ಬ್ರೇಕಿಂಗ್ ನ್ಯೂಸ್ ಮೂಡಲಗಿ ಕಸಾಪದಿಂದ ಪಾಪುಗೆ ನುಡಿನಮನ 19/03/202019/03/2020 admin ಮೂಡಲಗಿ: ಡಾ. ಪಾಟೀಲ ಪುಟ್ಟಪ್ಪನವರು ಅನಂತ ವಿಷಗಳ ಜ್ಞಾನವನ್ನು ಹೊಂದಿದ್ದ ಕನ್ನಡದ ವಿಶ್ವಕೋಶವಾಗಿದ್ದರು ಎಂದು ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು. ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಡಾ. ಪಾಟೀಲ ಪುಟ್ಟಪ್ಪನವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾಟೀಲ ಪುಟ್ಟಪ್ಪನವರಿಗೆ ಸರಿಸಾಟಿಯಾಗಿ ಮತ್ತೊಬ್ಬರಿರಲಿಲ್ಲ, ಕನ್ನಡಕ್ಕೆ ಒಬ್ಬನೇ ಪಾಪು ಎನ್ನುವ ಹೆಗ್ಗಳಿಕೆ ಅವರದಾಗಿತ್ತು ಎಂದರು. ಪ್ರೊ. ಸಾವಿತ್ರಿ ಕಮಲಾಪುರ ಮಾತನಾಡಿ ಕರ್ನಾಟಕ ಏಕೀಕರಣ ಮತ್ತು ಕನ್ನಡ ನೆಲ, ಜಲ ಹೋರಾಟದಲ್ಲಿ ಸಕ್ರೀಯರಾಗಿದ್ದ ಪಾಪು ಅವರ ಕೊಡುಗೆ ಅತ್ಯಂತ ಹಿರಿದಾಗಿದೆ. ಅನುಭವ ಇರುವಲ್ಲಿ ಅಮೃತ್ವ ಇದೆ ಎನ್ನುವ ಅವರ ಅಂಕಣ ಬರಹವು ಅತ್ಯಂತ ಜನಪ್ರಿಯವಾಗಿತ್ತು ಎಂದರು. ಡಾ. ಮಹಾದೇವ ಜಿಡ್ಡಿಮನಿ ಮಾತನಾಡಿ ಕನ್ನಡದಲ್ಲಿ ಪಾಪು ಹೇಗಿದ್ದಾರೋ ಹಾಗೇ ಮಹಾರಾಷ್ಟ್ರಕ್ಕೂ ಒಬ್ಬ ಪಾಪು ಬೇಕು ಎನ್ನುವ ಮಹಾರಾಷ್ಟçದವರ ಮಾತು ಪಾಟೀಲ ಪುಟ್ಟಪ್ಪನವರ ಹೋರಾಟದಲ್ಲಿ ಗಟ್ಟತಿನ ಮತ್ತು ಭಾಷಾಭಿಮಾನವನ್ನು ವ್ಯಕ್ತಪಡಿಸುತ್ತದೆ ಎಂದರು. ಬಾಲಶೇಖರ ಬಂದಿ, ಕಸಾಪ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ, ಚಿದಾನಂದ ಹೂಗಾರ ಪಾಪು ಕುರಿತು ಮಾತನಾಡಿದರು. ಪಾಟೀಲ ಪುಟ್ಟಪ್ಪನವರ ಭಾವಚಿತ್ರದ ಮುಂದೆ ಮೊಂಬತ್ತಿಗಳನ್ನು ಉರಿಸಿ ಒಂದು ನಿಮಿಷ ಮೌನ ಆಚರಿಸಿದರು. ಬಿ.ಆರ್. ತರಕಾರ, ಕನ್ನಡಪರ ಸಂಘಟನೆಗಳ ಶಿವರಡ್ಡಿ ಹುಚ್ಚರಡ್ಡಿ, ಸುಭಾಷ ಕಡಾಡಿ, ಸಚೀನ ಲಂಕೆನ್ನವರ, ಮಹಾರಾಜ ಸಿದ್ದು, ಬಿ.ಎಂ. ನಂದಿ, ಬಸವರಾಜ ಮುಧೋಳ, ಶಾನೂರ ಕುರಬೇಟ, ರಾಜು ಹುಬ್ಬಳ್ಳಿ, ಸುಭಾಷ ಒಡೋಡಗಿ ಇದ್ದರು Share