ಬ್ರೇಕಿಂಗ್ ನ್ಯೂಸ್ ಮಹಾಲಿಂಗಪುರ : ಬಾರ್ ಗಳ ಮುಂದೆ ನಿಂತಿದ್ದು ಅವರ ಕುಡಿತದ ತುಡಿತದ ಮಧ್ಯೆ ಕೊರೋನಾ ಭಯವನ್ನೇ ಮರೆತಂತೆ ಕಾಣುತಿತ್ತು. 07/05/202007/05/20201 min read admin ಮಹಾಲಿಂಗಪುರ : ಚಟದ ಚಪಲಕ್ಕೆ ಜೀವದ ಹಂಗು ತೊರೆದು ನಿದ್ದೆ ಬಿಟ್ಟು ಬೆಳಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ಚನ್ನಿಗರಾಯರು ಫರ್ಲಾಂಗ್ ಮೀರಿ ನಿಂತ ದೃಶ್ಯ ನಗರದ ಪ್ರತಿ ಮದ್ಯದ ಅಂಗಡಿಗಳ ಮುಂದೆ ಸಾಮಾನ್ಯವಾಗಿತ್ತುಲಾಕ್ ಡೌನ್ 3.ಔ ಕೆಲ ಸಡಿಲಿಕೆಗಳೊಂದಿಗೆ ಜಾರಿಯಾಗಿದ್ದನ್ನೇ ಬಂಡವಾಳ ಮಾಡಿಕೊಂಡ ನಗರದ ಎಣ್ಣೆ ಪ್ರಿಯರು ಇಂದು ಎಣ್ಣೆ ಮಾರಾಟ ಪ್ರಾರಂಭವಾಗುವ ಮುಂಜಾನೆ 9 ಗಂಟೆಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡoತೆ ಬೆಳಗಿನ ಜಾವದಿಂದಲೇ ಬಾರ್ ಗಳ ಮುಂದೆ ನಿಂತಿದ್ದು ಅವರ ಕುಡಿತದ ತುಡಿತದ ಮಧ್ಯೆ ಕೊರೋನಾ ಭಯವನ್ನೇ ಮರೆತಂತೆ ಕಾಣುತಿತ್ತು.ಇಲ್ಲಿ ಯಾವ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಪ್ರತಿ ಬಾರ್ ಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನರಿದ್ದು ಈ ಸರತಿಯ ಸಾಲಿನಲ್ಲಿ ಅಪ್ರಾಪ್ತರೂ ಕೂಡ ಕಂಡು ಬಂದರು.ಒಬ್ಬರಿಗೆ ಇಂತಿಷ್ಟೇ ಮದ್ಯ ಖರೀದಿಸಲು ಅವಕಾಶವಿರುವುದನ್ನ ಮನಗಂಡ ಕಾಳಸಂತೆಕೋರರು ಲಾಕ್ ಡೌನ್ ಸಮಯದಲ್ಲಿ 50-60 ರೂ ಬೆಲೆಯ ಮದ್ಯವನ್ನು 600-700 ರೂ.ಗಳಿಗೆ ಮಾರಿ ರುಚಿ ಉಂಡ ಹಲವರು ಇಂದು ಸಂಬಳ ಕೊಟ್ಟು ಜನರನ್ನಿಟ್ಟು ಖರೀದಿಸುತ್ತಿದ್ದ ಬಗ್ಗೆಯೂ ಕೇಳಿಬಂತು.ಈ ಚನ್ನಿಗರಾಯರ ಹೆಂಡತಿಯರು ಪರಿವಾರದ ತುತ್ತಿನ ಚೀಲ ತುಂಬಿಕೊಳ್ಳಲು ಅನ್ನಭಾಗ್ಯ ಅನ್ನಕ್ಕಾಗಿ ಪಡಿತರ ಅಂಗಡಿಗಳ ಮುಂದೆ ಚಡಪಡಿಸುತಿದ್ದರೆ, ಇತ್ತ ಇವರು ಸುಡು ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಮತ್ತಿನ ಗಮ್ಮತ್ತಿನ ಹೆಂಡಕ್ಕಾಗಿ ಕಾತರಿಸುತ್ತಿದ್ದರು.ಪ್ರತಿ ಅಂಗಡಿಗಳ ಮುಂದೆ ಕಟ್ಟಿಗೆಗಳಿಂದ ಬ್ಯಾರಿಕೇಡ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ ಮಾಡಿದ್ದ ಗುರುತುಗಳು ಕೇವಲ ನೆಪ ಮಾತ್ರವಾಗಿದ್ದವು.ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದದವರ ಮೇಲೆ ಪೋಲಿಸರು ಲಾಟಿ ರುಚಿಯನ್ನೂ ತೋರಿಸಬೇಕಾಯಿತು.ಇದರ ಮದ್ಯ ಕೆಲ ಪ್ರಗತಿ ಪರ ಜನತೆ ಮಧ್ಯ ಮಾರಾಟ ಸಂಪೂರ್ಣವಾಗಿ ಕೇಂದ್ರ, ರಾಜ್ಯ ಸರಕಾರಗಳು ನಿಷೇದಿಸಬೇಕಾಗಿತ್ತು ಎಂದು ಮರಳಿ ಪ್ರಾರಂಭವಾದ ಬಗ್ಗೆ ಬೇಸರ ವ್ಯಕ್ತಪಡಿಸುತಿದ್ದರು.ಏಕೆಂದರೆ ಬಹಳಷ್ಟು ಹೆಂಡಕ್ಕೆ ದಾಸರಾದ ಜನ ಕೊರೊನಾ ಮಧ್ಯ ಸೇವನೆ ಬಿಡಿಸಿತು ಎಂದು ಎಷ್ಟೋ ಕುಟುಂಬಗಳು ಎಲ್ಲ ಸದಸ್ಯರೊಟ್ಟಿಗೆ ಮದ್ಯ ವರ್ಝಿಸಿ ಸಂತೋಷ,ನೆಮ್ಮದಿಯ ಕಾಲ ಕಳೆದಿದ್ದಾರೆ.ಈಗ ಮತ್ತೆ ಮಧ್ಯ ಆರಂಭ ಪರಿವಾರಗಳಲ್ಲಿ ಆತಂಕ ತಂದೊಡ್ಡಿದೆ.ದೇಶದಲ್ಲಿ ಸಂಪೂರ್ಣ ಮಧ್ಯ ನಿಷೇಧವಾದರೆ ಯುವಕರಾದಿಯಾಗಿ ಎಲ್ಲರೂ ಸುಧಾರಿಸಿ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ.ಮಾನವ ಶಕ್ತಿ ವೃದ್ಧಿಯಾಗುವುದರೊಂದಿಗೆ ದೇಶ ವಿಶ್ವದಲ್ಲಿಯೇ ಶ್ರೇಷ್ಟತೆಯನ್ನು ಮೆರೆಯುತ್ತದೆ ಎಂದು ಸರ್ವ ಸಾಮಾನ್ಯರ ಮಾತಾಗಿದೆ.ಅಲ್ಲದೆ ಲಾಕ್ ಡಾವನ್ ನನ್ನು ಇನ್ನೊಂದಿಷ್ಟು ಕಾಲ ವಿಸ್ತರಿಸಬೇಕಾಗಿತ್ತು ಎಂದು ಅಲ್ಲಲ್ಲಿ ಚರ್ಚೆಗಳು ಸಹ ನಡೆಯುತಿದ್ದವು.ಎಲ್ಲದಕ್ಕೂ ಸರಕಾರ ಕಡೆಗೆ ಬೊಟ್ಟ ಮಾಡುವ ಬದಲಿಗೆ ಕೊರೊನಾ ರೊಗಾನುವನ್ನು ಹೊಡೆದೊಡಿಸಲು ಸರಕಾರ ನೀಡಿದ ಮಾರ್ಗ ಸೂಚಿಯನ್ನು ಎಲ್ಲರೂ ಚಾಚು ತಪ್ಪದೆ ಪಾಲಿಸಿ ಕೊರೊನಾ ಮುಕ್ತ ದೇಶವನ್ನಾಗಿ ಮಾಡೋಣ. Share