ಗುರ್ಲಾಪೂರ : ಕರೋನಾ ಬಗ್ಗೆ ಆತಂಕ ಬೇಡ ಜಾಗೃತಿ ಇರಲಿ, ಮೇಲಿಂದ ಮೇಲೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಕೈ ವಸ್ತ ಉಪಯೋಗಿಸಬೇಕು, ಸೊಂಕು ಪೀಡಿತರ ಸಂಪರ್ಕದಿoದ ದೂರವಿರಬೇಕು, ಮಾಂಸ ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೆಯಿಸಿ ಉಪಯೋಗಿಸಬೇಕು ಎಂದು ಗೋಕಾಕ ತಾಲೂಕಾ ಆರೋಗ್ಯ ಶಿಕ್ಷಣ ವಿಭಾಗದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಬಿ. ಈಶ್ವರಪ್ಪಗೋಳ ಹೇಳಿದರು.
ಅವರು ದಿ. ೧೮ ರಂದು ಸ್ಥಳೀಯ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ,. ಈಲ್ಲಾ ಸರ್ವೇಕ್ಷಣಾ ಘಟಕ ಬೆಳಗಾವಿ, ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳು, ಗೋಕಾಕ ಇವರು ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಮೊದಲು ಹಲವಾರು ಗಾಳಿಯಲ್ಲಿ ಹರಡುವಂತಹ ಭಯಾನಕ ರೋಗಗಳನ್ನು ಕಂಡಿದ್ದೇವೆ. ಕರೋನಾ ಅಷ್ಟು ಭಯಾನಕ ರೋಗವಲ್ಲ ಯಾರು ಭಯಪಡುವ ಅಗತ್ಯವಿಲ್ಲ ಸ್ವಚ್ಛತೆ ಬಗ್ಗೆ ನಿಗಾವಹಿಸಿ ಇನ್ನೊಬ್ಬರಿಂದ ಅಂತರ ಕಾಯ್ದುಕೊಳ್ಳಿ ಇಷ್ಟು ನಾವು ಪಾಲಿಸಿದರೆ ಈ ರೋಗವನ್ನು ನಮ್ಮ ದೇಶದಿಂದ ಹೋಗಲಾಡಿಸಲು ಸಾಧ್ಯ, ತಲೆನೋವು, ಗಂಟಲುನೋವು, ಕೆಮ್ಮು, ಬೇದಿ, ಜ್ವರ, ಎದೆನೋವು ತೀವ್ರ ಎದೆಬಡಿತ, ಉಸಿರಾಟದ ತೊಂದರೆ, ನಿಮೊನಿಯಾ, ಕಿಡ್ನಿ ವೈಪಲ್ಯ ಇದು ಕರೋನಾ ವೈರಸ್ ಹರಡುವ ಲಕ್ಷಣಗಳು, ನಿಮಗೆ ಸಮಸ್ಯೆ ಕಂಡುಬoದಲಿ ಹತ್ತಿರ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿರಿ ಅಥವಾ ಉಚಿತ ಸಹಾಯವಾಣಿ ೧೦೪ಕ್ಕೆ ಕರೆ ಮಾಡಿರಿ ಎಂದು ಹೇಳಿದರು.
ಪ್ರತಿ ವರ್ಷದಂತೆ ಶ್ರೀಶೈಲ ಜಾತ್ರಾ ಯಾತ್ರಿಕರು ಬಂದು ೩-೪ ದಿನ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡು ಕಂಬಿ ಮಲ್ಲಯ್ಯನ ಜೊತೆ ಗ್ರಾಮ ಪ್ರವೇಶಿಸುವುದು ವಾಡಿಕೆ ಆದರೆ ಕರೋನಾ ಹರಡುವ ಬೀತಿಯಿಂದ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಯಾತ್ರಿಕರಿಗೆ ತಿಳಿಹೇಳಿ ತಮ್ಮ ತಮ್ಮ ಮನೆಗಳಿಗೆ ಕಳುಹಿಸಲಾಯಿತು.