ಬ್ರೇಕಿಂಗ್ ನ್ಯೂಸ್ ಬೈಲಹೊಂಗಲ: ವಿಶೇಷ ಪ್ಯಾಕೇಜ ನೀಡಲು ಒತ್ತಾಯಿಸಿ ಮನವಿ 31/05/202031/05/20201 min read admin ಬೈಲಹೊಂಗಲ : ಅಲೆಮಾರಿ ಗೋಂಧಳಿ ಬುಡಬುಡಿಕೆ, ಜ್ಯೋತಿ, ವಾಸುದೇವ ಸಮುದಾಯಗಳನ್ನು ಸರಕಾರದ ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸಿ ಅಖಿಲ ಕರ್ನಾಟಕ ಗೊಂಧಳಿ ಸಮಾಜ ಸಂಘದಿoದ ಉಪವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು .ಸಮಾಜದ ಮುಖಂಡರಾದ ಸಂತೋಷ ಬಾಗ್ಲೆ, ಪ್ರಕಾಶ ಬಾಗ್ಲೆ ಮಾತನಾಡಿ, ಲಾಕಡೌನ್ ಹಿನ್ನಲೆಯಲ್ಲಿ ಸಂಕಷ್ಟಗೊಳಗಾದವರ ನೆರವಿಗೆ 1600 ಕೋಟಿಗಳಿಗೂ ಹೆಚ್ಚಿನ ಆರ್ಥಿಕ ಸಹಾಯದ ವಿಶೇಷ ಪ್ಯಾಕೇಜ್ ನೀಡಿರುವದು ಶ್ಲಾಘನೀಯ. ಅಲೆಮಾರಿ ಜೀವನ ನಡೆಸುತ್ತಿದ್ದ ಲಕ್ಷಾಂರ ಕುಟುಂಬಳು ಹೊಟ್ಟೆಗೆ ಹಿಟ್ಟಿಲ್ಲದೇ ಬದುಕುತ್ತಿದ್ದಾರೆ. ಇವರು ಊರೂರು ಸುತ್ತುತ್ತ ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದಾರೆ. ಗೊಂದಲ ಹಾಕುತ್ತ ಬುಡಬುಡಕಿ ಬಾರಿಸುತ್ತಾ ಭಿಕ್ಷಾಟನೆ ಮಾಡಿ, ಕೌದಿ ಹೊಲೆದು, ಪಾತ್ರೆ ವ್ಯಾಪಾರ, ಕಬ್ಬಿಣದ ತ್ಯಾಜ್ಯ ವಸ್ತುಗಉ ಇತ್ಯಾದಿಗಳನ್ನು ಮಾರುತ್ತ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರೂ ತಮ್ಮ ವ್ಯವಸಾಯವನ್ನು ತಳ್ಳುವಗಾಡಿ, ಬೈಕ, ಸೈಕಲ್ ಇತ್ಯಾದಿಗಳ ಮೂಲಕ ಹಳ್ಳಿ, ಹಳ್ಳಿಗಳಿಗೆ ಹೋಗಿ, ತಮ್ಮ ಉಪಜೀವನ ಸಾಗಿಸುತ್ತಿದ್ದಾರೆ. ಮಹಾಮಾರಿ ಕೊರೊನಾ ವೈರಸದಿಂದಾಗಿ ಜನರು ಹೊರಗೆ ಹೋಗುವುದು ಸಾದ್ಯವಾಗಲಿಲ್ಲ. ಇಂಥ ಅಲೆಮಾರಿ ವ್ಯವಸಾಯ ಮಾಡುವ ಲಕ್ಷಾಂತರ ಕಾರ್ಮಿಕರ ಕಷ್ಟಕ್ಕೆ ಗುರಿಯಾಗಿದ್ದಾರೆ. ಕಳೆದೆರಡು ತಿಂಗಳು ಇವರು ತಮ್ಮ ಉಪಜೀವನಕ್ಕೆ ನೆಚ್ಚಿದ ವ್ಯವಸಾಯವೇ ಕುಸಿದು ಹೋಗಿದ್ದರಿಂದ ಅವರಿಗೆ ಆರ್ಥಿಕ ನೆರವಿನ ಅತ್ಯಂತ ಅವಶ್ಯಕತೆ ಇರುತ್ತದೆ. ಆದ್ದರಿಂದ ಈ ಅಲೆಮಾರಿ ಜನರಿಗೆ ಪರಿಹಾರ ಧನ 10 ಸಾವಿರ ರೂ. ಕನಿಷ್ಟ 6 ತಿಂಗಳು ಕಾಲಾವಧಿಗೆ ನೀಡುವುದ ಅವಶ್ಯವಿದೆ. ಅವರು ಮತ್ತೆ ತಮ್ಮ ಬದುಕನ್ನು ಚೇತರಿಸಿಕೊಳ್ಳಲು ಸಾದ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಅಲೆಮಾರಿ ಭಾಂಡಿ ಕಾರ್ಮಿಕರಿಗೆ ರೂ.10 ಸಾವಿರ ಪರಿಹಾರ ಧನ ದೊರಕುವಂತೆ ಆರ್ಥಿಕ ಸಹಾಯ ಮಾಡಬೇಕೆಂದು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಮಂಜು ಜೋಷಿ, ಕೃಷ್ಣ ಗಾಣಿಗೇರ, ನಂದು ಬಾಗ್ಲೆ, ಯಲ್ಲಪ್ಪಾ ಬಾಗ್ಲೆ ಉಪಸ್ಥಿತರಿದ್ದರು Share