ರಾಯಚೂರು: ಕಲ್ಮಲಾ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆ

ರಾಯಚೂರು: ಕಲ್ಮಲಾ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆ

ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಕಲ್ಲೂರು ರಸ್ತೆಯ ಬಳಿ ಆಗ ತಾನೇ ಜನಿಸಿದ ನವಜಾತ ಗಂಡು ಶಿಶು ಪತ್ತೆಯಾಗಿದೆ.

ಶಿಶುವಿನ ಅಳುವ ಶಬ್ದ ಕೇಳಿದ ದಾರಿಹೋಕರು ತಕ್ಷಣವೇ ಕಲ್ಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಶಿಶುವನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆ ಮೂಲಗಳ ಪ್ರಕಾರ, ಶಿಶು ಪ್ರಸ್ತುತ ಆರೋಗ್ಯವಾಗಿದ್ದು, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಶಿಶುವಿನ ಹೆತ್ತವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Share
WhatsApp
Follow by Email