ಬ್ರೇಕಿಂಗ್ ನ್ಯೂಸ್ ಧರ್ಮಸ್ಥಳ ಯೋಜನಾ ಕಚೇರಿಗೆ ಸ್ಯಾನಿಟೈಸರ್ ವಿತರಣೆ 31/05/202031/05/20201 min read admin ಬೈಲಹೊಂಗಲ : ಇಡೀ ದೇಶದಲ್ಲಿ ಕಂಟಕವಾಗಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತ ಕ್ರಮವಹಿಸಬೇಕೆಂದು ಸೇಲ್ಕೋ ಸೋಲಾರ್ ಮ್ಯಾನೇಜರ್ ಕೆ.ಎಸ್.ಪಾಟೀಲ ಹೇಳಿದರು.ಪಟ್ಟಣದ ಧರ್ಮಸ್ಥಳ ಯೋಜನಾ ಕಚೇರಿಗೆ ಸೋಲಾರ್ ಸಂಸ್ಥೆಯಿoದ ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು. ಕೊರೊನಾ ವೈರಸ್ ನಿವಾರಣೆಯಾಗುವವರೆಗೂ ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ ಹಾಗೂ ಸ್ಯಾನಿಟೈಸರ್ ಬಳಸಬೇಕೆಂದರು.ಧರ್ಮಸ್ಥಳ ಯೋಜನಾಧಿಕಾರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು Share