ಜನತಾ ಕರ್ಪ್ಯೂಗೆ ಚಿಕ್ಕೋಡಿಯಲ್ಲಿ ವ್ಯಾಪಕ ಬೆಂಬಲ

ಚಿಕ್ಕೋಡಿ : ಮಹಾ ಹೆಮಾರಿಮಾರಿಯಾಗಿ ಕಾಡುತಗತಿರುವ ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿರುವ ಜನತಾ ಕರ್ಪ್ಯೂ ಚಿಕ್ಕೋಡಿಯಲ್ಲಿ ವ್ಯಾಪಕ   ಬೆಂಬಲ ವ್ಯಕ್ತವಾಗಿದೆ.
ಜೀವನಾವಶ್ಯಕ ಸೇವೆಗಳಾದ ಆಸ್ಪತ್ರೆ, ಔಷಧಿ ಮಳಿಗೆಗಳು ಕಾರ್ಯನಿರ್ಹಣೆ ಕಂಡು ಬಂತು.
ಹಾಲು, ದಿನಪತ್ರಿಕೆ ಪೂರೈಕೆ ಎಂದಿನಂತೆ ಸರಬರಾಜ ಇದ್ದವು. ಇವುಗಳನ್ನು ಹೊರತುಪಡಿಸಿದರೆ ಬಸ್, ಆಟೊ, ಅಂಗಡಿ ಮುಂಗಟ್ಟುಗಳನ್ನು ಜನರು ಸ್ವಯಂ ಪ್ರೇರಿತರಾಗಿ ಬಂದ ಮಾಡಿ , ಜನತಾ ಕರ್ಪೂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆ, ಹೋಟೆಲ್‍ಗಳು, ಮದ್ಯದಂಗಡಿ, ಬಾರ್‍ಗಳನ್ನು ಸಂಪೂರ್ಣ ಬಂದ್ ಮಾಡಿ ಜನತಾ ಕಫ್ರ್ಯೂಗೆ  ಜನತೆ ಸಂಪೂಣವಾಗಿ ಬೆಂಬಲ ವನ್ನು ನೀಡಿದರು
ಭಾನುವಾರವಾಗಿರುವುದರಿಂದ ಸಹಜವಾಗಿ ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜು, ಬ್ಯಾಂಕ್ ಹಾಗೂ ಇತರ ಖಾಸಗಿ ಕಂಪನಿಗಳ ಕಚೇರಿಗಳು ಬಂದ್ ಆಗಿದ್ದವು. ಜನರ ಸಂಚಾರವು ಬೆಳಗಿನಿಂದ ಸಂಜೆವರೆಗೂ ಇರಲಿಲ್ಲ. ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಜನರೇ ಸ್ವಯಂ ಪ್ರೇರಿತವಾಗಿ ಕಫ್ರ್ಯೂ ಹೇರಿಕೊಳ್ಳಬೇಕು. ಎಂಬಂತೆ ಚಿಕ್ಕೋಡಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಬಾನುವಾರ ಎಲ್ಲ ಅಂಗಡಿ,ಮುಗ್ಗಟ್ಟುಗಳನ್ನು ಬಂದ ಮಾಡಲಾಗಿತ್ತು. ಸಾರ್ವಜನಿಕರೂ ಸಹ ಯಾರೂ ಮೆನಯಿಂದ ಹೊರಗೆ ಬಂದಿರುವುದು ಕಂಡು ಬಂದಿಲ್ಲ.  
ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆ ಬಿಟ್ಟು ಹೊರಗೆ ಬರಬಾರದು. ವೈದ್ಯಕೀಯ ಸೇವೆ ಸೇರಿದಂತೆ ಇತರ ಅವಶ್ಯಕ ಸೇವೆಗಳನ್ನು ಒದಗಿಸುವವರು ಮಾತ್ರ ಸಂಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು ಇದಕ್ಕೆ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಾನುವಾರ ಬೆಳಿಗ್ಗೆಯಿಂದಲೇ ಬಸ್ ಸಂಚಾರ ಬಂದ ಮಾಡಲಾಗಿತ್ತು. ಬಹುತೇಕ ಜನರು ಮನೆ ಬಿಟ್ಟು ಹೊರ ಬರಲಿಲ್ಲ.ಬಹಳಷ್ಟು ಜನರು ಟವಿ ನೋಡತ್ತಾ ಮನೆಯಲ್ಲಿ ಕುಳಿತುಕೊಂಡಿದ್ದರು.ಮಹಾ ಮಾರಿ ಕೊರೊನಾಗೆ ತಡೆಗಟ್ಟಲು ಚಿಕ್ಕೋಡಿ ಪಟ್ಟಣದ ಜನರು ಸುತ್ತಮುತ್ತಲಿನ ಬೆಂಬಲ ಸೂಚಿಸಿದ್ದಾರೆ.
Share
WhatsApp
Follow by Email