ಬ್ರೇಕಿಂಗ್ ನ್ಯೂಸ್ ಕೊರೊನಾ ಭೀತಿ; ಭಾರತ ಲಾಕ್ಡೌನ್ ಹಿನ್ನೆಲೆ ಸಾವಳಗಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ರದ್ದು 27/03/202027/03/2020 admin ಗೋಕಾಕ: ಕೊರೊನಾ ಸೋಂಕು ಭೀತಿಯ ವರ್ತಮಾನ ಕಾಲದ ದುಸ್ಥಿತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಾನಕ್ರಮಗಳ ಆಜ್ಞೆಯಂತೆ ಏ. 9ರಿಂದ ಏ. 17ರ ವರೆಗೆ ನಡೆಯಬೇಕಾಗಿದ್ದ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಪೀಠಾಧಿಪತಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು, ಜಾನುವಾರು ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ದರ್ಶನ ನಿಷೇಧ: ಭಾರತ ಲಾಕ್ಡೌನ್ ತೆರವು ಆಗುವವರಿಗೆ ಮತ್ತು ಸರ್ಕಾರದ ಅದೇಶ ಬರುವ ವರೆಗೆ ಭಕ್ತರಿಗೆ ಪೀಠದಲ್ಲಿ ಸನ್ನಿಧಿಯ ಮತ್ತು ಜಗದ್ಗುರುಗಳ ದರ್ಶನವನ್ನು ನಿಷೇಧಿಸಲಾಗಿದೆ. ಭಕ್ತಾದಿಕಗಳು ತಾವು ಮನೆಯಲ್ಲಿದ್ದುಕೊಂಡು ಶಿವಲಿಂಗೇಶ್ವರರನ್ನು ಸ್ಮರಿಸಿ ಆಶೀರ್ವಾದವನ್ನು ಪಡೆದು ಧನ್ಯರಾಗಬೇಕು ಎಂದು ಸನ್ನಿಧಿಯವರು ತಿಳಿಸಿದ್ದಾರೆ Share