ಬ್ರೇಕಿಂಗ್ ನ್ಯೂಸ್ ಚಿಂಚಲಿ ಪಟ್ಟಣದ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಸುಮಾರು 500 ಬಟ್ಟೆಯ ಕಿಟ್‌ಗಳನ್ನು ವಿತರಣೆ 14/05/202014/05/2020 admin ರಾಯಬಾಗ : ಲಾಕ್‌ಡೌನ್ ಹಿನ್ನಲೆಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವ್ಯಾಪ್ತಿಯ ರಾಯಬಾಗ ವಿಧಾನಸಭೆಯಲ್ಲಿ ಬರುವ ಚಿಂಚಲಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಹಾರುನ ತರಡೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಚಿಂಚಲಿ ಪಟ್ಟಣದ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಸುಮಾರು 500 ಬಟ್ಟೆಯ ಕಿಟ್‌ಗಳನ್ನು ವಿತರಿಸಿದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷö್ಮಣರಾವ ಚಿಂಗಳೆ ಅವರು ಮಾತನಾಡಿ ಕೊರೋನಾದಿಂದ ಲಾಕಡೌನವಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುವುದನ್ನು ಕಂಡು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಬಡವರಿಗೆ ನಿರ್ಗತಿಕರಿಗೆ ಹಾಗೂ ಜನಸಾಮಾನ್ಯರಿಗೆ ವಿವಿಧ ರೀತಿಯ ಸಹಾಯ ಸಹಕಾರ ನೀಡುತ್ತಲೆ ಬರುತಿದ್ದಾರೆ ಅವರ ಒಂದು ಕಾರ್ಯ ಶ್ಲಾಘನಿಯವಾಗಿದೆ ಅದೇರೀತಿ ಚಿಂಚಲಿ ಪಟ್ಟಣದ ಧುರೀಣ ಹಾರುನ ತರಡೆ ಅವರು ಕೂಡಾ ಲಾಕಡೌನ ಸಮಯದಲ್ಲಿ ಮಧ್ಯಮ ವರ್ಗದ ಜನರಿಗೆ ಸೀರೆ, ಪ್ಯಾಂಟ್ ಶರ್ಟ ಸೇರಿದಂತೆ ಸುಮಾರು 500 ಬಟ್ಟೆಯ ಕೀಟ್‌ಗಳನ್ನು ನೀಡಿ ಮಾನವಿಯತೆ ಮೆರೆದಿದ್ದಾರೆಂದು ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಹಾವೀರ ಮೊಹಿತೆ, ಧೂಳಗೌಡ ಪಾಟೀಲ, ಅಪ್ಪಾಸಾಬ ಕುಲಗುಡೆ, ಹಾರುನ ತರಡೆ, ಅಬ್ಬಾಸ ಮುಲ್ಲಾ, ರಾಜು ಶಿರಗಾಂವೆ, ಕುಮಾರ ಹಾರೂಗೇರಿ, ಪ್ರವೀಣ ಹುಕ್ಕೇರಿ, ಕುಮಾರ ಹಾರೂಗೇರಿ, ಅಸ್ಕರ ತರಡೆ, ರಾವಸಾಬ ಜಾಧವ, ಯುವರಾಜ ದುರ್ವೆ, ಭರಮು ಕೋಳಿ, ಶಿವಾಜಿ ಸೌಂದಲಗಿ, ಸಂಭಾಜಿ ಶಿಂಧೆ ಸೇರಿದಂತೆ ಅನೇಕರು ಇದ್ದರು Share