ಬ್ರೇಕಿಂಗ್ ನ್ಯೂಸ್ “ಪಕ್ಷಿಗಳಿಗೆ ನೀರುಣಿಸಿ ಪಕ್ಷಿಗಳ ಸಂಕುಲ ರಕ್ಷಿಸಿ” ಪ್ರಚಾರಕ್ಕಾಗಿ ಅಲ್ಲ ಪಕ್ಷಿಗಳ ಉಳಿವಿಗಾಗಿ ನನ್ನ ಕೆಲಸ : ವೆಂಕಟೇಶ್ ಕಾಂಬಳೆ 17/03/202017/03/2020 admin ಮುಧೋಳ : ತಮ್ಮ ಕೆಲಸಗಳನ್ನು ಬಿಟ್ಟು ಸಮಾಜ ಸೇವೆ, ಪರಿಸರ ಸೇವೆ ಮಾಡೋದು ಕಡಿಮೆ ಆದರೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ವೆಂಕಟೇಶ್ ಎಲ್ ಕಾಂಬಳೆ ಎಂಬ ಯುವಕ ತನ್ನ ಕೆಲಸಗಳು ಪಕ್ಕಕೆ ಇಟ್ಟು ಪಕ್ಷಿಗಳಿಗೆ ನೀರಿನ ಸೌಕರ್ಯ ಮಾಡಲು ಮುಂದಾಗಿದ್ದಾನೆ. ಹೌದು ಈಗ ಬೇಸಿಗೆಕಾಲ ಶುರುವಾಗಿದೆ ಬಿಸಿಲಿನ ತಾಪಕ್ಕೆ ಕೆಲವು ಸಲ ಮನುಷ್ಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ, ಪಕ್ಷಿಗಳು ನೆರಳು ಹುಡುಕುತ್ತಾ ಅಲೆದಾಡುವುದು ಸಾಮಾನ್ಯ. ಈ ಬೇಸಿಗೆ ಸಮಯದಲ್ಲಿ ಜನಕ್ಕೆ ಎಷ್ಟು ಬೇಕು ಅಷ್ಟು ನೀರು ಎಲ್ಲಿಬೇಕಾದರೂ ಸಿಗುತ್ತದೆ. ಆದರೆ ಪ್ರಾಣಿ ಪಕ್ಷಿಗಳಿಗೆ ನೀರನ್ನು ಹರಸಿಕೊಂಡು ಈ ಬಿಸಿಲಿನಲ್ಲಿಯೇ ಸಾಕಷ್ಟು ದೂರ ಹೋಗಬೇಕಾಗುತ್ತದೆ. ಬೇಸಿಗೆ ಬಿಸಿಲ ಝುಳಕ್ಕೆ ನೀರಿನ ಸೆಲೆಗಳು ಬತ್ತಿಹೋಗುತ್ತವೆ, ಬಾಯಾರಿ ಕಂಗೆಡುವ ಬಾನಾಡಿಗಳು ಈ ಬೇಸಿಗೆ ಋತುವಿನಲ್ಲಿ ನೀರು ಸಿಗದೆ ಒದ್ದಾಡಿ ಪ್ರಾಣ ಬಿಡುತ್ತವೆ. ಪಕ್ಷಿಗಳು ಹನಿ ನೀರಿಗಾಗಿ ಪರಿತಪಿಸುತ್ತವೆ. ಹಾಗಾಗಿ ತಾಪಮಾನದ ನೀರನ್ನು , ಆಹಾರವನ್ನು ಪ್ರಾಣಿ ಪಕ್ಷಿಗಳಿಗೆ ನೀರು ನೀಡುವ ಮೂಲಕ ಅವುಗಳ ಪ್ರಾಣ ಉಳಿಸೋಣ ಎಂಬುವುದು ವೆಂಕಟೇಶ್ ಮಾತು. ಅದಕ್ಕೆ ನಗರ ಕೆಲವು ಕಡೆ ಗಿಡಗಳಿಗೆ ಒಂದು ತಟೆ ಕಟ್ಟಿ ಅದರಲ್ಲಿ ನೀರು, ಆಹಾರ ಹಾಕುವ ಕೆಲಸ ಮಾಡುತ್ತಿದ್ದಾನೆ. ಇಂತಹ ಪಕ್ಷಿ ಪ್ರೇಮಿಗಳಿಗೆ ಸಾಧ್ಯವಾದರೆ ಕೈ ಜೋಡಿಸಿ ಅಥವಾ ನೀವು ಮಾಡಿ. ಹನಿ ನೀರು ಹಕ್ಕಿಗಳ ಜೀವ ಉಳಿಸಬಲ್ಲದು : ಕನ್ನಡ ಟುಡೆ ನ್ಯೂಸ್ ಕಳಕಳಿ Share