ಹಳ್ಳೂರ ಗ್ರಾಮದ ಕರೋನಾ ಸೇನಾನಿಗಳಿಗೆ ಅಭಿನಂದನೆ ಹಾಗೂ ಸತ್ಕಾರ

ಹಳ್ಳೂರ ಗ್ರಾಮದ ಕರೋನಾ ಸೇನಾನಿಗಳಿಗೆ ಅಭಿನಂದನೆ ಹಾಗೂ ಸತ್ಕಾರ



ಹಳ್ಳೂರ : ಮಹಿಳಾ ವೇದಿಕೆ ಹಾಗೂ ಲೇಖಕಿಯರ ಸಂಘ ಮೂಡಲಗಿ ಇದರ ಅಧ್ಯಕ್ಷರಾದ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿಯರಾದ ಸಾವಿತ್ರಿ ಎಂ. ಕಮಲಾಪೂರ ಹಾಗೂ ಅವರ ಪತಿ ನಾಗೇಂದ್ರ ಹೊಸಮನಿಯವರು ಸರ್ಕಾರಿ ವೈದ್ಯ ಸಿಬ್ಬಂದಿ, ಬಿಟ್ ಪೋಲಿಸ್ ,ಪಿ.ಡಿ.ಓ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಅಭಿನಂದಿಸಿ ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು .ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು ಎಂದು ಹೇಳಿದರು. ಆರಕ್ಷಕರ, ವೈದ್ಯರ, ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಯು ಶ್ಲಾಘನೀಯವಾದುದು. ಅವರ ಸೇವೆಗೆ ಬೆಲೆಕಟ್ಟಲಾಗದು ಎಂದು ಹೇಳಿದರು. ಬಿಟ್ ಪೋಲೀಸರಾದ ನಾಗಪ್ಪ ಒಡೆಯರ, ವೈದ್ಯಾಧಿಕಾರಿಗಳಾದ ಮುರಗೋಡರವರು, ಪಿ ಡಿ ಓ ತಾಳಿಕೋಟೆಯವರು ಇವರೆಲ್ಲರೂ ಮಾತನಾಡಿ ಸರ್ಕಾರದ ಸೂಕ್ತವಾದ ಮಾರ್ಗೋಪಾಯಗಳನ್ನು ಪಾಲಿಸಿದ್ದರಿಂದ ನಮ್ಮ ಊರಿನಲ್ಲಿ ಒಂದು ಕರೋನಾ ಪಾಸಿಟಿವ್ ಕೇಸ್ ಬಂದಿಲ್ಲ ಎಂದು ಹೇಳಿದರು.ಪ್ರತಿಯೊಬ್ಬರು ಸ್ವಚ್ಛತೆಯ ಜೊತೆಗೆ ಸೂಕ್ತವಾದ ಕ್ರಮಗಳನ್ನು ಪಾಲಿಸಬೇಕೆಂದು ಹೇಳಿದರು.ಇಂತಹ ಸೇನಾನಿಗಳ ಕರ್ತವ್ಯಕ್ಕೆ ಅಡ್ಡಿಪಡಿಸದೆ ಸಾರ್ವಜನಿಕರೆಲ್ಲರೂ ಪ್ರೋತ್ಸಾಹ ನೀಡಿ ಮಹಾಮಾರಿ ಕರೋನಾವನ್ನು ಹೊಡೆದೋಡಿಸಲು ಒಂದಾಗಿ ಕೆಲಸ ಮಾಡಬೇಕೆಂದು ಶ್ರೀಮತಿ ಸಾವಿತ್ರಿ ಎಂ ಕಮಲಾಪೂರ ಅವರು ಹೇಳಿ ನಿರೂಪಣೆಯೊಂದಿಗೆ ವಂದಿಸಿದರು.
Share
WhatsApp
Follow by Email