ಮೂಡಲಗಿ ಶಿಕ್ಷಣ ಸಂಸ್ಥೆ ನೌಕರರ ಪತ್ತಿನ ಸಹಕಾರಿ ಸಂಘದಿoದ ಆಶಾ ಕಾರ್ಯಕರ್ತೆಯರಿಗೆ ರೂ. 3 ಸಾವಿರ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದರು

ಮೂಡಲಗಿ ಶಿಕ್ಷಣ ಸಂಸ್ಥೆ ನೌಕರರ ಪತ್ತಿನ ಸಹಕಾರಿ ಸಂಘದಿoದ ಆಶಾ ಕಾರ್ಯಕರ್ತೆಯರಿಗೆ ರೂ. 3 ಸಾವಿರ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದರು

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ನೌಕರರ ಪತ್ತಿನ ಸಹಕಾರಿ ಸಂಘದಿoದ ಕೊರೊನಾ ಸೇನಾನಿಗಳಾದ ಮೂವರು ಆಶಾ ಕಾರ್ಯಕರ್ತೆಯರಿಗೆ ತಲಾ ರೂ. 3 ಸಾವಿರ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದರು.
ಪ್ರೊ. ಎಸ್.ಬಿ. ಖೋತ, ಶಿಕ್ಷಕ ಸಿ.ಎಂ. ಹಂಜಿ ಮಾತನಾಡಿ ‘ಕೊರೊನಾ ಸೋಂಕು ಹರಡದಂತೆ ತಮ್ಮ ಜೀವದ ಭಯ ಬಿಟ್ಟು ಸಮಾಜದ ಕ್ಷೇಮಕ್ಕಾಗಿ ಹೋರಾಡಿದ ಆಶಾ ಕಾರ್ಯಕರ್ತರ ಕಾರ್ಯವು ಅನುಪಮವಾಗಿದೆ’ ಎಂದರು.
ನೌಕರರ ಪತ್ತಿನ ಸಂಸ್ಥೆ ಉಪಾಧ್ಯಕ್ಷೆ ಭಾರತಿ ತಳವಾರ, ಡಾ. ಬಿ.ಸಿ. ಪಾಟೀಲ, ಬಸವಂತ ಬರಗಾಲಿ, ವೆಂಕಟೇಶ ಪಾಟೀಲ, ಮನೋಹರ ಲಮಾಣಿ, ಪಾಂಡು ಬುದ್ನಿ, ಅರ್ಜುನ ಗಸ್ತಿ ಇದ್ದರು.
Share
WhatsApp
Follow by Email