾ ಮನೋಭಾವನೆಯನ್ನು ನಾವ ಎಲ್ಲರೂ ಅಭಿನಂದಿಸಬೇಕು ಎಂದು ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಹೇಳಿದರು.
ಪಟ್ಟಣದ ಕಲ್ಮೇಶ್ವರ ಸರ್ಕಲ್‌ದಲ್ಲಿ ಆಯೋಜಿಸಲಾದ ಕೊರೋನಾ ವಿರುದ್ದ ಹೋರಾಟ ಮಾಡಿದ ಕಾರ್ಯಕರ್ತೆಯರಿಗೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೋವಿಡ್-19 ವಿರುದ್ದ ಹೋರಾಟದಲ್ಲಿ ಸರ್ಕಾರದ ಎಲ್ಲ ರೀತಿಯ ವಿಭಾಗಗಳು ಕಾರ್ಯ ಮಾಡುತ್ತಿವೆ, ಎಲ್ಲಕಿಂತ ಮುಖ್ಯವಾಗಿ ಆಶಾ ಕಾರ್ಯಕರ್ತೆಯರು ತಮ್ಮ ಜೀವನ ಹಂಗು ತೋರೆದು ತಮ್ಮ ಮನೆಯ ಕೆಲಸಗಳನ್ನು ಬದಿಗೆ ಇಟ್ಟು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಿಕ್ಷಕ ಎಡ್ವಿನ್ ಪರಸನ್ನವರ ಮಾತನಾಡಿ, ಗುರು ಹಿರಿಯರು, ವಿವಿಧ ಮುಖಂಡರು, ದಾನಿಗಳ ಸಹಾಯದಿಂದ ಪ್ರತಿನಿತ್ಯ ಕಡು ಬಡವ, ದೀನ ದಲಿತರ ಮನೆ ಮನೆಗೆ ತರಕರಿ, ಹಾಲು, ಹಣ್ಣು ಹಾಗೂ ಔಷಧಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಹಾಗೂ ಅರಬಾಂವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿ ಒಂದು ಕುಡುಂಬಗಳಿಗೂ 84500 ದಿನಸಿ ಕಿಟ್ ಹಾಗೂ ಎರಡು ಲಕ್ಷದ ಐವತ್ತು ಸಾವಿರ ಮಾಸ್ಕ್ ವಿತರಿಸಿ ಜನರ ಕಷ್ಟಗಳಿಗೆ ತಾವು ಬೆಂಬಲವಾಗಿದ್ದಾರೆ, ಶಾಸಕರು ಮಾಡಿರುವಂತ ಕಾರ್ಯಕ್ಕೆ ನಾವು ಈ ಸಂದರ್ಭದಲ್ಲಿ ಶಾಸಕರಿಗೂ ಕೂಡಾ ಅಭಿನಂದೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಜೀವನ ಸೇವಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮಾಜಿ ಪುರಸಭೆ ಸದಸ್ಯ ಅನ್ವರ ನದಾಪ, ಮಹಾವೀರ ಬಟ್ಟೆ ಅಂಗಡಿ ಮಾಲಿಕ ಮೊಹನ ಜೈನ್, ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಯುವ ಮುಖಂಡ ಹಣಮಂತ ಸತರಡ್ಡಿ ಹಾಗೂ ಪಟ್ಟಣದ ಮುಖಂಡರು ಉಪಸ್ಥಿತರಿದ್ದರು.
Share
WhatsApp
Follow by Email