Skip to content
You are Here Home 2020 May 12 ಶಾಸಕರು ಸೌಜನ್ಯಕ್ಕಾದಸರೂ ಜನರಿಂದ ಅಹವಾಲು ಸ್ವೀಕರಿದೇ ಅಸಬ್ಯವಾಗಿ ವರ್ತಿಸಿ ಬೇದರಿಕೆ ಹಾಕಿದ್ದು ಶಾಸಕರ ಬೇಜಾವಾಬ್ದಾರಿತನ ವರ್ತನೆಯನ್ನು ಪಟ್ಟಣದ ಪುರಭೆ ಸದಸ್ಯರು ತೀವ್ರವಾಗಿ ಖಂಡಿಸಿದರು
ಮುಧ್ದೇಬಿಹಾಳ: ನಗರದ ಪಿಲೇಕಮ್ಮ ನಗರದಲ್ಲಿ ಯುಜಿಡಿ ಕಾಮಗಾರಿ ಮಾಡಿದ ಸಂದರ್ಭದಲ್ಲಿ ಹಾಳಾಗಿದ್ದ ರಸ್ತೇಯನ್ನು ದುರಸ್ತೀಗೋಳಿಸಿ ಎಂದು ಸಾರ್ವಜನಿಕರ ಪರವಾಗಿ ಅನಿಲ ನಾಯಕ ಶಾಸಕರ ಮನೆಗೆ ಹೋದ ಸಂಧರ್ಭದಲ್ಲಿ , ಶಾಸಕರು ಸೌಜನ್ಯಕ್ಕಾದಸರೂ ಜನರಿಂದ ಅಹವಾಲು ಸ್ವೀಕರಿದೇ ಅಸಬ್ಯವಾಗಿ ವರ್ತಿಸಿ ಬೇದರಿಕೆ ಹಾಕಿದ್ದು ಶಾಸಕರ ಬೇಜಾವಾಬ್ದಾರಿತನ ವರ್ತನೆಯನ್ನು ಪಟ್ಟಣದ ಪುರಭೆ ಸದಸ್ಯರು ತೀವ್ರವಾಗಿ ಖಂಡಿಸಿದರು. ತೋರಿದ್ದಾರೆ, ಪಟ್ಟಣದ ಪ್ರವಾಸಿ ಮಿರದ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ವಿರೇಶ ಹಡಲಗೇರಿ ಶಾಸಕರು ತಾವೇ ಸ್ವತಹÀ ಪಿಲೇಕಮ್ಮ ನಗರದಲ್ಲಿ ರಸ್ತೇಯನ್ನು ಗುದ್ದಲಿ ಪೂಜೆ ಮಾಡಿದ್ದಾರೆ, ಅದಕ್ಕಾಗಿ ಸಾರ್ವಜನಿಕರು ಅವರ ಮನೆಗೆ ಹೋಗಿದ್ದಾರೆ, ಅದನ್ನರಿಯದ ಶಾಸಕರು, ಮನಸೋ ಇಚ್ಚೇ ಮಾತನಾಡಿದ್ದನ್ನು ಖಂಡಿಸುತ್ತೇವೆ, ಇವರು ಹಿಟ್ಲರ್ ವರ್ತನೆ ಮಾಡುತ್ತಿದ್ದಾರೆ, ಇದನ್ನು ಕೈ ಬಿಡಬೆಕು ಮತ್ತು ಮುಂದಿನ ದಿನಮಾನಗಳಲ್ಲಿ ಶಾಸಕರು ಇದೇ ರೀತಿಯಲ್ಲಿ ತಮ್ಮ ವರ್ತನೆಯನ್ನು ಮುಂದುವರೆಸಿದ್ದೇಯಾದರೇ ನಾವು ಕಾನೂನುನ ಪ್ರಕಾರ ರಾಜ್ಯಪಾಲರಿಗೆ ಮತ್ತು ವಿಧಾನಸಭಾ ಸಭಾಪತಿಯವರಿಗೆ ದೂರು ಸಲ್ಲಿಸುತ್ತೇವೆ ಎಂದು ಮಾತನಾಡಿದರು. ನಂತರ ಮಾತನಡಿದ ಅನಿಲ ನಾಯಕ , ಸಾಸಕರ ಹತ್ತಿರ ನಮ್ಮ ಸಮಸ್ಯೇಯನ್ನು ಕೇಳಲು ಹೊದ ಸಂಧರ್ಭದಲ್ಲಿ ವಾರ್ಡನ್ನು ಗುತ್ತೀಗೆ ಪಡೆದುಕೊಂಡಿದ್ದಿಯಾ ? ಎಂದು ಗದರಿಸಿ ಮಾತನಾಡುತ್ತಾರೆ, ಹಾಗಾದರೇ ಮತಕ್ಷೇತ್ರವನ್ನು ಅವರು ಗುತ್ತಿಗೆ ಪಡೆದುಕೊಂಡಿದ್ದಾರೆಯೇ ಎಂದು ಪ್ರಶ್ನೇ ಹಾಕಿದ ಅವರು ಸಂವಿದಾನದ ಪ್ರಕಾರ ಅವರು ಶಾಸಕರು ತಾಲೂಕಿನಲ್ಲಿ ನಡೆಯುವ ಮೂಲಭೂತ ಸಮಸ್ಯೆಗಳನ್ನು ಅವರ ಹತ್ತೀರ ಕೇಳುವದು ತಪ್ಪಾ ? ಒಬ್ಬ ಪ್ರತಿನಿಧಿಯಾಗಿ ಜನರ ಸಮಸ್ಯೆಯನ್ನು ಕೇಳುವದು ಬಿಟ್ಟು ಮನೆಗೆ ಬಂದವರಿಗೆ ಬೆದರಿಕೆಯನ್ನು ಹಾಕುವದು ಸರಿಯೇ ಎಮದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಇದೇ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಮಹೆಬೂಬ ಗೊಳಸಂಗಿ, ವಿರೇಶ ಹಡಲಗೇರಿ, ರೀಯಾಜಅಹ್ಮದ ಢವಳಗಿ,ಮತ್ತು ಸಮೀರ್ ದ್ರಾಕ್ಷಿ, ಎಮ್ ಎ ಹುಣಸಗಿ, ಅನಿಲ ನಾಯಕ, ಎ ಎಚ್ ಮುಲ್ಲಾ, ಇನ್ನಿತರರು ಇದ್ದರು.
Post navigation