ಆಗಸ್ಟ್‌ 15 ರಂದು ಭಾರತದಲ್ಲಿ 5G ಸೇವೆ ಆರಂಭಿಸಲಿವೆ ಜಿಯೋ ಮತ್ತು ಏರ್‌ಟೆಲ್!

ಭಾರತದಲ್ಲಿ ತನ್ನ 5G ಸೇವೆ ಆರಂಭಿಸಲು ಇದ್ದಕ್ಕಿಂತ ಉತ್ತಮ ದಿನವಿಲ್ಲ ಎಂದು ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳು ನಿರ್ಧಾರ ಮಾಡಿವೆ ಎಂದು ಟೆಲಿಕಾಂ ಉದ್ಯಮ ಮೂಲಗಳು ತಿಳಿಸಿವೆ. ದೇಶದಲ್ಲಿ ಆಗಸ್ಟ್‌ 15 ರಂದು 5G ಸೇವೆ ಆರಂಭವಾಗಬೇಕು ಎಂಬ ದೃಷ್ಟಿಯಲ್ಲೇ ಟೆಲಿಕಾಂ ಇಲಾಖೆಯು ಆಗಸ್ಟ್ 10 ರಂದು 5G ಸ್ಪೆಕ್ಟ್ರಮ್‌ಗಳನ್ನು ಹಂಚಿಕೆಯನ್ನು ಮಾಡುತ್ತಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ವಾಣಿಜ್ಯ 5G ಸೇವೆ ಬಳಕೆಗೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಆಗಸ್ಟ್ 10 ರಂದು ಜಿಯೋ, ಏರ್‌ಟೆಲ್, ವಿಐ ಮತ್ತು ಅದಾನಿ ಗ್ರೂಪ್‌ಗಳು 5G ಸ್ಪೆಕ್ಟ್ರಮ್ ಹಂಚಿಕೆಯನ್ನು ಪಡೆದುಕೊಳ್ಳುತ್ತಿರುವುದು ಖಚಿತವಾಗಿದೆ ಹಾಗೂ ಆಗಸ್ಟ್‌ 15 ರಂದು ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳು ದೇಶಾದ್ಯಂತ 5G ಸೇವೆ ಆರಂಭಿಸುವ ನಿರೀಕ್ಷೆ ಇದೆ.! ಹೌದು, ಭಾರತದಲ್ಲಿ ತನ್ನ 5G ಸೇವೆ ಆರಂಭಿಸಲು ಇದ್ದಕ್ಕಿಂತ ಉತ್ತಮ ದಿನವಿಲ್ಲ ಎಂದು ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳು ನಿರ್ಧಾರ ಮಾಡಿವೆ ಎಂದು ಟೆಲಿಕಾಂ ಉದ್ಯಮ ಮೂಲಗಳು ತಿಳಿಸಿವೆ. ದೇಶದಲ್ಲಿ ಆಗಸ್ಟ್‌ 15 ರಂದು 5G ಸೇವೆ ಆರಂಭವಾಗಬೇಕು ಎಂಬ ದೃಷ್ಟಿಯಲ್ಲೇ ಟೆಲಿಕಾಂ ಇಲಾಖೆಯು ಆಗಸ್ಟ್ 10 ರಂದು 5G ಸ್ಪೆಕ್ಟ್ರಮ್‌ಗಳನ್ನು ಹಂಚಿಕೆಯನ್ನು ಮಾಡುತ್ತಿದೆ ಎಂದು ತಿಳಿದುಬಂದಿದೆ. ಇತ್ತ ಆಗಸ್ಟ್ 10 ರಂದು 5G ಸ್ಪೆಕ್ಟ್ರಮ್ ಹಂಚಿಕೆ ಮಾಡುತ್ತಿರುವ ಬಗ್ಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಸಹ ಖಚಿತಪಡಿಸಿರುವುದರಿಂದ, ದೇಶದ ಸ್ವಾತಂತ್ಯ ದಿನ ಆಗಸ್ಟ್‌ 15ನೇ ತಾರೀಖು 5G ಸೇವೆಯ ಹೆಗ್ಗುರುತಾಗುವುದು ಬಹುತೇಕ ಖಚಿತವಾದಂತಿದೆ.

5G ಸೇವೆಯಿಂದ ಏನೆಲ್ಲಾ ಲಾಭವಾಗಲಿದೆ?

ಭಾರತದಲ್ಲಿ 5G ಸೇವೆಗಳು ಬರುವುದರಿಂದ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಏಕೆಂದರೆ 5G ಸೇವೆಗಳು 4G ಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಒಂದು ಹಂತದ ವರದಿಯ ಪ್ರಕಾರ 5G ಸೇವೆ ಲಭ್ಯವಾದರೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎನ್ನಲಾಗಿದೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆ ಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ.

ಆದರೆ ಕೇಂದ್ರದ ಟೆಲಿಕಾಂ ಮಿನಿಸ್ಟರ್‌ ಅಶ್ವಿನಿ ವೈಷ್ಣವ್ ಅವರು ಹೇಳಿರುವಂತೆ ಭಾರತದಲ್ಲಿ ಮೊದಲ ಹಂತದ 5G ಸೇವೆಗಳನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗುತ್ತದೆ. ಒಂದು ಅಥವಾ ಎರಡು ವರ್ಷದ ಅವಧಿಯಲ್ಲಿ ಇಡೀ ದೇಶಾದ್ಯಂತ 5G ನೆಟ್‌ವರ್ಕ್‌ ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದ್ದಾರೆ. ಇನ್ನು ಈ ಭಾರಿ ನಡೆದ 5G ತರಂಗಾಂತರದ ಹರಾಜಿನಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಸ್ಪೆಕ್ಟ್ರಂ ಮಾರಾಟವಾಗಿದೆ. ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್ ಮತ್ತು ವಿ ಜೊತೆಗೆ, ಹೊಸದಾಗಿ ಟೆಲಿಕಾಂ ವಲಯವನ್ನು ಪ್ರವೇಶಿಸಲು ಮುಂದಾಗಿರುವ ಅದಾನಿ ಡೇಟಾ ನೆಟ್‌ವರ್ಕ್ ಕೂಡ ಈ ಬಾರಿ ಹರಾಜಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು

Share
WhatsApp
Follow by Email